ಆ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ನನ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ರು ಎಂದ ಕೀರ್ತಿ ಸುರೇಶ್, ಯಾವುದು ಆ ಪಾತ್ರ….!

Follow Us :

ಸೌತ್ ನ ಸ್ಟಾರ್‍ ನಟಿ ಕೀರ್ತಿ ಸುರೇಶ್ ಸರ್ಕಾರು ವಾರಿ ಪಾಠ ಸಿನೆಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಂಡು ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಆಕೆ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ದಸರಾ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಪ್ರಮೋಷನ್ ಗಳೂ ಸಹ ಭರದಿಂದ ಸಾಗುತ್ತಿದ್ದು, ಈ ಹಾದಿಯಲ್ಲೇ ಕೀರ್ತಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ವೈರಲ್ ಆಗುತ್ತಿವೆ.

ಮೊದಲ ಬಾರಿಗೆ ನಾನಿ ಹಾಗೂ ಕೀರ್ತಿ ಸುರೇಶ್ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ದಸರಾ ಸಿನೆಮಾ ಇದೇ ಮಾ.30 ರಂದು ತೆರೆಗೆ ಬರಲಿದೆ. ವಿಶ್ವಮಟ್ಟದಲ್ಲಿ ಈ ಸಿನೆಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇನ್ನೂ ಐದು ಭಾಷೆಗಳಲ್ಲಿ ಈ ಸಿನೆಮಾ ತೆರೆಕಾಣಲಿದೆ. ಇದರಿಂದಾಗಿ ಬಾಲಿವುಡ್ ನಲ್ಲೂ ಸಹ ಸಿನೆಮಾದ ಪ್ರಮೋಷನ್ ಜೋರಾಗಿಯೇ ನಡೆಯುತ್ತಿದೆ. ಇದೀಗ ಸಿನೆಮಾ ಪ್ರಮೋಷನ್ ನಿಮಿತ್ತ ಬಾಲಿವುಡ್ ಮಿಡಿಯಾಗೆ ನೀಡಿದ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ತಮ್ಮ ಮೇಲೆ ಬರುತ್ತಿರುವ ಟ್ರೋಲ್ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.

ನಟಿ ಕೀರ್ತಿ ಸುರೇಶ್ ಗೆ ಮಹಾನಟಿ ಸಿನೆಮಾ ನ್ಯಾಷನಲ್ ಅವಾರ್ಡ್ ತಂದುಕೊಟ್ಟಿತ್ತು. ಈ ಸಿನೆಮಾದಲ್ಲಿ ನಟಿಸಿದ್ದಕ್ಕಾಗಿ ಕೀರ್ತಿ ಸುರೇಶ್ ಅನೇಕ ಟ್ರೋಲ್ ಗಳನ್ನು ಎದುರಿಸಿದ್ದರಂತೆ.  ಮಹಾನಟಿ ಸಿನೆಮಾದಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸಲು ತುಂಬಾನೆ ಭಯಪಡುತ್ತಿದ್ದೆ. ಈ ಪಾತ್ರದಲ್ಲಿ ನಟಿಸಲು ಮೊದಲಿಗೆ ನಿರಾಕರಿಸಿದ್ದೆ. ಆದರೆ ನಿರ್ದೇಶಕ ನಾಗ್ ಅಶ್ವಿನ್ ಧೈರ್ಯ ನೀಡಿದ ಕಾರಣದಿಂದ ಸಿನೆಮಾದಲ್ಲಿ ನಟಿಸಿದ್ದೆ. ನೀನು ಆ ಪಾತ್ರದಲ್ಲಿ ಚೆನ್ನಾಗಿ ನಟಿಸಬಲ್ಲೆ. ನಿನಗೆ ಮಾತ್ರ ಅದು ಸಾಧ್ಯ ಎಂದು ಧೈರ್ಯ ಕೊಟ್ಟರು. ಬಳಿಕ ಅವರು ನನ್ನ ಮೇಲೆ ಇಟ್ಟ ನಂಬಿಕೆಗೆ ನಾನು ಸಹ ಒಪ್ಪಿ ಸಿನೆಮಾದಲ್ಲಿ ನಟಿಸಿದ್ದೆ. ಈ ಸಿನೆಮಾದ ಬಳಿಕ ನನ್ನ ಕೆರಿಯರ್‍ ಬದಲಾಯಿತು ಎಂದಿದ್ದಾರೆ.

ಇನ್ನೂ ಸಾವಿತ್ರಿ ಅಮ್ಮನವರ ಪಾತ್ರದಲ್ಲಿ ನಟಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ತುಂಬಾ ಯೋಚನೆ ಮಾಡಿ ಆ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಆದರೂ ಸಹ ನನ್ನನ್ನು ಅನೇಕರು ಟ್ರೋಲ್ ಮಾಡಿದರು. ಇನ್ನೂ ಸಿನೆಮಾ ಪ್ರಮೋಷನ್ ಸಮಯದಲ್ಲಿ ನಿಮ್ಮ ಮೇಲೆ ಬರುತ್ತಿರುವ ಟ್ರೋಲ್ ಗಳ ಬಗ್ಗೆ ಸಹ ಪ್ರಶ್ನೆ ಎದುರಾಗಿತ್ತು. ಅದಕ್ಕೂ ಸಹ ಕೀರ್ತಿ ಸುರೇಶ್ ಉತ್ತರಿಸುತ್ತಾ ನಾನು ಸೋಷಿಯಲ್ ಮಿಡಿಯಾದಲ್ಲಿ ಬರುವಂತಹ ಟ್ರೋಲ್ಸ್, ನೆಗೆಟೀವ್ ಕಾಮೆಂಟ್ ಗಳ ಬಗ್ಗೆ ಕಿವಿಗೊಡುವುದೇ ಇಲ್ಲ ಎಂದಿದ್ದಾರೆ. ಸದ್ಯ ಕೀರ್ತಿ ಸುರೇಶ್ ರವರ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.