Film News

ಬೇರೆಯವರಿಗಾಗಿ ಬದುಕುವ ಅವಶ್ಯಕತೆಯಿಲ್ಲ ಎಂದ ಸಮಂತಾ, ಟ್ರೋಲರ್ ಗಳಿಗೆ ಸರಿಯಾಗಿ ಕೌಂಟರ್ ಕೊಟ್ಟ ನಟಿ….!

ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ಸದಾ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುತ್ತಿರುತ್ತಾರೆ. ಆಕೆ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಇದೀಗ ಸಮಂತಾ ಬಗ್ಗೆ ಓರ್ವ ಹಿರೋ ಅಭಿಮಾನಿ ವಿಮರ್ಶೆ ಮಾಡಿದ್ದಾರೆ. ಆಕೆ ಆ ವಿಮರ್ಶೆಗೆ ತನ್ನದೇ ಆದ ಶೈಲಿಯಲ್ಲಿ ಪರೋಕ್ಷವಾಗಿ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಸಮಂತಾ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಆಕೆ ತುಂಬಾನೆ ವಿಮರ್ಶೆಗಳನ್ನು ಎದುರಿಸಿದ್ದರು. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿಯೇ ವಿರೋಧಗಳನ್ನು ಎದುರಿಸಿದ್ದರು. ಆಕೆಯ ಅಫೈರ್ಸ್ ಕಾರಣದಿಂದ ಹಾಗೂ ಮಕ್ಕಳನ್ನು ಪಡೆದುಕೊಳ್ಳುವುದು ಇಷ್ಟವಿಲ್ಲದ ಕಾರಣ ಆಕೆ ವಿಚ್ಚೇದನ ಪಡೆದುಕೊಂಡರು ಎಂದು ನಿರಾಧಾರವಾದ ಆರೋಪಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಎದುರಿಸಿದ್ದರು. ಈ ಕಾರಣದಿಂದ ಆಕೆ ತೀವ್ರವಾಗಿ ಮಾನಸಿಕ ಹಿಂಸೆಗೆ ಗುರಿಯಾಗಿದ್ದರು. ಆದರೆ ಎಲ್ಲಾ ಆರೋಪಗಳನ್ನು, ವಿಮರ್ಶೆಗಳನ್ನು ಮೆಟ್ಟಿನಿಂತರು. ಸಮಂತಾ ತುಂಬಾನೆ ಇಂಡಿಪೆಂಡೆಟ್ ಲೇಡಿ. ಆಕೆಯ ಆಲೋಚನೆಯ ವಿಧಾನ ಸಹ ವಿಭಿನ್ನವಾಗಿಯೇ ಇರುತ್ತದೆ. ಆಕೆ ನಂಬಿದ ಸಿದ್ದಾಂತಕ್ಕೆ ಕಟ್ಟುಬಿದ್ದಿರುತ್ತಾರೆ. ಅದರಲ್ಲೂ ಮನಸ್ಸಿನಲ್ಲಿರುವ ಮಾತನ್ನು ನೇರವಾಗಿ ಹೇಳುತ್ತಾರೆ. ಈ ಹಾದಿಯಲ್ಲೇ ತನ್ನ ಮೇಲೆ ಬರುವಂತಹ ವಿಮರ್ಶೆಗಳಿಗೂ ಸಹ ಸರಿಯಾಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ.

ಇನ್ನೂ ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಮೂಡಿಬಂದ ಖುಷಿ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸಿನೆಮಾದ ಟ್ರೈಲರ್‍ ಸಹ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಆದರೆ ಈ ಟ್ರೈಲರ್‍ ರಿಲೀಸ್ ಈವೆಂಟ್ ಗೆ ಸಮಂತಾ ಗೈರುಹಾಜರಿಯಾಗಿದ್ದರು. ಇದರಿಂದ ವಿಜಯ್ ದೇವರಕೊಂಡ ಅಭಿಮಾನಿಗಳು ಗರಂ ಆಗಿದ್ದರು. ಸಿನೆಮಾದ ಪ್ರಮೋಷನ್ ಗಳಲ್ಲಿ ಭಾಗಿಯಾಗದೇ ಇದ್ದರೇ ಹೇಗೆ ಎಂದು ವಿಜಯ್ ಅಭಿಮಾನಿಗಳು ವಿಮರ್ಶೆಗಳನ್ನು ಮಾಡಿದರು. ಇದೀಗ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಮಂತಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ನೀವು ಈ ಪ್ರಪಂಚಕ್ಕಾಗಿ ಬದುಕಬೇಕಾದ ಅವಶ್ಯಕತೆಯಿಲ್ಲ. ನಿಮ್ಮ ಗೌರವ ಏನು ತಿಳಿದುಕೊಳ್ಳು, ನಿಮ್ಮ ಗೌರವ ಬೆಳೆಸಿಕೊಳ್ಳಿ, ನೀವು ನಿಮಗಾಗಿ ಬದುಕಿ, ಈ ಸಮಾಜಕ್ಕಾಗಿ ಅಲ್ಲ, ನಿಮ್ಮನ್ನು ಈ ಸಮಾಜ ಗುರ್ತಿಸಿದೇ ಇರಬಹುದು, ಅದು ಅವಶ್ಯಕತೆಯಲ್ಲ, ಹತ್ತು ಜನರಲ್ಲಿ ಒಬ್ಬರಾಗದೇ ಯೂನಿಕ್ ಆಗಿ ಜೀವಿಸಿ ಎಂದು ನೋಟ್ ಒಂದನ್ನು ಹಂಚಿಕೊಂಡಿದ್ದಾರೆ.

ಇನ್ನೂ ಸಮಂತಾ ವಿಜಯ್ ದೇವರಕೊಂಡ ಅಭಿಮಾನಿಗಳನ್ನು ಉದ್ದೇಶಿಸಿ ಈ ನೋಟ್ ಹಂಚಿಕೊಂಡಿದ್ದಾರೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಸಹ ನಡೆಯುತ್ತಿದೆ. ಸೆ.1 ರಂದು ಖುಷಿ ಸಿನೆಮಾ ಬಿಡುಗಡೆಯಾಗಲಿದೆ. ಸಮಂತಾ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷದ ಮಟ್ಟಿಗೆ ಸಿನೆಮಾಗಳಿಂದ ದೂರವಿರುವುದಾಗಿ ತಿಳಿಸಿದ್ದಾರೆ. ವಿರಾಮ ಪಡೆದುಕೊಂಡು ಆಧ್ಯಾತ್ಮಿಕ ಪ್ರದೇಶಗಳು ಸೇರಿದಂತೆ ಕೆಲವೊಂದು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ.

Most Popular

To Top