Film News

ನನ್ನ ಟಿ-ಶರ್ಟ್ ಒಳಗೆ ಕೈ ಹಾಕಿದ್ದ ಎಂದ ನಟಿ ಆಂಡ್ರಿಯಾ, ಕಹಿ ಘಟನೆಯ ಬಗ್ಗೆ ಸಂಚಲನಾತ್ಮಕ ಹೇಳಿಕೆ ವೈರಲ್…..!

ಸಿನಿರಂಗದಲ್ಲಿ ಅನೇಕ ನಟಿಯರು ತಮ್ಮ ಕೆರಿಯರ್‍ ನಲ್ಲಿ ಕೆಲವೊಂದು ಕಹಿ ಘಟನೆಗಳನ್ನು ಎದುರಿಸುತ್ತಿರುತ್ತಾರೆ. ಕೆಲವೊಮ್ಮೆ ಅಂತಹ ಘಟನೆಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಜೀವನದಲ್ಲಿ ಎದುರಾದ ಕಹಿ ಘಟನೆಯೊಂದರ ಬಗ್ಗೆ ಮಲ್ಟಿಟ್ಯಾಲೆಂಟೆಡ್ ನಟಿ ಆಂಡ್ರಿಯಾ ಜೆರೆಮಿಯಾ ಹೇಳಿಕೊಂಡಿದ್ದಾರೆ. ಆಕೆಗೆ ಎದುರಾದ ಲೈಂಗಿಕ ಕಿರುಕುಳದ ಘಟನೆಯ ಬಗ್ಗೆ ಸಂಚಲನಾತ್ಮಕ ಹೇಳಿಕೆ ನೀಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದ ನಟಿ ಆಂಡ್ರಿಯಾ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಸೆಕೆಂಡ್ ಹಿರೋಯಿನ್ ಆಗಿ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಸಿಂಗರ್‍ ಆಗಿ, ಸಿನೆಮಾಗಳಲ್ಲಿ ನಟಿಯಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ಸಹ ಆಕೆ ಸೈ ಎನ್ನುತ್ತಿರುತ್ತಾರೆ. ಇನ್ನೂ ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ವಿವಾದಗಳೂ ಸಹ ಮನೆ ಮಾಡಿದೆ.  ಸುಚಿ ಲೀಕ್ಸ್ ನಲ್ಲಿ ಆಕೆಯ ಹೆಸರು ತುಂಬಾನೆ ಕೇಳಿಬಂತು. ಸೌತ ಮ್ಯೂಸಿಕ್ ಡೈರೆಕ್ಟರ್‍ ಅನಿರುಧ್ ಜೊತೆಗೆ ಆಕೆ ಡೇಟ್ ನಡೆಸಿದ್ದಾರೆ. ಆತನೊಂದಿಗೆ ತುಂಬಾ ಕ್‌ಓಜ್ ಆಗಿರುವಂತಹ ಪೊಟೋಗಳೂ ಸಹ ಲೀಕ್ ಆಗಿತ್ತು. ಅವರಿಬ್ಬರ ನಡುವೆ ಅಫೈರ್‍ ಇದೆ ಎಂಬ ಸುದ್ದಿಗಳೂ ಸಹ ಹರಿದಾಡಿತ್ತು. ಸಿನಿರಂಗದಲ್ಲಿ ಏನೇ ವಿಚಾರವಿದ್ದರೂ ನೇರವಾಗಿಯೇ ಮಾತನಾಡುವಂತಹ ವ್ಯಕ್ತಿತ್ವವುಳ್ಳ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿ ಆಂಡ್ರಿಯಾ ಆಕೆಗೆ 11 ವಯಸ್ಸಿನಲ್ಲಿರುವಾಗ ಕಹಿ ಘಟನೆಯೊಂದು ನಡೆದಿತ್ತಂತೆ. ಆಕೆ ತನ್ನ ತಂದೆ ತಾಯಿಯೊಂದಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಜೀನ್ಸ್ ಹಾಗೂ ಟಿ-ಶರ್ಟ್ ಮಾತ್ರ ಧರಿಸಿದ್ದೆ. ನನ್ನ ತಂದೆ ನನ್ನ ಪಕ್ಕದಲ್ಲೇ ಇದ್ದ. ಆಗ ಯಾರೋ ಕೈ ಹಾಕಿದಂತೆ ಅನ್ನಿಸಿತ್ತು. ನನ್ನ ಟಿ-ಶರ್ಟ್ ನಲ್ಲಿ ಯಾರೋ ಕೈ ಇಟ್ಟಿದ್ದಾರೆ ಎಂಬುದನ್ನು ತಾಳಲಾರೆನು. ಕೂಡಲೇ ಭಯಪಟ್ಟೆ. ಯಾರೊಂದಿಗೂ ಏನು ಮಾತಾನಾಡದೇ ಭಯದಿಂದ ನನ್ನ ತಂದೆಯ ಪಕ್ಕದಲ್ಲಿ ಕುಳಿತುಕೊಂಡೆ. ಈ ವಿಚಾರ ಯಾರಿಗೆ ಹೇಳಬಾರದೆಂಬ ಕಾರಣ ಅರ್ಥವಾಗದೇ ಅಳುವುದನ್ನು ಶುರು ಮಾಡಿದೆ. ತನ್ನ ಬಾಲ್ಯದಲ್ಲಿ ನಡೆದಂತಹ ಈ ಕಹಿ ಘಟನೆಯನ್ನು ಆಕೆ ಹೇಳಿಕೊಂಡಿದ್ದಾರೆ. ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top