Film News

Unbothered ಎಂದು ಬಾತ್ ರೂಂ ನಲ್ಲಿ ಸ್ಟೈಲಿಷ್ ಆಗಿ ಪೋಸ್ ಕೊಟ್ಟ ಸಮಂತಾ, ವೈರಲ್ ಆದ ಲೇಟೆಸ್ಟ್ ಪೊಟೋಸ್……!

ಆರೋಗ್ಯದ ನಿಮಿತ್ತ ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡ ಸ್ಟಾರ್‍ ನಟಿ ಸಮಂತಾ ಇದೀಗ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಲು ಸಿದ್ದವಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಳ್ಳುವ ಪೊಟೋಗಳಲ್ಲಿ ಬೋಲ್ಡ್ ಆಗಿ ಎನರ್ಜೆಟಿಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ಫಾಲೋವರ್ಸ್‌ಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಬಾತ್ ರೂಂ ನಲ್ಲಿ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಜೊತೆಗೆ ಸ್ಟೈಲಿಷ್ಟ್ ಪ್ರೀತಂ ಜುಕಾಲ್ಕರ್‍ ಕ್ರೇಜಿ ಕಾಮೆಂಟ್ ಮಾಡಿದ್ದಾರೆ.

ಸುಮಾರು ವರ್ಷಗಳ ಕಾಲ ಸಮಂತಾ ಸೌತ್ ಸಿನಿರಂಗವನ್ನು ಆಳಿದಂತಹ ನಟಿಯಾಗಿದ್ದಾರೆ. ಸ್ಟಾರ್‍ ನಟಿಯಾಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ಆಕೆ ವೈಯುಕ್ತಿಕ ಕಾರಣಗಳಿಂದ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ವಿಚ್ಚೇದನ ಪಡೆದುಕೊಂಡು ಮಾನಸಿಕ ಖಿನ್ನತೆಗೆ ಗುರಿಯಾಗಿದ್ದರು. ಇದು ಮಾಸುವ ಮುನ್ನವೇ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿ ಕೆಲವು ತಿಂಗಳುಗಳ ಅಜ್ಞಾತದಲ್ಲೇ ಇದ್ದರು. ಈ ವ್ಯಾಧಿಯ ಕಾರಣದಿಂದ ಆಕೆ ವಿದೇಶದಲ್ಲೂ ಸಹ ಚಿಕಿತ್ಸೆ ಪಡೆದುಕೊಂಡರು. ಯಶೋಧ ಸಿನೆಮಾದ ಬಳಿಕ ಆಕೆ ಮತ್ತೆ ಸಿನೆಮಾಗಳಲ್ಲಿ ನಟಿಸಿದ್ದರು. ಯಶೋಧ, ಶಾಕುಂತಲಂ, ಖುಷಿ ಹಾಗೂ ಸಿಟಾಡೆಲ್ ಮೊದಲಾದ ಪ್ರಾಜೆಕ್ಟ್ ಗಳಲ್ಲಿ ನಟಿಸಿದ್ದರು.

ಇನ್ನೂ ಖುಷಿ ಸಿನೆಮಾ ಬಿಡುಗಡೆಯಾದ ಬಳಿಕ ಸಮಂತಾ ಮತ್ತೆ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ವಿದೇಶಗಳಲ್ಲಿ ಸುತ್ತಾಡುತ್ತಾ, ಆಧ್ಯಾತ್ಮಿಕ ಪ್ರದೇಶಗಳಲ್ಲಿ ಹಾಗೂ ಕೆಲವೊಂದು ದೇವಾಲಯಗಳಿಗೆ ಭೇಟಿ ನೀಡಿ, ಮೆಡಿಟೇಷನ್ ಧ್ಯಾನ ಮಾಡುತ್ತಾ ಆರೋಗ್ಯ ಹಾಗೂ ಎನರ್ಜಿಯನ್ನು ಮತ್ತೆ ಪಡೆಯಲು ಪ್ರಯತ್ನಗಳನ್ನು ಮಾಡಿದ್ದರು. ಇನ್ನೂ ಸಮಂತಾ ಸಿನೆಮಾಗಳಿಂದ ದೂರವೇ ಉಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದರು. ಇದೀಗ ಆಕೆ ಮತ್ತೊಮ್ಮೆ ಸ್ಟೈಲಿಷ್ ಆಗಿರುವ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ವೈಟ್ ಶರ್ಟ್ ಹಾಗೂ ಬ್ಲೂ ಜೀನ್ಸ್ ಧರಿಸಿ ಮತ್ತೇರಿಸುವ ಪೋಸ್ ಗಳನ್ನು ಕೊಟ್ಟಿದ್ದಾರೆ. ಬಾತ್ ರೂಂ ಮಿರರ್‍ ನಲ್ಲಿ ಆಕೆ ಈ ಪೋಟೋಗಳಿಗೆ ಪೋಸ್ ಕೊಟ್ಟಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಈ ಪೊಟೊಗಳಿಗೆ ಆಕೆ Unbothered ಎಂದು ಕ್ಯಾಪ್ಷನ್ ಹಾಕಿದ್ದಾರೆ. ಬಾತ್ ರೂಂ ನಲ್ಲಿದ್ದರೂ ನನಗೆ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ಇನ್ನೂ ಈ ಪೊಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಆಕೆಯ ಮೇಕಪ್ ಆರ್ಟಿಸ್ಟ್ ಪ್ರೀಯಂ ಜುಕಾಲ್ಕರ್‍ ವೈಟ್ ಲವ್ ಎಮೋಜಿಗಳನ್ನು ಕಾಮೆಂಟ್ ರೂಪದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top