ಪತ್ನಿಗೆ ಡಿವೋರ್ಸ್ ನೀಡಿ, ಕಿರ್ತೀ ಸುರೇಶ್ ರನ್ನು ಎರಡನೇ ಮದುವೆಯಾಗಲಿದ್ದಾರೆಯೇ ವಿಜಯ್? ಟ್ರೆಂಡ್ ಆಯ್ತು ಜಸ್ಟೀಸ್ ಫಾರ್ ಸಂಗೀತಾ ಹ್ಯಾಷ್ ಟ್ಯಾಗ್…!

Follow Us :

ಸಿನೆಮಾ ರಂಗದಲ್ಲಿ ಅತಿ ಹೆಚ್ಚು ಸುಳ್ಳು ವದಂತಿಗಳು ಹಬ್ಬುತ್ತಲೇ ಇರುತ್ತವೆ. ಆ ವದಂತಿಗಳು ನಿಜವೇ ಅಥವಾ ಸುಳ್ಳಾ ಎಂಬುದನ್ನು ಬಿಟ್ಟು ಆ ಸುದ್ದಿ ಮಾತ್ರ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಹರಿದಾಡುತ್ತದೆ. ಇದೀಗ ಕಾಲಿವುಡ್ ಸ್ಟಾರ್‍ ನಟ ವಿಜಯ್ ಕುರಿತಂತೆ ಒಂದು ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಆಕೆ ತನ್ನ ಪತ್ನಿ ಸಂಗೀತಾ ಗೆ ಡಿವೋರ್ಸ್ ನೀಡಿ ನಟಿ ಕೀರ್ತಿ ಸುರೇಶ್ ರವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಇನ್ನೂ ಈ ವದಂತಿಯನ್ನು ವಿಜಯ್ ಅಭಿಮಾನಿಗಳು ಮಾತ್ರ ಸುಳ್ಳು ಸುದ್ದಿ ಎಂದು ತಳ್ಳಿಹಾಕುತ್ತಿದ್ದಾರೆ.

ಇನ್ನೂ ದಳಪತಿ ವಿಜಯ್ ಅಭಿನಯದ ವಾರಿಸು ಸಿನೆಮಾ ಇತ್ತೀಚಿಗಷ್ಟೆ ತೆರಕಂಡಿದೆ. ಇನ್ನೂ ಈ ಸಿನೆಮಾದ ಆಡಿಯೋ ಲಾಂಚ್ ಈವೆಂಟ್ ನಲ್ಲಿ ಹಾಗೂ ನಿರ್ದೇಶಕ ಅಟ್ಲಿ ಪತ್ನಿಯ ಪ್ರಿಯಾ ಸೀಮಂತ ಕಾರ್ಯಕ್ರಮದಲ್ಲೂ ಸಹ ವಿಜಯ್ ಪತ್ನಿ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಈ ಕಾರಣಗಳನ್ನಿಟ್ಟುಕೊಂಡು ಕೆಲವು ಸಂಗೀತಾ ಹಾಗೂ ವಿಜಯ್ ನಡುವೆ ವೈಮನಸ್ಸು ಉಂಟಾಗಿದೆ. ಈ ಕಾರಣದಿಂದ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಹರಿದಾಡುತ್ತಿತ್ತು. ಇದೀಗ ಮತ್ತೊಮ್ಮೆ ಇದೇ ಸುದ್ದಿಯನ್ನು ಕೊಂಚ ಮುಂದೆ ಹೋಗಿದ್ದು, ಸಂಗೀತಾ ಜೊತೆಗೆ ವಿಚ್ಚೇದನ ಪಡೆದುಕೊಂಡು ಬಳಿಕ ಸೌತ್ ನಟಿ ಕೀರ್ತಿ ಸುರೇಶ್ ರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

ಈ ಹಾದಿಯಲ್ಲೇ ಸೋಷಿಯಲ್ ಮಿಡಿಯಾದಲ್ಲಿ #justiceforsangeetha ಎಂಬ ಹ್ಯಾಷ್ ಟ್ಯಾಗ್ ಸಹ ಟ್ರೆಂಡ್ ಆಗುತ್ತಿದೆ. ವಿಜಯ್ ಹಾಗೂ ಕೀರ್ತಿ ಸುರೇಶ್ ಒಟ್ಟಿಗೆ ಇರುವಂತಹ ಪೊಟೋಗಳನ್ನು ಸಹ ಹಂಚಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಕೀರ್ತಿ ಸುರೇಶ್ ಹಾಗೂ ವಿಜಯ್ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಜೋರಾಗಿಯೇ ಹರಿದಾಡುತ್ತಿದೆ. ಇನ್ನೂ ಕೀರ್ತಿ ಸುರೇಶ್ ಹಾಗೂ ವಿಜಯ್ ಭೈರವ ಹಾಗೂ ಸರ್ಕಾರ್‍ ಎಂಬ ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳ ಬಳಿಕ ಇಬ್ಬರ ನಡುವೆ ಸ್ನೇಹ ಉಂಟಾಗಿ ಬಳಿಕ ಪ್ರೀತಿ ಏರ್ಪಟ್ಟಿದ್ದು ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕಾಗಿಯೇ ವಿಜಯ್ ತನ್ನ ಪತ್ನಿ ಸಂಗೀತಾಗೆ ವಿಚ್ಚೇದನ ಸಹ ನೀಡಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಇನ್ನೂ ವಿಜಯ್ ತಮ್ಮ ಅಭಿಮಾನಿಯಾದ ಸಂಗೀತಾ ರನ್ನೇ ಪ್ರೀತಿಸಿ ಮದುವೆಯಾದರು. ಕಳೆದ 22 ವರ್ಷಗಳ ಹಿಂದೆ ಈ ಜೋಡಿಯ ಮದುವೆಯಾಗಿದ್ದು. ಅವರಿಬ್ಬರಿಗೆ ಒಬ್ಬ ಮಗ ಸಹ ಇದ್ದು, ಆತನು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಅವರಿಬ್ಬರೂ ಬೇರೆಯಾಗಲಿದ್ದಾರೆ, ಕೀರ್ತಿ ಸುರೇಶ್ ರವರನ್ನು ಮದುವೆಯಾಗಲಿದ್ದಾರೆ ಎಂಬ ರೂಮರ್‍ ಹರಿದಾಡುತ್ತಿದ್ದು, ಈ ಬಗ್ಗೆ ವಿಜಯ್ ಆಗಲಿ ಅಥವಾ ಸಂಗೀತಾ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿಜಯ್ ಅಭಿಮಾನಿಗಳು ಮಾತ್ರ ಇದೆಲ್ಲಾ ಸುಳ್ಳು ಸುದ್ದಿ ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.