ಸ್ನೇಹಿತೆಯ ಮನೆಯಲ್ಲಿ ಕೆಜಿ ಬಂಗಾರ ಕಳ್ಳತನ ಮಾಡಿದ್ರಂತೆ ತೆಲುಗು ನಟಿ ಸೌಮ್ಯ ಶೆಟ್ಟಿ, ಕೇಳಿದ್ರ ಸೂಸೈಡ್ ಮಾಡಿಕೊಳ್ಳುವುದಾಗಿ ಬೆದರಿಕೆ…..!

Follow Us :

ಸದ್ಯ ಸಿನಿರಂಗದಲ್ಲಿ ತುಂಬಾನೆ ಪೈಪೋಟಿಯಿದೆ. ದಿನಕ್ಕೊಬ್ಬರು ನಟಿಯರು ಹುಟ್ಟಿಕೊಂಡು ಬರುತ್ತಿದ್ದಾರೆ. ಆದರೆ ಅನೇಕರು ಸರಿಯಾದ ಅವಕಾಶಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಈ ಸಾಲಿಗೆ ತೆಲುಗು ಮೂಲದ ನಟಿ ಸೌಮ್ಯ ಶೆಟ್ಟಿ ಸಹ ಒಬ್ಬರು ಎಂದು ಹೇಳಬಹುದಾಗಿದೆ. ಸರಿಯಾದ ಅವಕಾಶಗಳಿಲ್ಲದೇ ಸೌಮ್ಯ ಶೆಟ್ಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಅನೇಕ ನಟಿಯರು ಆಫರ್‍ ಗಳಿಲ್ಲದೇ ಅಡ್ಡದಾರಿ ತುಳಿದಿರುವ ಸಂಘಟನೆಗಳು ನೋಡಿದ್ದೇವೆ. ಇದೀಗ ಸೌಮ್ಯ ಶೆಟ್ಟಿ ಸುಮಾರು 1 ಕೆಜಿ ಬಂಗಾರವನ್ನು ಕಳ್ಳತನ ಮಾಡಿ ಸಿಕ್ಕಿಬಿದಿದ್ದಾರೆ. ಗಟ್ಟಿಯಾಗಿ ಕೇಳಿದರೇ ಸೂಸೈಡ್ ಮಾಡಿಕೊಳ್ಳುವ ಬೆದರಿಕೆ ಸಹ ಹಾಕಿದ್ದಾರೆ ಎನ್ನಲಾಗಿದೆ.

ನಟಿ ಸೌಮ್ಯ ಶೆಟ್ಟಿ ವೈಜಾಗ್ ಮೂಲದವರಾಗಿದ್ದಾರೆ. ತನ್ನ ಸ್ನೇಹಿತೆಯ ಮನೆಯಲ್ಲಿ ಆಕೆ ಕೆಜಿ ಬಂಗಾರವನ್ನು ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಯುವರ್ಸ್ ಲವಿಂಗ್ಲಿ, ದಿ ಟ್ರಿಪ್ ಸಿನೆಮಾಗಳಲ್ಲಿ ನಟಿಸಿದ ಸೌಮ್ಯ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಆದರೆ ಬಳಿಕ ಆಕೆ ಅಷ್ಟೊಂದು ಸಕ್ಸಸ್ ಸಿಗಲಿಲ್ಲ. ಸರಿಯಾದ ಅವಕಾಶಗಳಿಲ್ಲದ ಕಾರಣ ಆಕೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಾ ಆಫರ್‍ ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆಡಿಷನ್ಸ್ ನೀಡುತ್ತಿದ್ದ ಸಮಯದಲ್ಲಿ ಸೌಮ್ಯಶೆಟ್ಟಿ ರಿಟೈರ್‍ ಪೋಸ್ಟಲ್ ಶಾಖೆಯ ಉದ್ಯೋಗಿ ಪ್ರಸಾದ್ ಬಾಬು ಮಗಳು ಮೌನಿಕಾ ಎಂಬಾಕೆಯನ್ನು ಪರಿಚಯಿಸಿಕೊಂಡಿದ್ದಾರೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ಬಳಿಕ ಸೌಮ್ಯ ಸಹ ಮೌನಿಕಾ ಮನೆಗೆ ಹೋಗಿ ಬರುತ್ತಿದ್ದರಂತೆ. ಅವರ ಮನೆಯಲ್ಲಿನ ಎಲ್ಲ ಜಾಗಗಳನ್ನು ತಿಳಿದುಕೊಂಡ ಸೌಮ್ಯ ಅವರ ಮನೆಯಲ್ಲಿ ಕೆಜಿ ಬಂಗಾರ ಇರುವುದನ್ನು ಪತ್ತೆಹಚ್ಚಿದ್ದಾಳೆ.

