ನಂದಮೂರಿ ಬಾಲಕೃಷ್ಣ ರವರ ಬಗ್ಗೆ ಸಂಚಲನಾತ್ಮಕ ಆರೋಪ ಮಾಡಿದ ನಿರ್ದೇಶಕ, ಬಾಲಯ್ಯನನ್ನು ಸೈಕೊ ಎಂದ ಡೈರೆಕ್ಟರ್….!

Follow Us :

ಟಾಲಿವುಡ್ ನ ನಂದಮೂರಿ ಕುಟುಂಬದ ಸ್ಟಾರ್‍ ನಟ ಬಾಲಕೃಷ್ಣ ಅತ್ತ ಸಿನೆಮಾಗಳು ಹಾಗೂ ರಾಜಕೀಯದಲ್ಲೂ ಸಕ್ರೀಯರಾಗಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಆಗಾಗ ಬಾಲಕೃಷ್ಣ ವರ್ತನೆಯ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ ಸನ್ನಿವೇಶಗಳು ಇವೆ. ಸಾರ್ವಜನಿಕ ಪ್ರದೇಶದಲ್ಲಿ ಅಭಿಮಾನಿಗಳೊಂದಿಗೆ ಅವರು ನಡೆದುಕೊಂಡ ರೀತಿ, ಕೆಲವೊಂದು ಸಮಯದಲ್ಲಿ ಅವರ ಹೇಳಿಕೆಗಳು ಅನೇಕ ವಿವಾದಗಳಿಗೆ ಕಾರಣವಾಗಿದೆ. ಇದೀಗ ಸ್ಟಾರ್‍ ಡೈರೆಕ್ಟರ್‍ ಓರ್ವ ನಂದಮೂರಿ ಬಾಲಕೃಷ್ಣ ರವರನ್ನು ಸೈಕೊ ಎಂದು ಹೇಳಿದ್ದು, ಈ ವಿಚಾರ ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಯಾಗಿದೆ.

ಕಾಲಿವುಡ್ ಸಿನಿರಂಗದ ಸ್ಟಾರ್‍ ನಿರ್ದೇಶಕರಲ್ಲಿ ಕೆ.ಎಸ್.ರವಿಕುಮಾರ್‍ ಒಬ್ಬರಾಗಿದ್ದಾರೆ. ಸೂಪರ್‍ ಸ್ಟಾರ್‍ ರಜನಿಕಾಂತ್, ಲೋಕನಾಯಕ ಕಮಲ್ ಹಾಸನ್ ರವರಂತ ಸ್ಟಾರ್‍ ಗಳ ಜೊತೆಗೆ ಅವರು ಬ್ಲಾಕ್ ಬ್ಲಸ್ಟರ್‍ ಸಿನೆಮಾಗಳನ್ನು ನೀಡಿದ್ದಾರೆ. ಜೊತೆಗೆ ನಂದಮೂರಿ ಬಾಲಕೃಷ್ಣ ರವರ ಜೊತೆ ಸಿನೆಮಾಗಳನ್ನು ಸಹ ಮಾಡಿದ್ದಾರೆ. ಇದೇ ನಿರ್ದೇಶಕ ಇದೀಗ ಬಾಲಕೃಷ್ಣ ರವರ ಬಗ್ಗೆ ಕೆಲವೊಂದು ಸಂಚಲನಾತ್ಮಕ ಆರೋಪಗಳನ್ನು ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಬಾಲಕೃಷ್ಣ ರವರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಒಂದು ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ. ಸಾಗರ ಸಂಗಮಂ ಸಿನೆಮಾದ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಈ ಸಮಯದಲ್ಲಿ ನಂದಮೂರಿ ತಾರಕರಾಮಾರಾವ್ ಮುಖ್ಯಮಂತ್ರಿಯಾಗಿದ್ದರು. ಎನ್.ಟಿ.ಆರ್‍ ರವರು ತಮ್ಮ ಮಗನಾದ ಬಾಲಕೃಷ್ಣ ಜೊತೆಗೆ ಸಿನೆಮಾ ಒಂದನ್ನು ಮಾಡಿ ಎಂದು ಕೆ.ವಿಶ್ವನಾಥ್ ರವರನ್ನು ಕೋರಿದ್ದರಂತೆ.

