ನರೇಶ್ ಹಾಗೂ ಪವಿತ್ರ ಲೋಕೇಶ್ ಮದುವೆ ಸುದ್ದಿಯ ಹಿಂದೆ ಅಷ್ಟೊಂದು ಗಿಮಿಕ್? ಪ್ರಚಾರಕ್ಕಾಗಿ ಇಷ್ಟೆಲ್ಲಾ ಡ್ರಾಮಾನಾ?

Follow Us :

ತೆಲುಗು ಸೀನಿಯರ್‍ ನಟ ನರೇಶ್ ಹಾಗೂ ನಟಿ ಪವಿತ್ರಾ ರವರ ನಡುವೆ ಅಫೈರ್‍ ನಡೆಯುತ್ತಿದೆ ಎಂದು ಸುಮಾರು ತಿಂಗಳುಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ಈ ವರ್ಷದ ಆರಂಭದಲ್ಲಿ ಶೀಘ್ರದಲ್ಲೇ ಮದುವೆಯಾಗುತ್ತೇವೆ ಎಂದು ವಿಡಿಯೋ ಹಂಚಿಕೊಂಡಿದ್ದರು. ಇದಾದ ಬಳಿಕ ಕೆಲವು ದಿನಗಳ ಹಿಂದೆ ಮದುವೆಯಾಗುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅವರಿಬ್ಬರ ಮದುವೆ ನಡೆದು ಹೋಗಿದೆ ಎಂದು ಅನೇಕರು ಅಭಿಪ್ರಾಯಪಟ್ಟರು. ಆದರೆ ಇದೆಲ್ಲಾ ಸಿನೆಮಾ ಒಂದಕ್ಕೆ ಸಂಬಂಧಿಸಿದ ವಿಡಿಯೋ ಆಗಿದೆ. ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಮೂಡಿಬಂದ ಮಳ್ಳಿ ಪೆಳ್ಳಿ (ಮತ್ತೆ ಮದುವೆ) ಎಂಬ ಸಿನೆಮಾಗೆ ಸಂಬಂಧಿಸಿದ ವಿಡಿಯೋಗಳಾಗಿವೆ.

ಸೀನಿಯರ್‍ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೋಡಿಯಾಗಿ ಮಳ್ಳಿ ಪೆಳ್ಳಿ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಸಿನೆಮಾದ ಟೈಟಲ್, ಫಸ್ಟ್ ಲುಕ್ ಹಾಗೂ ಫಸ್ಟ್ ಗ್ಲಿಂಪ್ಸ್ ಅನ್ನು ಸಹ ಇತ್ತೀಚಿಗಷ್ಟೆ ಬಿಡುಗಡೆ ಮಾಡಲಾಗಿತ್ತು. ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಎಂ.ಎಸ್.ರಾಜು ಕಥೆಯ ಜೊತೆಗೆ ನಿರ್ದೇಶನ ಸಹ ಮಾಡಿದ್ದಾರೆ. ಇನ್ನೂ ಈ ಸಿನೆಮಾ ವಿಜಯಕೃಷ್ಣ ಬ್ಯಾನರ್‍ ನಡಿ ನರೇಶ್ ರವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನೆಮಾದ ಟೈಟಲ್ ರಿಲೀಸ್ ಆಗಿದೆ. ಮಳ್ಳಿ ಪೆಳ್ಳಿ ಎಂಬ ಟೈಟಲ್ ಘೋಷಣೆ ಮಾಡಿದ್ದು, ಈ ಸಂಬಂಧ ಪೋಸ್ಟರ್‍ ಸಹ ರಿಲೀಸ್ ಮಾಡಲಾಗಿದೆ. ಈ ಗ್ಲಿಂಪ್ಸ್ ನಲ್ಲಿ ಪವಿತ್ರಾ ಮನೆಯ ಮುಂದೆ ರಂಗೋಲಿ ಬಿಡುಸುತ್ತಿರುತ್ತಾರೆ. ನರೇಶ್ ಆಕೆಯ ಬಳಿ ಬಂದು ನೋಡುತ್ತಿರುತ್ತಾರೆ.

ಇನ್ನೂ ಫ್ಯಾಮಿಲಿ ಎಂಟರ್‍ ಟ್ರೈನರ್‍ ಆಗಿ ಈ ಸಿನೆಮಾ ತೆರೆಗೆ ಬರಲಿದೆ ಎನ್ನಲಾಗಿದೆ. ನರೇಶ್ ಹಾಗೂ ಪವಿತ್ರ ರವರ ನಡುವೆ ಸಹ ಒಳ್ಳೆಯ ಕೆಮಿಸ್ಟ್ರಿ ಸಹ ವರ್ಕೌಟ್ ಆಗಿದೆ ಎಂದೂ ಸಹ ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ಜಯಸುಧ, ಶರತ್ ಬಾಬು. ವನಿತಾ, ಅನನ್ಯ ನಾಗಳ್ಳ, ರವಿವರ್ಮಾ, ಭದ್ರಂ, ಮಧು ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಇನ್ನೂ ಈ ಸಿನೆಮಾಗೆ ಸುರೇಶ್ ಬೊಬ್ಬಿಲಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನೂ ಈ ಸಿನೆಮಾ ಇದೇ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ. ಆದರೆ ನಿಖರವಾದ ದಿನಾಂಕ ಇನ್ನೂ ಘೋಷಣೆ ಮಾಡಿಲ್ಲ. ಸದ್ಯ ಸಿನೆಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಇನ್ನೂ ವಿಜಯಕೃಷ್ಣ ಮೂವಿಸ್ ಬ್ಯಾನರ್‍ ಅನ್ನು ಪುನಃ ಪ್ರಾರಂಭಿಸುತ್ತಿದ್ದಾರೆ ನರೇಶ್. ಇದೀಗ ಆತ ಆಸಕ್ತಿಕರವಾದ ಪ್ರಕಟನೆಯನ್ನು ಸಹ ನರೇಶ್ ಹಂಚಿಕೊಂಡಿದ್ದಾರೆ.  ಸಿನಿರಂಗದಲ್ಲಿ ಸೂಪರ್‍ ಸ್ಟಾರ್‍ ಕೃಷ್ಣ, ಡಾಕ್ಟರ್‍ ವಿಜಯ ನಿರ್ಮಲ ಜೊತೆಗೆ ಮಾಡಿದ ಸಿನಿ ಪ್ರಯಾಣ ಒಂದು ಚರಿತ್ರೆ. ಅದರಲ್ಲಿ ಒಂದು ಅಧ್ಯಾಯವೇ ವಿಜಯಕೃಷ್ಣ ಮೂವಿಸ್ ಬ್ಯಾನರ್‍. 1973 ರಲ್ಲಿ ಈ ಬ್ಯಾನರ್‍ ಪ್ರಾರಂಭಿಸಿದ್ದರು. ಈ ಬ್ಯಾನರ್‍ ನಿರ್ಮಾಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬ್ಯಾನರ್‍ ಅನ್ನು ಮತ್ತೆ ಪ್ರಾರಂಭ ಮಾಡಲಾಗಿದೆ. ಈ ಬ್ಯಾನರ್‍ ನಡಿ ಮೊದಲನೇ ಸಿನೆಮಾ ಆಗಿ ಮಳ್ಳಿ ಪೆಳ್ಳಿ ಎಂಬ ಸಿನೆಮಾ ಬರಲಿದೆ ಎಂದು ಪೋಸ್ಟ್ ಮಾಡಿದ್ದಾರೆ.