Film News

ನನ್ನ ಮೇಲೆ ಏಕಿಷ್ಟು ಕೋಪ ಎಂದ ರಷ್ಮಿಕಾ, ವೈರಲ್ ಆದ ರಷ್ಮಿಕಾ ಕಾಮೆಂಟ್ಸ್….!

ಕನ್ನಡ ಸಿನೆಮಾದ ಮೂಲಕ ಸೌತ್ ಅಂಡ್ ನಾರ್ತ್‌ನಲ್ಲಿ ಪುಲ್ ಬ್ಯುಸಿಯಾದ ನಟಿ ರಶ್ಮಿಕಾ ಇತ್ತೀಚಿಗೆ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಕೆಲವು ದಿನಗಳಿಂದ ರಶ್ಮಿಕಾ ಏನು ಮಾಡಿದರೂ ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಎಷ್ಟರ ಮಟ್ಟಿಗೆ ಅಭಿಮಾನ ಹೊಂದಿರುತ್ತಾರೋ ಅದೇ ಮಟ್ಟಿಗೆ ವಿಮರ್ಶೆಗಳನ್ನು ಸಹ ಎದುರಿಸುತ್ತಿರುತ್ತಾರೆ. ಇದೀಗ ರಶ್ಮಿಕಾ ಸಹ ಅದೇ ರೀತಿಯಲ್ಲಿ ವಿಮರ್ಶೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಆಕೆ ಟ್ರೋಲ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ಕಡಿಮೆ ಸಮಯದಲ್ಲೇ  ನಟಿ ರಶ್ಮಿಕಾ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯಾಗಿದ್ದಾರೆ. ಆಕೆ ಎಷ್ಟು ಖ್ಯಾತಿ ಪಡೆದುಕೊಂಡಿದ್ದಾರೆಯೋ ಅದೇ ಮಾದರಿಯಲ್ಲಿ ವಿಮರ್ಶೆಗಳಿಗೂ ಸಹ ಗುರಿಯಾಗುತ್ತಿರುತ್ತಾರೆ. ಇನ್ನೂ ಸಿನೆಮಾ ಸೆಲಬ್ರೆಟಿಗಳಿಗೆ ಇಂತಹ ಟ್ರೋಲ್ ಗಳು, ವಿಮರ್ಶೆಗಳು ಸರ್ವೆ ಸಾಮಾನ್ಯ. ಕೆಲವು ನಟಿಯರು ತಮ್ಮ ಮೇಲೆ ಏನೆ ಟ್ರೋಲ್ ಗಳು ಬಂದರೂ ಸಹ ಕಿವಿಗೆ ಹಾಕಿಕೊಳ್ಳದೇ ತಮ್ಮ ಕೆಲಸ ತಾವು ಮಾಡಿಕೊಳ್ಳುತ್ತಾ ಸಾಗುತ್ತಿರುತ್ತಾರೆ. ಆದರೆ ವಿಮರ್ಶೆಗಳು ಜಾಸ್ತಿಯಾದರೇ ಕೆಲವು ಸೆಲೆಬ್ರೆಟಿಗಳೂ ಸಹ ಆಗಾಗ ಕೌಂಟರ್‍ ನೀಡುತ್ತಲೇ ಇರುತ್ತಾರೆ. ಇದೀಗ ರಶ್ಮಿಕಾ ಸಹ ತನ್ನ ವಿರುದ್ದದ ಟ್ರೋಲ್ ಗಳ ಬಗ್ಗೆ ಮಾತನಾಡಿದ್ದಾರೆ. ಆಕೆ ನೀಡಿದ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದ ತುಂಬಾ ಹರಿದಾಡುತ್ತಿದೆ.

