Film News

ರೆಟ್ರೋ ಲುಕ್ ನಲ್ಲಿ ಹಾಟ್ ಪೋಸ್ ಕೊಟ್ಟ ಮೆಗಾ ಡಾಟರ್ ನಿಹಾರಿಕಾ, ವೈರಲ್ ಆದ ಪೊಟೋಸ್….!

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ನಟಿಯಾಗಿ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣದೆ ವಿಫಲರಾದರು. ಬಳಿಕ ವೆಬ್ ಸಿರೀಸ್ ಹಾಗೂ ನಿರ್ಮಾಣದತ್ತ ಮುಖ ಮಾಡಿದರು. ಇನ್ನೂ ಆಕೆ ಸಿನೆಮಾಗಳಲ್ಲಿ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಂಡಿದ್ದರು. ಟ್ರೆಂಡಿಯಾಗಿ ಕಾಣಿಸಕೊಂಡರು ಸಹ ಅಷ್ಟೊಂದು ಗ್ಲಾಮರ್‍ ಶೋ ಮಾಡಿರಲಿಲ್ಲ. ಮದುವೆಯಾದ ಬಲಿಕ ಆಕೆ ಹಾಟ್ ಪೊಟೋಶೂಟ್ಸ್ ಹಂಚಿಕೊಂಡರು. ಬಳಿಕ ಸುಮ್ಮನಾದರೂ. ಆದರೆ ಇದೀಗ ಮತ್ತೆ ಗ್ಲಾಮರ್‍ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ನಟಿ ನಿಹಾರಿಕಾ ಕೊಣಿದೆಲಾ ಸಿನೆಮಾಗಳಿಗಿಂತ ವೈಯುಕ್ತಿಕ ವಿಚಾರಗಳಿಂದ ಹೆಚ್ಚು ಸುದ್ದಿಯಾದರು. ಸುಮಾರು ದಿನಗಳ ಹಿಂದೆ ಆಕೆ ಪಬ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದರು. ಕೆಲವು ದಿನಗಳಿಂದ ನಿಹಾರಿಕಾ ಹಾಗೂ ಚೈತನ್ಯ ಜೊನ್ನಲ ಗಡ್ಡ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ರೂಮರ್‍ ಬಿರುಗಾಳಿಯಂತೆ ಹರಿದಾಡುತ್ತಿದೆ. ಚೈತನ್ಯ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಮದುವೆಯ ಪೊಟೋಗಳನ್ನು ಡಿಲೀಟ್ ಮಾಡಿದ್ದು, ಒಬ್ಬರೊನ್ನಬ್ಬರು ಸೋಷಿಯಲ್ ಮಿಡಿಯಾದಲ್ಲಿ ಅನ್ ಫಾಲೋ ಮಾಡಿದ್ದು, ಈ ರೂಮರ್‍ ಗಳಿಗೆ ಮತಷ್ಟು ಬಲ ತಂದುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ನಿಹಾರಿಕಾ ಏನೆ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡರೂ ಸಹ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಇದೀಗ ಆಕೆ ಬ್ಲಾಕ್ ಅಂಡ್ ವೈಟ್ ಮೋಡ್ ನಲ್ಲಿ  ಹಾಟ್ ಪೋಸ್ ಕೊಟ್ಟಿದ್ದಾರೆ.

ನಿಹಾರಿಕಾ ಕೆಂಪು ಬಣ್ಣದ ಸೀರೆಯನ್ನು ಧರಿಸಿ ರೆಟ್ರೋ ಲುಕ್ಸ್ ನಲ್ಲಿ ಮಾದಕ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಕಿಲ್ಲಿಂಗ್ ಲುಕ್ಸ್ ಇಂಟರ್‍ ನೆಟ್ ಶೇಕ್ ಮಾಡಿದೆ. ವಿರಹ ವೇದನೆಯನ್ನು ಅನುಭವಿಸುವಂತೆ ಮತ್ತೇರಿಸುವ ಲುಕ್ಸ್ ಕೊಟ್ಟಿದ್ದಾರೆ.  ನಿಹಾರಿಕಾ ತನ್ನಲ್ಲಿರುವ ಎಲ್ಲಾ ಗ್ಲಾಮರಸ್ ಕೋಣವನ್ನು ಈ ಪೊಟೋಗಳ ಮೂಲಕ ಹೊರಹಾಕಿದ್ದಾರೆ.  ಸದ್ಯ ನಿಹಾರಿಕಾ ಪೊಟೋಗಳು ಸೋಷಿಯಲ್ ಮಿಡಿಯಾಲ್ಲಿ ಸಖತ್ ಸದ್ದು ಮಾಡುತ್ತಿವೆ. ಇನ್ನೂ ವಿಚ್ಚೇದನದ ರೂಮರ್‍  ವೈರಲ್ ಆಗುತ್ತಿರುವ ಸಮಯದಲ್ಲಿ ನಿಹಾರಿಕಾ ಪೊಟೋಶೂಟ್ಸ್ ಸಖತ್ ವೈರಲ್ ಆಗುತ್ತಿವೆ.  ಇನ್ನೂ ಅಭಿಮಾನಿಗಳೂ ಸಹ ಈ ಪೊಟೋಗಳಿಗೆ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ವಿಂಟೇಜ್ ಲುಕ್ಸ್ ನಲ್ಲಿ ನಿಹಾರಿಕಾ ಸಖತ್ ಹಾಟ್, ಬ್ಲಾಕ್ ಅಂಡ್ ವೈಟ್  ನಲ್ಲಿ ಮತಷ್ಟು ಹಾಟ್ ಆಗಿದ್ದಾರೆ ಎಂದೂ, ನಿಹಾರಿಕಾ ಈಸ್ ಬ್ಯಾಕ್ ಎಂದು ಮತ್ತೆ ಕೆಲವರು ಕ್ಯೂಟ್ ಅಂಡ್ ಹಾಟ್ ಆಗಿ ಹೇಗೆ ಪೋಸ್ ಕೊಡುತ್ತಿದ್ದೀರಾ ಎಂದೂ ಸಹ ಕಾಮೆಂಟ್ ಗಳನ್ನು ಮಾಡುತ್ತಾ ಪೊಟೋಗಳನ್ನು ಸಖತ್ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸುಮಾರು ದಿನಗಳ ಬಳಿಕ ನಿಹಾರಿಕಾ ಈ ಮಾದರಿಯಲ್ಲಿ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಇನ್ನೂ ಏತಕ್ಕಾಗಿ ಆಕೆ ಈ ಪೊಟೋಶೂಟ್ಸ್ ಮಾಡಿದ್ದಾರೆ. ಯಾವುದಾದರೂ ಸಿನೆಮಾಗಾಗಿಯೇ ಅಥವಾ ಬೇರೆ ಏನಾದರೂ ಪ್ಲಾನ್ ಇದೆಯಾ ಎಂಬೆಲ್ಲಾ ಅನುಮಾನಗಳನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ನಿಹಾರಿಕಾ ಹಾಗೂ ಚೈತನ್ಯ ವಿಚ್ಚೇದನ ರೂಮರ್‍ ಸಹ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಆದರೆ ಈ ಬಗ್ಗೆ ಮೆಗಾ ಕುಟುಂಬದಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ.

Most Popular

To Top