Film News

ಬಾಲಕೃಷ್ಣರವರ NBK108 ಸಿನೆಮಾದಲ್ಲಿ ವಿಲನ್ ಆಗ ಆ ಬಾಲಿವುಡ್ ನಟಿಯಂತೆ?

ನಂದಮೂರಿ ಬಾಲಕೃಷ್ಣ ರವರ ಕೆರಿಯರ್‍ ನಲ್ಲಿ ಭಾರಿ ಗ್ರಾಸ್ ಕಲೆಕ್ಷನ್ ಮಾಡಿದ ಸಿನೆಮಾಗಳಲ್ಲಿ ಅಖಂಡ ಮೊದಲ ಸ್ಥಾನದಲ್ಲಿದೆ.  ಈ ಸಿನೆಮಾದ ಬಳಿಕ ಬಾಲಯ್ಯನವರ ಸಿನೆಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಬಾಲಕೃಷ್ಣ ರವರು ತಮ್ಮ ಮುಂದಿನ ಸಿನೆಮಾವನ್ನು ಖ್ಯಾತ ನಿರ್ದೇಶಕ ಅನೀಲ್ ರಾವಿಪೂಡಿ ಜೊತೆಗೆ ಮಾಡುತ್ತಿದ್ದಾರೆ. ಇನ್ನೂ ಈ ಸಿನೆಮಾಗಾಗಿ ಭಾರಿ ಪ್ಲಾನ್ ಸಹ ಮಾಡಿದ್ದಾರೆ. ಈಗಾಗಲೇ ಈ ಸಿನೆಮಾದ ಪ್ರೀ ಪ್ರೊಡಕ್ಷನ್ ಕೆಲಸಗಳೂ ಸಹ ಶುರುವಾಗಿದೆ. ಇದೀಗ ಈ ಸಿನೆಮಾದ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

ನಂದಮೂರಿ ಬಾಲಕೃಷ್ಣ ಹಾಗೂ ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ NBK108 ಸಿನೆಮಾ ಭಾರಿ ನಿರೀಕ್ಷೆಯನ್ನು ಹುಟ್ಟಿಸಿದೆ ಎನ್ನಬಹುದು. ಈ ಸಿನೆಮಾಗಾಗಿ ಅನೀಲ್ ರಾವಿಪೂಡಿ ರಾತ್ರಿ ಹಗಲು ಕಷ್ಟಪಟ್ಟು ಸ್ಕ್ರಿಪ್ಟ್ ಸಹ ಸಿದ್ದ ಮಾಡಿದ್ದಾರಂತೆ. ಇನ್ನೂ ಅದೇ ಮಾದರಿಯಲ್ಲಿ ಕಥೆಗೆ ಸ್ಯೂಟ್ ಆಗುವಂತಹ ನಟಿ ನಟರನ್ನೂ ಸಹ ಚಿತ್ರತಂಡ ಆಯ್ಕೆ ಮಾಡಿಕೊಳ್ಳುತ್ತಿದೆ. ಇನ್ನೂ ಈ ಸಿನೆಮಾದಲ್ಲಿ ಈಗಾಗಲೇ ಕಾಜಲ್ ಅಗರ್ವಾಲ್, ಶ್ರೀಲೀಲಾ ನಟಿಸುತ್ತಿರುವುದಾಗಿ ತಿಳಿದು ಬಂದಿದೆ. ಇದೀಗ ಈ ಸಿನೆಮಾದಲ್ಲಿ ಬಾಲಕೃಷ್ಣ ರವರನ್ನು ಎದುರು ಹಾಕಿಕೊಳ್ಳಲಿರುವ ವಿಲನ್ ಯಾರು ಎಂಬ ಕುತೂಹಲ ಸಹ ಮೂಡಿತ್ತು. ಇದೀಗ ಕೇಳಿಬರುತ್ತಿರುವ ಸುದ್ದಿಯೊಂದರ ಪ್ರಕಾರ ಬಾಲಿವುಡ್ ನ ಖ್ಯಾತ ನಟಿಯೊಬ್ಬರು ಈ ಸಿನೆಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಹೌದು ಬಾಲಕೃಷ್ಣ ರವರ NBK108 ಸಿನೆಮಾದಲ್ಲಿ ಬಾಲಿವುಡ್ ನಟಿಯೊಬ್ಬರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸುದ್ದಿ ಈ ಹಿಂದೆ ಯಾರೂ ಊಹಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಬಾಲಿವುಡ್ ಹಾಟ್ ಬ್ಯೂಟಿ ನೋರಾ ಫತೇಹಿ ಈ ಸಿನೆಮಾದಲ್ಲಿ ವಿಲನ್ ಆಗಿ ಬಾಲಕೃಷ್ಣರವರನ್ನು ಎದುರು ಹಾಕಿಕೊಳ್ಳಲಿದ್ದಾರಂತೆ. ಇನ್ನೂ ಈ ಬಗ್ಗೆ ಅನೀಲ್ ರಾವಿಪೂಡಿ ನೋರಾ ಫತೇಹಿಗೆ ಕಥೆಯನ್ನು ಸಹ ಹೇಳಿದ್ದು, ಆಕೆ ಸಹ ಪಾಸಿಟೀವ್ ರೆಸ್ಪಾನ್ಸ್ ಕೊಟ್ಟಿದ್ದಾರಂತೆ. ಇನ್ನೂ ಈ ಸಿನೆಮಾದಲ್ಲಿ ನೋರಾ ಫತೇಹಿ ಪಾತ್ರ ತುಂಬಾನೆ ಪವರ್‍ ಪುಲ್ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಸುದ್ದಿ ಟಾಲಿವುಡ್ ಅಂಗಳದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಬಾಲಕಯ್ಯನಿಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಈ ಸಿನೆಮಾಗೆ ತಮನ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಈ ಸಿನೆಮಾವನ್ನು ಸಾಹು ಗೋರಪಾಟಿ, ಹರೀಷ್ ಪದ್ದಿ ರವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಈ ಸಿನೆಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಸಿನೆಮಾವನ್ನು ದಸರಾ ಹಬ್ಬದ ಅಂಗವಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಸಹ ಮಾಡಿದೆ ಎನ್ನಲಾಗಿದೆ.

Most Popular

To Top