ನಟಿ ರಶ್ಮಿಕಾ ತನ್ನ ಮೇಲಿನ ಟ್ರೋಲ್ ಗಳಿಗೆ ತನ್ನದೇ ಆದ ಶೈಲಿಯಲ್ಲಿ ಉತ್ತರ ನೀಡುತ್ತಿರುತ್ತಾರೆ. ಅನೇಕ ಬಾರಿ ಟ್ರೋಲರ್‍ ಗಳ ಮೇಲೆ ಆಕ್ರೋಷವನ್ನು ಸಹ ಹೊರಹಾಕಿದ್ದರು. ಇದೀಗ ಮತ್ತೊಮ್ಮೆ ಆಕೆ ಟ್ರೋಲರ್‍ ಬಗ್ಗೆ ಕಿಡಿಕಾರಿದ್ದಾರೆ. ನಾನು ಸೋಷಿಯಲ್ ಮಿಡಿಯಾದಲ್ಲಿ ಎದುರಾಗುವಂತಹ ಟ್ರೋಲ್ ಗಳ ಬಗ್ಗೆ ಚಿಂತಿಸುವುದಿಲ್ಲ. ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿರುತ್ತದೆ. ಈ ಕಾರಣದಿಂದಲೇ ತಮಗೆ ಇಷ್ಟ ಬಂದಂತೆ ಮಾತನಾಡುತ್ತಿರುತ್ತಾರೆ ಎಂದು ನಾನು ಸಹ ಸುಮ್ಮನಿದ್ದೆ. ಆದರೆ ನಾನು ಈ ಬಗ್ಗೆ ಮಾತನಾಡದೇ ಇರುವ ಕಾರಣ ಅನೇಕ ಸಮಸ್ಯೆಗಳು ಎದುರಾಗುತ್ತಿದೆ. ಈ ಹಿಂದೆ ಈ ಟ್ರೋಲ್ ಗಳು ನನ್ನನ್ನು ಮಾತ್ರ ಕಾಡುತ್ತಿತ್ತು. ಆದರೆ ಇದೀಗ ನನ್ನ ಕುಟುಂಬಸ್ಥರನ್ನು ಸಹ ಕಾಡುತ್ತಿದೆ. ನನ್ನ ಬಗ್ಗೆ ಏನೇ ಟ್ರೋಲ್ ಬಂದರೂ ನನ್ನ ಪೋಷಕರು ಏನು ಇದು ನಿಜವೇ ಎಂದು ಹಾಗೂ ನನ್ನ ತಂಗಿ ಅಕ್ಕ ನಿನ್ನ ಬಗ್ಗೆ ಶಾಲೆಯಲ್ಲಿ ಹಾಗೆ ಮಾತನಾಡಿಕೊಳ್ಳುತ್ತಿದ್ದಾರೆ ನಿಜವೇ ಎಂದು ಕೇಳುತ್ತಿದ್ದಾರೆ. ಇದು ನನಗೆ ತುಂಬಾ ನೋವು ತರುತ್ತಿದೆ.

ಇನ್ನೂ ಕಳೆದ ಆರು ವರ್ಷಗಳಿಂದ ನಾನು ಇಂತಹುದೇ ವಿಮರ್ಶೆಗಳನ್ನು ಎದುರಿಸುತ್ತಿದ್ದೇನೆ. ನಾನು ಇಲ್ಲಿಯವರೆಗೂ ಯಾರ ಬಗ್ಗೆ ಸಹ ತಪ್ಪಾಗಿ ಮಾತನಾಡಿಲ್ಲ. ಆದರೆ ನನ್ನನ್ನು ಏತಕ್ಕಾಗಿ ಟಾರ್ಗೆಟ್ ಮಾಡುತ್ತಿದ್ದೀರಾ ಅರ್ಥ ಆಗುತ್ತಿಲ್ಲ. ನಾನು ಸಿನಿರಂಗದಲ್ಲಿ ಇರಬಾರದೆಂದು ನಿಮ್ಮ ಉದ್ದೇಶವೇ ಎಂಬುದೂ ಸಹ ಅರ್ಥವಾಗುತ್ತಿಲ್ಲ. ನಿಜಕ್ಕೂ ಏನಾದರೂ ಸಮಸ್ಯೆ ಇದ್ದರೇ ನನ್ನ ಬಳಿ ಹೇಳಿ ಅದು ಬಿಟ್ಟು ಇಂತಹ ಟ್ರೋಲ್ ಗಳನ್ನು ಮಾಡಬೇಡಿ ಎಂದಿದ್ದಾರೆ. ಇನ್ನೂ ರಶ್ಮಿಕಾ ಟ್ರೋಲರ್‍ ಗಳ ಬಗ್ಗೆ ನೀಡಿದ ಈ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top