ಐ ಪೋನ್ ಗಾಗಿ ರಸ್ತೆಯಲ್ಲಿ ಶಿಕ್ಷಕಿಯನ್ನು ಎಳೆದೊಯ್ಡ ದುಷ್ಕರ್ಮಿಗಳು, ದೆಹಲಿಯಲ್ಲಿ ನಡೆಯಿತು ಹೇಯ ಕೃತ್ಯ….!

Follow Us :

ದೇಶದಲ್ಲಿ ಎಷ್ಟೇ ಕಾನೂನುಗಳಿದ್ದರೂ ಸಹ ಕಳ್ಳತನ, ದೌರ್ಜನ್ಯಗಳು ನಡೆಯುತ್ತಲೇ ಇದೆ. ಇದೀಗ ಐಪೋನ್ ಗಾಗಿ ಶಿಕ್ಷಕಿಯೊಬ್ಬರನ್ನು ಎಳೆದೊಯ್ದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯಲ್ಲಿ ಇತ್ತಿಚಿಗೆ ಕಳ್ಳರ ಕಾಟ ಹೆಚ್ಚಾಗಿದ್ದು, ಅದರ ಜೊತೆಗೆ ದೌರ್ಜನ್ಯಗಳೂ ಸಹ ಹೆಚ್ಚಾಗಿ ನಡೆಯುತ್ತಿದೆ. ದಕ್ಷಿಣ ದೆಹಲಿಯಲ್ಲಿ ನಡೆದ ಹೇಯ ಕೃತ್ಯದಿಂದಾಗಿ ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ದಕ್ಷಿಣ ದೆಹಲಿಯ ಖಾಸಗಿ ಶಾಲೆಯೊಂದರ ಶಿಕ್ಷಕಿಯಿಂದ ಐಪೋನ್ ಕಸಿದುಕೊಳ್ಳಲು ಬೈಕ್ ನಲ್ಲಿ ಬಂದ ಮೂರು ದುಷ್ಕರ್ಮಿಗಳು ಆಕೆಯ ರಸ್ತೆಯ ಉದ್ದಕ್ಕೂ ಎಳೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಕಳೆದ ಆ.11 ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ನಡೆದಿದೆ ಎನ್ನಲಾಗಿದೆ. ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ. ಅಪರಿಚಿತ ದುಷ್ಕರ್ಮಿಗಳು ಸಂತ್ರಸ್ಥ ಮಹಿಳೆಯಿಂದ ಐಪೋನ್ ಕಸಿದುಕೊಳ್ಳಲು ಯತ್ನಿಸಿದ್ದು, ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಸಾಕೇತ್ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಬಂದಿತ್ತು ಎನ್ನಲಾಗಿದೆ.

ಈ ಅಪಘಾತದಲ್ಲಿ ಯೋವಿಕಾ ಚೌಧರಿ (24) ಎಂಬ ಶೀಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆ ದೆಹಲಿಯ ಜವಾಹರ್‍ ಪಾರ್ಕ್ ಪ್ರದೇಶದ ನಿವಾಸಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಆಕೆ ಕೆಲಸ ಮಾಡುವ ಜ್ಞಾನ ಭಾರತಿ ಶಾಲೆಯಿಂದ ಆಟೋದಲ್ಲಿ ಮನೆಗೆ ಹೋಗುತ್ತಿದ್ದರಂತೆ. ಸಾಕೇತ್ ಖೋಕಾ ಮಾರ್ಕೆಟ್ ಸಮೀಪ ಆಕೆ ತಲುಪಿದ್ದರಂತೆ. ಈ ವೇಳೆ ಬೈಕ್ ನಲ್ಲಿ ಬಂದಂತಹ ಮೂವರು ದುಷ್ಕರ್ಮಿಗಳು ಆಟೋವನ್ನು ಸುತ್ತುವರೆದು ಶಿಕ್ಷಕಿ ಕೈಯಲ್ಲಿದ್ದ ಮೊಬೈಲ್ ಪೋನ್ ಕಸಿದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ಪೋನ್ ಬಿಡದೇ ಆಟೋದಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನೂ ಶಿಕ್ಷಕಿ ಪೋನ್ ಬಿಡದೇ ಹೋರಾಟ ನಡೆಸಿದರು. ಆದರೆ ದುಷ್ಕರ್ಮಿಗಳು ಪೋನ್ ಗಾಗಿ ರಸ್ತೆಯುದ್ದಕ್ಲೂ ಶಿಕ್ಷಕಿಯನ್ನು ಎಳೆದುಕೊಂಡು ಹೋಗಿದ್ದಾರೆ. ದುಷ್ಕರ್ಮಿಗಳೊಂದಿಗೆ ಹೋರಾಡಲು ಆಕೆಗೆ ಸಾಧ್ಯವಾಗದ ಕಾರಣ ಪೋನ್ ಬಿಟ್ಟಿದ್ದಾರೆ. ಆಗ ದುಷ್ಕರ್ಮಿಗಳು ಪೋನ್ ಕಸಿದು ಪರಾರಿಯಾಗಿದ್ದಾರೆ. ಇನ್ನೂ ಶಿಕ್ಷಕಿಗೆ ಗಂಭೀರವಾದ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.