ಏನಾದರೂ ಮಾಡಿ ಆ ಬಂಗಾರವನ್ನು ಲಪಟಾಯಿಸಬೇಕು ಎಂದು ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಬಾತ್ ರೂಂ ಗೆ ಹೋಗಿ ಬರುತ್ತೇನೆ ಎಂದು ಹೇಳಿ ಬೆಡ್ ರೂಂ ನಲ್ಲಿ ಗಂಟೆಗಟ್ಟಲೇ ಇದ್ದು, ಕೊಂಚ ಕೊಂಚ ಬಂಗಾರವನ್ನು ಕಳ್ಳತನ ಮಾಡಿದ್ದಾಳೆ. ಈ ರೀತಿಯಲ್ಲಿ ಆಕೆ ಒಂದು ಕೆಜಿ ಬಂಗಾರವನ್ನು ಕಳ್ಳತನ ಮಾಡಿದ್ದಾಳೆ. ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ಮೌನಿಕಾ ಬಂಗಾರವನ್ನು ತೆಗೆಯಲು ಹೋಗಿದ್ದಾರೆ. ಅಲ್ಲಿ ಬಂಗಾರ ಕಾಣೆಯಾಗಿದ್ದನ್ನು ಗಮನಿಸಿ ಕುಟುಂಬಸ್ಥರೆಲ್ಲಾ ಒಮ್ಮೆಲೆ ಶಾಕ್ ಆಗಿದ್ದಾರೆ. ಕೂಡಲೇ ಮೌನಿಕಾ ತಂದೆ ಪ್ರಸಾದ್ ಬಾಬು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ವಿಚಾರಣೆ ಶುರು ಮಾಡಿದ್ದು, 11 ಮಂದಿಯನ್ನು ವಿಚಾರಿಸಿದ್ದಾರೆ.

ಈ ಸಮಯದಲ್ಲಿ 74 ಗ್ರಾಂ ಬಂಗಾರ ದೊರೆತಿದ್ದು, ನಟಿ ಸೌಮ್ಯ ಶೆಟ್ಟಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಉಳಿದ ಬಂಗಾರವನ್ನು ಗೋವಾದಲ್ಲಿ ಖರ್ಚು ಮಾಡಿದ್ದಾಗಿ, ಆ ಬಂಗಾರ ವಾಪಸ್ಸು ನೀಡಲಾಗುವುದಿಲ್ಲ. ಜೋರಾಗಿ ಕೇಳಿದರೇ ಸೂಸೈಡ್ ಮಾಡಿಕೊಳ್ಳುವುದಾಗಿ ಬೆದರಿಕೆ ನೀಡಿದ್ದಾರೆ. ಸದ್ಯ ಸೌಮ್ಯ ಶೆಟ್ಟಿಯನ್ನು ಬಂಧನ ಮಾಡಿದ ಪೊಲೀಸರು ಆಕೆಯನ್ನು ರಿಮ್ಯಾಂಡ್ ಗೆ ಕಳುಹಿಸಿದ್ದಾರೆ.