ನಾಗಚೈತನ್ಯ ಜೊತೆಗೆ ನಟಿಸೋಕೆ ನೋ ಎಂದ ಬಾಲಿವುಡ್ ಸ್ಟಾರ್ ಕಿಡ್, ಆತನನ್ನು ನೋಡಿದ್ರೆ ಆ ಫೀಲ್ ಆಗುತ್ತೆ ಎಂದ ನಟಿ….!

Follow Us :

ತೆಲುಗು ಸಿನಿರಂಗದ ಅಕ್ಕಿನೇನಿ ಕುಟುಂಬದ ಸ್ಟಾರ್‍ ನಟ ನಾಗಚೈತನ್ಯ ತನ್ನದೇ ಆದ ಇಮೇಜ್ ಸೃಷ್ಟಿ ಮಾಡಿಕೊಂಡಿದ್ದಾರೆ. ಏಮಾಯಾ ಚೇಸ್ಯಾವೆ ಎಂಬ ಸಿನೆಮಾದ ಮೂಲಕ ಮೊದಲ ಹಿಟ್ ಪಡೆದುಕೊಂಡ ನಾಗಚೈತನ್ಯ ಬಳಿಕ 100% ಲವ್, ಮನಂ, ಪ್ರೇಮಂ, ಮಜಿಲಿ, ಲವ್ ಸ್ಟೋರಿ ಮೊದಲಾದ ಹಿಟ್ ಸಿನೆಮಾಗಳ ಮೂಲಕ ಪ್ಯಾಪುಲರ್‍ ಆದರು. ಆದರೆ ಅವರ ಕೆರಿಯರ್‍ ನಲ್ಲಿ ಒಂದೂ ಬ್ಲಾಕ್ ಬ್ಲಸ್ಟರ್‍ ಸಿನೆಮಾ ಇಲ್ಲ. ಅದರ ಜೊತೆಗೆ ಅವರ ಅನೇಕ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಇದೀಗ ಅವರ ಜೊತೆಗೆ ನಟಿಸೋಕೆ ಬಾಲಿವುಡ್ ಸ್ಟಾರ್‍ ಕಿಡ್ ಒಪ್ಪಲಿಲ್ಲ, ಆತನನ್ನು ನೋಡಿದರೇ ಆ ತರ ಫೀಲ್ ಆಗುತ್ತೆ ಎಂದು ರಿಜೆಕ್ಟ್ ಮಾಡಿದ್ದಾರಂತೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ನಟ ಅಕ್ಕಿನೇನಿ ನಾಗಚೈತನ್ಯ ರವರು ಇತ್ತೀಚಿಗೆ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳು ಪ್ಲಾಪ್ ಆದವು. ಥ್ಯಾಂಕ್ಯೂ, ಕಸ್ಟಡಿ ಸಿನೆಮಾಗಳು ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಆದರೆ ಕೊನೆಯದಾಗಿ ಅವರು ಕಾಣಿಸಿಕೊಂಡ ಧೂತ ಎಂಬ ವೆಬ್ ಸಿರೀಸ್ ಮಾತ್ರ ಒಳ್ಳೆಯ ಸಕ್ಸಸ್ ಕಂಡುಕೊಡಿತ್ತು. ಸದ್ಯ ನಾಗಚೈತನ್ಯ ತಂಡೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ ನಟಿಸುತ್ತಿದ್ದಾರೆ. ಈ ಸಿನೆಮಾ ಎಮೋಷನಲ್ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಗೀತಾ ಆರ್ಟ್ಸ್ ಬ್ಯಾನರ್‍ ನಡಿ ಈ ಸಿನೆಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರಲಿದೆ. ಚಂದು ಮುಂಡೇಟಿ ಈ ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ ಎನ್ನಲಾಗಿದೆ.

ಈ ನಡುವೆ ನಾಗಚೈತನ್ಯ ರನ್ನು ನೋಡಿದರೇ ಸಹೋದರ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಆತನೊಂದಿಗೆ ನಟಿಸೋಕೆ ನೋ ಎಂದು ಹೇಳಿದ್ದರಂತೆ. ಆಕೆ ಬೇರೆ ಯಾರೂ ಅಲ್ಲ ಸ್ಟಾರ್‍ ಕಿಡ್ ಸಾರಾ ಅಲಿಖಾನ್. ಬಾಲಿವುಡ್ ಸ್ಟಾರ್‍ ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಈಗಾಗಲೇ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ನಾಗಚೈತನ್ಯ ಸಿನೆಮಾದಲ್ಲಿ ನಟಿಸೋಕೆ ಹಿರೋಯಿನ್ ಆಫರ್‍ ಸಾರಾ ಅಲಿಖಾನ್ ಗೆ ಕೊಟ್ಟಿದ್ದರಂತೆ.  ಅದಕ್ಕೆ ಆಕೆ ನೇರವಾಗಿ ನೋ ಎಂದು ಹೇಳಿದ್ದರಂತೆ. ನಾಗಚೈತನ್ಯರನ್ನು ನೋಡಿದರೇ ನನಗೆ ಸಹೋದರ ಭಾವನೆ ಮೂಡುತ್ತದೆ. ಆತನೊಂದಿಗೆ ರೊಮ್ಯಾನ್ಸ್ ಮಾಡೋಕೆ ಕಷ್ಟ ಎಂದು ಆಫರ್‍ ರಿಜೆಕ್ಟ್ ಮಾಡಿದ್ದರಂತೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.