ಇಷ್ಟ ಬಂದಂತೆ ಬರೆದು ಬಿಡುತ್ತಿದ್ದಾರೆ, ಆ ನ್ಯೂಸ್ ಕೇಳಿ ನಾನು ಸಹ ಶಾಕ್ ಆದೆ, ಸೋಷಿಯಲ್ ಮಿಡಿಯಾ ಬಗ್ಗೆ ಶ್ರೀಕಾಂತ್ ಆಕ್ರೋಷ…!

Follow Us :

ಸೊಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆ ಅದರ ಮೂಲಕ ಅನೇಕರ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡಿದ್ದಾರೆ, ಅನೇಕರು ಫೇಮಸ್ ಆಗಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಪ್ರಚಾರಗಳೇ ಹೆಚ್ಚು ಹರಿದಾಡುತ್ತಿರುತ್ತವೆ. ಇತ್ತೀಚಿಗಷ್ಟೆ ಟಾಲಿವುಡ್ ನಟ ಶ್ರೀಕಾಂತ್ ರವರ  ವೈಯುಕ್ತಿಕ ವಿಚಾರದ ಬಗ್ಗೆ ಕೆಲವೊಂದು ರೂಮರ್‍ ಗಳನ್ನು ಹರಿಬಿಟ್ಟಿದ್ದರು. ಈ ಬಗ್ಗೆ ಶ್ರೀಕಾಂತ್ ಸೋಷಿಯಲ್ ಮಿಡಿಯಾದಲ್ಲಿ ಅಂತಹ ರೂಮರ್‍ ಗಳನ್ನು ಹರಿಬಿಡುವವರ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ.

ತೆಲುಗು ಸಿನಿರಂಗದಲ್ಲಿ ಫ್ಯಾಮಿಲಿ ಹಿರೋ ಆಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ಶ್ರೀಕಾಂತ್. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ಯಾರೆಕ್ಟರ್‍ ರೋಲ್ಸ್ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಶ್ರೀಕಾಂತ್ ವಿವಾದಗಳಿಗೆ ದೂರವೇ ಇರುತ್ತಾರೆ. ಅಂತಹ ನಟನ ವಿರುದ್ದ ಕಳೆದ ವರ್ಷ ನವೆಂಬರ್‍ ಮಾಹೆಯಲ್ಲಿ ಅನೇಕ ರೂಮರ್‍ ಗಳು ಹರಿದಾಡಿತ್ತು. ಶ್ರೀಕಾಂತ್ ಹಾಗೂ ಆತನ ಹೆಂಡತಿ ಊಹಾ ನಡುವೆ ವಿಬೇದಗಳು ಉಂಟಾಗಿವೆ. ಅವರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದನ್ನು ಹರಿಬಿಟ್ಟಿದ್ದರು. ಆ ಸುದ್ದಿ ವೈರಲ್ ಆಗುತ್ತಿದ್ದಂತೆ ಶ್ರೀಕಾಂತ್ ಆ ರೂಮರ್‍ ವಿರುದ್ದ ಪ್ರಸ್ ನೋಟ್ ಒಂದನ್ನು ಸಹ ರಿಲೀಸ್ ಆಗಿದ್ದರು. ಇದೀಗ ಮತ್ತೊಮ್ಮೆ ಈ ಸುದ್ದಿಯ ಬಗ್ಗೆ ಶ್ರೀಕಾಂತ್ ಸ್ಪಂದಿಸಿದ್ದಾರೆ.

ನಟ ಶ್ರೀಕಾಂತ್ ರವರ ಹುಟ್ಟುಹಬ್ಬದ ಅಂಗವಾಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಅನೇಕ ವಿಚಾರಗಳನ್ನು ಹೊರಹಾಕಿದ್ದಾರೆ. 55 ವರ್ಷ ವಯಸ್ಸಿನ ನಟ ಇನ್ನೂ ಅದೇ ಗ್ಲಾಮರ್‍ ಮೈಂಟೈನ್ ಮಾಡುತ್ತಿದ್ದಾರೆ. ಇನ್ನೂ ಸಂದರ್ಶನದಲ್ಲಿ ಸೋಷಿಯಲ್ ಮಿಡಿಯಾದ ವಿರುದ್ದ ಕಿಡಿಕಾರಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅವರಿಗೆ ಇಷ್ಟ ಬಂದಂತೆ ಬರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಾನು ವಿಚ್ಚೇದನ ಪಡೆದುಕೊಳ್ಳುತ್ತಿದ್ದೇನೆ ಎಂದು ಸುದ್ದಿ ಹರಡಿದ್ದರು. ಅದನ್ನು ಸುಳ್ಳು ಎಂದು ಪ್ರೂವ್ ಮಾಡಲು ನಾನು ನನ್ನ ಪತ್ನಿಯನ್ನು ಪಾರ್ಟಿ ಹಾಗೂ ಫಂಕ್ಷನ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ಆಕೆಗೆ ಸಿನೆಮಾ ಫಂಕ್ಷನ್, ಪಾರ್ಟಿಗಳು ಎಂದರೇ ಇಷ್ಟವಿರಲ್ಲ. ಆದರೂ ಸಹ ಆಕೆಯನ್ನು ಬೇಡಿ ಕರೆದುಕೊಂಡು ಹೋಗುತ್ತಿದ್ದೇನೆ. ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲ್ಲ. ಕೆಲವು ದಿನಗಳ ಹಿಂದೆಯಷ್ಟೆ ನನ್ನ ಪೊಟೋ ಇಟ್ಟು ಸತ್ತಿದ್ದೇನೆ ಎಂದು ಬರೆದಿದ್ದಾರೆ. ಅದನ್ನು ನೋಡಿ ನಾನು ಸಹಿಸಿಕೊಳ್ಳುತ್ತೇನೆ. ಆದರೆ ನಮ್ಮ ಮನೆಯವರು ನೋಡಿದರೇ ಏನು ತಿಳಿದುಕೊಳ್ಳುತ್ತಾರೆ. ಅದನ್ನೆಲ್ಲಾ ಸುಳ್ಳು ರೂಮರ್‍ ಹರಿಡುವವರು ಯೋಚನೆ ಮಾಡುವುದಿಲ್ಲ.

ಇನ್ನೂ ಅವರ ಮೇಲೆ ಕ್ರಮ ತೆಗೆದುಕೊಂಡರೂ ಸಹ ಉಪಯೋಗ ಇರಲ್ಲ. ಅವರಷ್ಟಕ್ಕೆ ಅವರೇ ಬದಲಾಗಬೇಕು. ಇಂತಹ ವಿಚಾರಗಳಲ್ಲಿ ನಮ್ಮ ಕಷ್ಟಗಳನ್ನು ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನೂ ಶ್ರೀಕಾಂತ್ RC15 ಹಾಗೂ NTR30 ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.