Film News

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಎತ್ತರದ ಬಗ್ಗೆ ಕಾಮೆಂಟ್ ಮಾಡಿದ ಸ್ಟಾರ್ ಹಿರೋಯಿನ್, ಯಾರು ಗೊತ್ತಾ?

ತೆಲುಗು ಸಿನಿರಂಗದ ಮೆಗಾ ಕುಟುಂಬದ ಸ್ಟಾರ್ ನಟ ರಾಮ್ ಚರಣ್ RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆಗಿದ್ದಾರೆ. RRR ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಬಳಿಕ ಈ ಸಿನೆಮಾ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ತೆರೆಕಂಡ ಹಿನ್ನೆಲೆಯಲ್ಲಿ ರಾಮ್ ಚರಣ್ ಗ್ಲೋಬಲ್ ಸ್ಟಾರ್‍ ಆದರು. ಅದರ ಜೊತೆಗೆ ಈ ಸಿನೆಮಾದ ನಾಟು ನಾಟು ಹಾಡು ಆಸ್ಕಾರ್ ಪಡೆದುಕೊಂಡಿದ್ದು, ಅವರ ಕ್ರೇಜ್ ಮತಷ್ಟು ಹೆಚ್ಚಾಯಿತು. ಅನೇಕ ಹಾಲಿವುಡ್ ನಿರ್ದೇಶಕರೂ ಸಹ ಚರಣ್ ಜೊತೆಗೆ ಸಿನೆಮಾ ಮಾಡಲು ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಗ್ಲೋಬಲ್ ಸ್ಟಾರ್‍ ಬಗ್ಗೆ ತೆಲುಗು ಸ್ಟಾರ್ ನಟಿಯೊಬ್ಬರು ಆತನ ಎತ್ತರದ ಬಗ್ಗೆ ಕಾಮೆಂಟ್ ಮಾಡಿದ್ದರಂತೆ ಆ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ,

ಸೌತ್ ಸಿನಿರಂಗದಲ್ಲಿ ರಾಮ್ ಚರಣ್ ಭಾರಿ ಫಾಲೋಯಿಂಗ್ ಹೊಂದಿದ್ದಾರೆ. ಮೆಗಾ ಕುಟುಂಬದ ಚಿರಂಜೀವಿ ಬಳಿಕ ಪವನ್ ಕಲ್ಯಾಣ್, ಅವರ ಬಳಿಕ ರಾಮ್ ಚರಣ್ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಜೊತೆಗೆ ಬೇರೆ ಸ್ಟಾರ್‍ ನಟರ ಅಭಿಮಾನಿಗಳೂ ಸಹ ರಾಮ್ ಚರಣ್ ಎಂದರೇ ತುಂಬಾ ಅಭಿಮಾನಿಸುತ್ತಾರೆ. ರಾಮ್ ಚರಣ್ ಹ್ಯುಮಾನಿಟಿ ನೋಡಿ ಎಲ್ಲರೂ ಆತನನ್ನು ಪ್ರೀತಿಯಿಂದ ಅಭಿಮಾನಿಸುತ್ತಾರೆ. ಈ ಹಿಂದೆ ರಾಮ್ ಚರಣ್ ರವರ ಎತ್ತರದ ಬಗ್ಗೆ ಕಾಮೆಂಟ್ ಮಾಡಿದ್ದರಂತೆ. ಆತ ಕುಳ್ಳ ಎಂದು ಸ್ಟಾರ್‍ ನಟಿ ಹೇಳಿ ಸಿನೆಮಾಗೆ ರಿಜೆಕ್ಟ್ ಮಾಡಿದ್ದರಂತೆ. ಆ ನಟಿ ಬೇರೆ ಯಾರೂ ಅಲ್ಲ ಟಾಲಿವುಡ್ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ. ರಾಮ್ ಚರಣ್ ರವರನ್ನು ವಿಮರ್ಶೆ ಮಾಡುವ ಉದ್ದೇಶದಿಂದ ಅನುಷ್ಕಾ ಈ ಕಾಮೆಂಟ್ ಮಾಡಿಲ್ಲ.

