Film News

ಮಂಚು ವಿಷ್ಣು ಜೊತೆಗೆ ನಡೆದ ಗಲಾಟೆಯ ಬಗ್ಗೆ ಮಂಚು ಮನೋಜ್ ರಿಯಾಕ್ಷನ್, ಆತ ಏನು ಹೇಳಿದ್ರು ಗೊತ್ತಾ?

ಕೆಲವು ದಿನಗಳಿಂದ ಟಾಲಿವುಡ್ ಸಿನಿರಂಗದ ಸೀನಿಯರ್‍ ನಟ ಮೋಹನ್ ಬಾಬು ರವರ ಪುತ್ರರಾದ ಮಂಚು ಮನೋಜ್ ಹಾಗೂ ಮಂಚು ವಿಷ್ಣು ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಮತಷ್ಟು ಬಲ ಕೊಡುವಂತೆ ಮಂಚು ಮನೋಜ್ ತನ್ನ ಟ್ವಿಟರ್‍ ನಲ್ಲಿ ಮಂಚು ವಿಷ್ಣು ಗಲಾಟೆ ಮಾಡುವಂತಹ ವಿಡಿಯೋ ಒಂದನ್ನು ಶೇರ್‍ ಮಾಡಿದ್ದರು. ಬಳಿಕ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದಂತೆ ಮೋಹನ್ ಬಾಬು ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ. ಬಳಿಕ ಮನೋಜ್ ಆ ವಿಡಿಯೋ ಸಹ ಡಿಲೀಟ್ ಮಾಡಿದ್ದರು. ಇದೀಗ ಈ ಬಗ್ಗೆ ಮನೋಜ್ ರಿಯಾಕ್ಷನ್ ಕೊಟ್ಟಿದ್ದಾರೆ.

ಮಂಚು ಕುಟುಂಬದ ಮೋಹನ್ ಬಾಬು ರವರ ಕುಟುಂಬದಲ್ಲಿ ಉಂಟಾದ ಗೊಂದಲಗಳು ಸಿನಿರಂಗ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚನೀಯ ವಿಚಾರವಾಗಿ ಸಖತ್ ವೈರಲ್ ಆಗುತ್ತಿದೆ. ಮನೋಜ್ ತನ್ನ ಟ್ವಿಟರ್‍ ನಲ್ಲಿ ಈ ವಿಡಿಯೋ ಶೇರ್‍ ಮಾಡಿದ್ದರು. ಮನೆಯೊಳಗೆ ಬಂದು ಈ ರೀತಿ ನಮ್ಮವರನ್ನು ಹೊಡೆಯುತ್ತಿರುತ್ತಾರೆ. ಇದು ನಮ್ಮ ಪರಿಸ್ಥಿತಿ ಎಂದು ವಿಡಿಯೋ ಶೇರ್‍ ಮಾಡಿದ್ದರು. ಆದರೆ ಮೋಹನ್ ಬಾಬು ಮನೋಜ್ ಗೆ ಬುದ್ದಿವಾದ ಹೇಳಿದ ಬಳಿಕ ಆ ವಿಡಿಯೋ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದ. ಆದರೆ ಆಗಾಗಲೇ ಆ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು. ಸಹೋದರರ ನಡುವೆ ದೊಡ್ಡ ಮಟ್ಟದಲ್ಲೇ ವಿಬೇದಗಳು ಹುಟ್ಟಿಕೊಂಡಿವೆ ಎಂದು ಆ ವಿಡಿಯೋ ಮೂಲಕ ಎಲ್ಲರೂ ಭಾವಿಸಿದ್ದರು.

ಇನ್ನೂ ಈ ಘಟನೆ ನಡೆದ ಬಳಿಕ ಮನೋಜ್ ಕೆಲವೊಂದು ಟ್ವೀಟ್ ಗಳನ್ನು ಮಾಡುತ್ತಿದ್ದರು. ಇದೀಗ ಮನೋಜ್ ಆ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಮುಂದೆ ಈ ವಿಚಾರದ ಬಗ್ಗೆ ನನ್ನನ್ನು ಏನು ಕೇಳಬೇಡಿ, ನಾನು ಹೊಸ ಜೀವನ ಆರಂಭಿಸಿದ್ದೇನೆ. ಎಲ್ಲರ ಆರ್ಶಿವಾದ ನನಗೆ ಬೇಕು, ನನಗೆ ಸಿನೆಮಾಗಳೇ ಜೀವನ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮನೋಜ್ ಹಂಚಿಕೊಂಡ ಗಲಾಟೆ ವಿಡಿಯೋ ಬಳಿಕ ಮನೋಜ್ ಏನೇ ಪೋಸ್ಟ್ ಮಾಡಿದರೂ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಇದೀಗ ಈ ವಿಚಾರ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಮಂಚು ಕುಟುಂಬದಲ್ಲಿ ನಡೆದಂತಹ ಗಲಾಟೆಗಳು ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿಮಾಡಿದೆ ಎನ್ನಬಹುದಾಗಿದೆ. ಈ ಹಿಂದೆ ಮಂಚು ವಿಷ್ಣು ಹಾಗೂ ಮನೋಜ್ ತುಂಬಾ ಅನ್ಯೋನ್ಯತೆಯಿಂದ ಇದ್ದರು. ಇನ್ನೂ ಅವರ ನಡುವೆ ಯಾವ ಕಾರಣದಿಂದ ವಿಬೇದಗಳು ಹುಟ್ಟಿಕೊಂಡಿವೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಮಂಚು ಕುಟುಂಬ ಈಗಾಗಲೇ ರಿಯಾಕ್ಷನ್ ಕೊಟ್ಟಿದೆ. ಪ್ರತಿಯೊಂದು ಕುಟುಂಬದಲ್ಲೂ ಇಂತಹ ಗಲಾಟೆಗಳು ನಡೆಯುತ್ತಿರುತ್ತವೆ. ಇದೇನೂ ದೊಡ್ಡದಲ್ಲ ಎಂದು ಹೇಳಿದ್ದರು.

Most Popular

To Top