ಈ ಕಾರಣದಿಂದ ಜನನಿ ಜನ್ಮಭೂಮಿ ಎಂಬ ಟೈಟಲ್ ನಡಿ ಕೆ.ವಿಶ್ವನಾಥ್ ಬಾಲಕೃಷ್ಣ ರವರ ಜೊತೆ ಸಿನೆಮಾ ಮಾಡಿದ್ದಾರೆ. ಈ ಸಿನೆಮಾಗೆ ಅಸೋಸಿಯೇಟ್ ನಿರ್ದೇಶಕರಾಗಿ ಕೆ.ಎಸ್. ರವಿಕುಮಾರ್‍ ಕೆಲಸ ಮಾಡಿದ್ದರಂತೆ. ಈ ಸಮಯದಲ್ಲಿ ಬಾಲಕೃಷ್ಣರವರ ಜೊತೆಗೆ ಪರಿಚಯವಾಗಿತ್ತಂತೆ. ಈ ಸಿನೆಮಾದ ಶೂಟಿಂಗ್ ಸಹ ಕೆ.ಎಸ್.ರವಿಕುಮಾರ್‍ ರವರ ಊರಿನ ಹತ್ತಿರದಲ್ಲೆ ನಡೆದಿದ್ದತ್ತಂತೆ. ವಯಸ್ಸಿನಲ್ಲಿದ್ದ ಬಾಲಕೃಷ್ಣ ಮೊದಲಿಗೆ ತುಂಬಾ ಖುಷಿಯಿಂದ ಇರುತ್ತಿದ್ದರಂತೆ. ಆದರೆ ದಿನ ಕಳೆದಂತೆ ಬಾಲಕೃಷ್ಣ ಸೈಕೋ ಮಾದರಿಯಲ್ಲಿ ತಯರಾದರಂತೆ. ಈ ಸಿನೆಮಾದ ಶೂಟಿಂಗ್ ಸಮಯದಲ್ಲಿ ಓರ್ವ ಅಭಿಮಾನಿಯನ್ನು ಬಾಲಕೃಷ್ಣ ಹೊಡೆದಿದ್ದರಂತೆ. ಒಂದು ದಿನ ಕೆಲವು ಅಭಿಮಾನಿಗಳು ಬಂದಿದ್ದರಂತೆ. ಈ ಸಮಯದಲ್ಲಿ ಬಾಲಕೃಷ್ಣ ಜೊತೆಗೆ ಪೊಟೋ ತೆಗೆಸಿಕೊಳ್ಳಲು ಅವರ ಪಕ್ಕದಲ್ಲಿ ನಿಂತಿದ್ದರಂತೆ. ಅವರಲ್ಲೊಬ್ಬ ಬಾಲಕೃಷ್ಣ ಭುಜದ ಮೇಲೆ ಕೈ ಹಾಕಿದ್ದನಂತೆ. ಕೂಡಲೇ ಆ ಅಭಿಮಾನಿಯನ್ನು ಬಾಲಕೃಷ್ಣ ಹಿಗ್ಗಾಮುಗ್ಗಾ ತಳಿಸಿದ್ದರಂತೆ. ಈ ಘಟನೆಯ ಬಳಿಕ ಬಾಲಕೃಷ್ಣ ಮೇಲೆ ನನಗೆ ಬೇಸರವಾಯ್ತು. ಬಾಲಯ್ಯ ಸೈಕೋ, ಸಂಸ್ಕಾರ ಇಲ್ಲದ ವ್ಯಕ್ತಿ. ಪುನಃ ಆ ಅಭಿಮಾನಿ ಬಾಲಕೃಷ್ಣರನ್ನು ಹೊಡೆದರೇ ನಿಮ್ಮ ಮರ್ಯಾದೆ ಏನಾಗಬೇಕು ಎಂದು ಕೆ.ಎಸ್.ರವಿಕುಮಾರ್‍ ತೀವ್ರ ಅಸಹನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.