ರಾಮ್ ಚರಣ್ ರವರಿಗೆ ಭಾರಿ ಹಿಟ್ ತಂದುಕೊಟ್ಟ ಮಗಧೀರ ಸಿನೆಮಾದ ಆಡಿಷನ್ ಸಮಯದಲ್ಲಿ ನಟಿಯ ಪಾತ್ರಕ್ಕಾಗಿ ಅನುಷ್ಕಾ ರವರನ್ನು ನಿರ್ದೇಶಕ ರಾಜಮೌಳಿ ಸಂಪರ್ಕ ಮಾಡಿದ್ದರಂತೆ. ಈ ವೇಳೆ ಅನುಷ್ಕಾ ಚರಣ್ ನನ್ನ ಪಕ್ಕ ನಿಂತರೆ ತುಂಬಾ ಕುಳ್ಳನಾಗಿರುತ್ತಾನೆ. ಜೊತೆಗೆ ನಾನು ಆತನು ಅಕ್ಕ ತಮ್ಮ ನಂತೆ ಕಾಣಿಸುತ್ತೇವೆ ಎಂದು ಈ ಸಿನೆಮಾದ ಆಫರ್‍ ಅನ್ನು ರಿಜೆಕ್ಟ್ ಮಾಡಿದ್ದರಂತೆ. ಇನ್ನೂ ಅನುಷ್ಕಾ ರಾಮ್ ಚರಣ್ ರವರನ್ನು ವಿಮರ್ಶೆ ಮಾಡುವ ನಿಟ್ಟಿನಲ್ಲಿ ಎತ್ತರ ಕಮ್ಮಿ ಎಂದು ಹೇಳಿಲ್ಲ. ಬದಲಿಗೆ ಸಿನೆಮಾದಲ್ಲಿ ಜೋಡಿ ಸರಿಯಾಗಿರಲ್ಲ ಎಂದು ಹೇಳಿದ್ದಾರೆ ಅಷ್ಟೆ. ಇನೂ ಈ ಹಿಂದೆ ರಾಮ್ ಚರಣ್ ಸಹ ಅನೇಕ ಬಾರಿ ತಾನು ಹೈಟ್ ಕಡಿಮೆ ಇದಿದ್ದಾಗಿ ಹೇಳಿದ್ದಾರೆ.

ಈ ಹಿಂದೆ ರಾಮ್ ಚರಣ್ ಎತ್ತರದ ಬಗ್ಗೆ ಮಾತನಾಡಿದ್ದಾರೆ. ನಾನು ಹೈಟ್ ಕಡಿಮೆ ಇದ್ದೆ. ಸ್ಕೂಲ್ ನಲ್ಲಿದ್ದಾಗ ರಾಣಾ ನನ್ನ ಮುಂದೆ ಕುಳಿತುಕೊಳ್ಳುತ್ತಿದ್ದ. ಅದರಿಂದ ನನಗೆ ಬೋರ್ಡ್ ಮೇಲೆ ಟೀಚರ್‍ ಏನು ಬರೆಯುತ್ತಾರೆ ಎಂಬುದು ಕಾಣಿಸುತ್ತಿರಲಿಲ್ಲ ಎಂದು ಕಾಮಿಡಿಯಾಗಿ ಹೇಳಿಕೊಂಡಿದ್ದರು. ಇನ್ನೂ RRR ಸಿನೆಮಾದ ಬಳಿಕ ರಾಮ್ ಚರಣ್ ಖ್ಯಾತ ನಿರ್ದೇಶಕ ಶಂಕರ್‍ ನಿರ್ದೇಶನದಲ್ಲಿ ಗೇಮ್ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಪೋಸ್ಟರ್‍ ಸಹ ನಿನ್ನೆ ರಾಮ್ ಚರಣ್ ಹುಟ್ಟುಹಬ್ಬದ ಅಂಗವಾಗಿ ರಿಲೀಸ್ ಮಾಡಲಾಗಿದೆ. ಈ ಪೊಸ್ಟರ್‍ ಮೂಲಕ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.

Most Popular

To Top