Film News

ಜಾತಿ ನಿಂದನೆ ಪ್ರಕರಣ, ಉಪ್ಪಿಗೆ ಬಿಗ್ ರಿಲೀಫ್, ಎಫ್.ಐ.ಆರ್ ಗೆ ಹೈಕೋರ್ಟ್ ತಡೆ…!

ಕಳೆದೆರಡು ದಿನಗಳ ಹಿಂದೆಯಷ್ಟೆ ಉಪೇಂದ್ರ ಗಾದೆಯ ಮಾತಿನ ಮೂಲಕ ಜಾತಿ ನಿಂದನೆ ಮಾಡಿದ್ದಾರೆ ಎಂದು ಹಲವು ದಲಿತಪರ ಸಂಘಟನೆಗಳು ಆತನ ವಿರುದ್ದ ಪ್ರತಿಭಟನೆ ನಡೆಸಿದ್ದವು. ಜೊತೆಗೆ ಈ ಸಂಬಂಧ ಎಫ್.ಐ.ಆರ್‍ ಸಹ ದಾಖಲಾಗಿತ್ತು. ಇದೀಗ ಜಾತಿ ನಿಂದನೆ ಪ್ರಕ್ರಣದಡಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ದ ದಾಖಲಾಗಿದ್ದ ಎಫ್.ಐ.ಆರ್‍ ಗೆ ಹೈಕೋರ್ಟ್ ನ್ಯಾ.ಹೇಮಂತ್ ಚಂದನ್ ತಡೆ ನೀಡಿದ್ದಾರೆ.

ನಟ ಉಪೇಂದ್ರ ತಾವು ಸ್ಥಾಪಿಸಿದ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಉಪ್ಪಿ ಲೈವ್ ಬಂದಿದ್ದು, ಕೆಲವೊಂದು ವಿಚಾರಗಳನ್ನು ಮಾತನಾಡಿದ್ದರು. ಈ ವೇಳೆ ಅಸೂಕ್ಷ್ಮತೆಯಿಂದ ಗಾದೆಯೊಂದನ್ನು ಬಳಸಿ ದಲಿತರ ಆಕ್ರೋಷಕ್ಕೆ ಕಾರಣರಾಗಿದ್ದರು. ಲೈವ್ ನಲ್ಲಿ ಮಾತನಾಡಿದ ಉಪ್ಪಿ, ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಕೆಲವೊಂದು ಪಕ್ಷಗಳ ಅಭ್ಯರ್ಥಿಗಳಿಗಿಂತ ಪ್ರಚಾರವಿಲ್ಲದೇ ಹೆಚ್ಚು ಮತಗಳನ್ನು ಪಡೆದುಕೊಂಡಿರುವುದಾಗಿ ಹೇಳಿದ್ದರು. ಬಳಿಕ ಯಾವುದೋ ಮಾತಿಗೆ ಊರೆಂದರೇ ಹೊಲೆಗೇರಿ ಇದ್ದೆ ಇರುತ್ತದೆ ಎಂದು ಗಾದೆಯನ್ನು ಬಳಸಿದ್ದರು. ಹೊಲೆಗೇರಿಯನ್ನು ಕಡಿಮೆಯಾಗಿ ಕಾಣುವಂತ ಗಾದೆ ಇದಾಗಿದ್ದು, ಅವರ ಮಾತಿಗೆ ಭಾರಿ ಆಕ್ರೋಷ ವ್ಯಕ್ತವಾಗಿತ್ತು.

ಇನ್ನೂ ಈ ಸಂಬಂಧ ಉಪೇಂದ್ರ ರವರ ವಿರುದ್ದ ರಾಜ್ಯದ ಅನೇಕ ಕಡೆ ಪ್ರತಿಭಟನೆಗಳು ನಡೆದಿತ್ತು. ದಲಿತ ಸಮುದಾಯದ ಭಾವನೆಗೆ ಧಕ್ಕೆಯನ್ನುಂಟು ಮಾಡುವ ಗಾದೆಯ ಮಾತು ಹೇಳಿದ್ದಾರೆ. ಅವರ ವಿರುದ್ದ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆಯಡಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲೂ ಸಹ ಪ್ರಕರಣ ದಾಖಲಾಗಿತ್ತು. ಇನ್ನೂ ಈ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್ ಎಫ್.ಐ.ಆರ್‍ ಗೆ ತಡೆ ನೀಡಿದ್ದಾರೆ. ಗಾದೆ ಮಾತು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಇದು ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಗೆ ಅನ್ವಯವಾಗುವುದಿಲ್ಲ ಎಂದು ತಡೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕ ಕೂಡಲೇ ಉಪೇಂದ್ರ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ನಲ್ಲಿರುವಂತೆ, ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ. ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ. ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹೃದಯಗಳು ಹಿಡಿದ ಪ್ರೀತಿಯ ಕೊಡೆ. ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ… ನನಗೆ ಕೊಡೆ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

Most Popular

To Top