Film News

ನನಗೆ ಅದು ಮೊದಲೇ ಗೊತ್ತು ಎಂದ ಸಮಂತಾ, ನಾಗಚೈತನ್ಯ ಹಿರೋಯಿನ್ ಬಗ್ಗೆ ಸಮಂತಾ ಕಾಮೆಂಟ್ಸ್?

ಸ್ಟಾರ್‍ ನಟಿ ಸಮಂತಾ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಂದ ಒಂದು ವರ್ಷ ಬ್ರೇಕ್ ಪಡೆದುಕೊಂಡಿದ್ದರು. ಸದ್ಯ ಶೀಘ್ರದಲ್ಲೇ ತಾನು ಮತ್ತೆ ಸಿನೆಮಾಗಳಲ್ಲಿ ನಟಿಸುವುದಾಗಿ ಕೆಲವು ದಿನಗಳ ಹಿಂದೆಯಷ್ಟೆ ಸಮಂತಾ ಹೇಳಿದ್ದರು. ನಟಿ ಸಮಂತಾ ಮಾಜಿ ಪತಿ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಸಿನೆಮಾಗಳು ಹಾಗೂ ರಿಯಲ್ ಲೈಫ್ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದೀಗ ಸಮಂತಾ ಓರ್ವ ನಟಿಯ ಬಗ್ಗೆ ಊಹಿಸಿದ ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಸದ್ಯ ಮಯೋಸೈಟೀಸ್ ಎಂಬ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗುತ್ತಿದ್ದಾರೆ. ಈ ವ್ಯಾಧಿಯಿಂದ ಆಕೆ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ಸುಮಾರು ತಿಂಗಳುಗಳ ಕಾಲ ಆಕೆ ಅಜ್ಞಾತದಲ್ಲಿ ಸಹ ಇದ್ದರು. ಈ ವ್ಯಾದಿಗೆ ಚಿಕಿತ್ಸೆ ಪಡೆದುಕೊಳ್ಳಲು ವಿದೇಶಗಳಲ್ಲಿ ಚಿಕಿತ್ಸೆ ಸಹ ಪಡೆದುಕೊಂಡರು. ಈ ಕಾರಣದಿಂದ ಆಕೆ ಸಿನೆಮಾಗಳಲ್ಲಿ ಸಹ ನಟಿಸುವುದು ಕಡಿಮೆಯಾಗಿತ್ತು. ಕಳೆದ ವರ್ಷ ಆಕೆ ಶಾಕುಂತಲಂ, ಖುಷಿ ಎರಡೇ ಸಿನೆಮಾಗಳು ರಿಲೀಸ್ ಆಗಿದ್ದು, ಶಾಕುಂತಲಂ ಸಿನೆಮಾ ಆಲ್ ಟೈಂ ಡಿಜಾಸ್ಟರ್‍ ಆಗಿದ್ದು, ಖುಷಿ ಕೊಂಚ ಸಕ್ಸಸ್ ಕಂಡಿತ್ತು. ಇನ್ನೂ ಆಕೆ ಅಭಿನಯದ ಸಿಟಾಡೆಲ್ ವೆಬ್ ಸಿರೀಸ್ ನಲ್ಲೂ ಸಹ ನಟಿಸಿದ್ದು, ಈ ಸಿರೀಸ್ ಸಹ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ.

ಇನ್ನೂ ಇತ್ತೀಚಿಗೆ ಸಮಂತಾ ಸಂದರ್ಶನವೊಂದರಲ್ಲಿ ನಾಗಚೈತನ್ಯ ರಿಂದ ವಿಚ್ಚೇದನ ಪಡೆದುಕೊಂಡ ಬಳಿಕ ಒತ್ತಡ ಹೆಚ್ಚಾಗಿ ಅನಾರೋಗ್ಯಕ್ಕೆ ಸಮಸ್ಯೆಗಳು ಎದುರಾಗಿದೆ ಎಂದು ಹೇಳಿದ್ದರು. ಇದೀಗ ಆಕೆ ನಟಿಯೊಬ್ಬರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್‍ ನಟಿ ಮತ್ತೋರ್ವ ಸ್ಟಾರ್‍ ನಟಿಯ ಬಗ್ಗೆ ಮಾತನಾಡುವುದು, ಹೋಗಳುವುದು ತುಂಭಾನೆ ವಿರಳ. ಇದೀಗ ಸಮಂತಾ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಆಕೆ ಮಾತನಾಡುತ್ತಾ ಸಾಯಿ ಪಲ್ಲವಿ ಡ್ಯಾನ್ಸ್ ಬಗ್ಗೆ ಮಾತನಾಡಿದ್ದಾರೆ. ಸಾಯಿ ಪಲ್ಲವಿ ದೊಡ್ಡ ಡ್ಯಾನ್ಸರ್‍ ಅಂತ ನನಗೆ ಮೊದಲೆ ಗೊತ್ತು. ಈ ಹಿಂದೆ ಸಾಯಿ ಪಲ್ಲವಿ ಡ್ಯಾನ್ಸ್ ಪ್ರದರ್ಶನ ಕೊಟ್ಟಾಗ ನೋಡಿದ್ದೇನೆ. ನಾನಾದರೇ ನೋಡುವುದನ್ನು ನಿಲ್ಲಿಸಲೇ ಇಲ್ಲ ಎಂದು ಸಮಂತಾ ಹೇಳಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಇನ್ನೂ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಕಾಂಬಿನೇಷನ್ ನಲ್ಲಿ ತಂಡೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಜೋಡಿಯ ಕಾಂಬಿನೇಷನ್ ನಲ್ಲಿ ಲವ್ ಸ್ಟೋರಿ ಎಂಬ ಸಿನೆಮಾ ಸಹ ಬಂದಿತ್ತು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿದೆ. ಇದೀಗ ತಂಡೇಲ್ ಸಿನೆಮಾದ ಮೇಲೂ ಸಹ ಭಾರಿ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

Most Popular

To Top