Film News

ನನಗೆ ತಂದೆ ಇಲ್ಲ, ತಂದೆ ತಾಯಿ ಎಲ್ಲಾ ನೀವೆ ಎಂದ ಮಹೇಶ್ ಬಾಬು, ಗುಂಟೂರು ಖಾರಂ ಈವೆಂಟ್ ನಲ್ಲಿ ಎಮೋಷನಲ್ ಆದ ನಟ….!

ಟಾಲಿವುಡ್ ಸೂಪರ್‍ ಸ್ಟಾರ್‍ ಮಹೇಶ್ ಬಾಬು ಗುಂಟೂರು ಖಾರಂ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಜ.12 ರಂದು ಈ ಸಿನೆಮಾ ಬಿಡುಗಡೆಯಾಗಲಿದ್ದು, ಸಿನೆಮಾದ ಪ್ರಮೋಷನ್ ಕೆಲಸಗಳೂ ಭರದಿಂದ ಸಾಗುತ್ತಿದೆ. ಈ ಹಾದಿಯಲ್ಲೇ ಈ ಸಿನೆಮಾದ ಪ್ರಿ ರಿಲೀಸ್ ಈವೆಂಟ್ ನಲ್ಲಿ ಎಮೋಷನಲ್ ಆಗಿದ್ದಾರೆ. ನನಗೆ ತಂದೆಯಿಲ್ಲ, ತಂದೆ ತಾಯಿ ಎಲ್ಲಾ ನೀವೆ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದ್ದಾರೆ. ಮಹೇಶ್ ಬಾಬು ರವರ ಈ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.

ನಟ ಮಹೇಶ್ ಬಾಬು ರವರ ತಂದೆ ಸೂಪರ್‍ ಸ್ಟಾರ್‍ ಕೃಷ್ಣ ಗುಂಟೂರು ಖಾರಂ ಸಿನೆಮಾದ ಶೂಟಿಂಗ್ ಸಮಯದಲ್ಲೇ ಮೃತಪಟ್ಟಿದ್ದರು. ದಿವಂಗತ ಕೃಷ್ಣ ಮರಣದ ನಂತರ ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದ ರಿಲೀಸ್ ಆಗುತ್ತಿದೆ. ಈ ನೋವನ್ನು ಮಹೇಶ್ ಬಾಬು ಈ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಹೊರಹಾಕಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಹಿರೋ ಆಗಿ ಎಂಟ್ರಿ ಕೊಟ್ಟು 25 ವರ್ಷ ಪೂರ್ಣಗೊಂಡಿದೆ ಎಂದು ಎವಿಯಲ್ಲಿ ತೋರಿದ್ದಾರೆ. ನಾನು ಅದನ್ನು ನಂಬೋಕೆ ಆಗ್ತಾ ಇಲ್ಲ. ಇಷ್ಟು ದಿನಗಳ ಕಾಲ ನೀವು ತೋರಿಸಿದ ಅಭಿಮಾನಕ್ಕೆ ನಾನು ಚಿರ ಋಣಿಯಾಗಿರುತ್ತೇನೆ. ನಿಮ್ಮ ಅಭಿಮಾನದಿಂದಲೇ ನಾನು ಇಲ್ಲಿ ಇದ್ದೀನಿ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ನನ್ನ ಮೇಲಿನ ನಿಮ್ಮ ಅಭಿಮಾನ ಪ್ರತೀ ವರ್ಷ ಹೆಚ್ಚಾಗುತ್ತಿರುತ್ತದೆ. ನಿಮ್ಮ ಪ್ರೀತಿ ಹೆಚ್ಚಾಗುತ್ತಿದೆ ಮಾತುಗಳಿಲ್ಲ, ಏನು ಹೇಳಬೇಕೆಂದು ಗೊತ್ತಾಗ್ತಾ ಇಲ್ಲ. ಸದಾ ಹೇಳುತ್ತಿರುತ್ತೇನೆ ಕೈ ಎತ್ತಿ ಮುಗಿಯುವುದು ಬಿಟ್ಟರೇ ಏನು ಮಾಡಲಾರೆ ಎಂದು ಸ್ಟೇಜ್ ಮೇಲಿಂದ ಅಭಿಮಾನಿಗಳಿಗೆ ಕೈ ಮುಗಿದಿದ್ದಾರೆ. ಬಳಿಕ ಅಭಿಮಾನಿಗಳು ಸಹ ಆತನಿಗೆ ಕೈ ಮುಗಿದಿದ್ದಾರೆ. ನೀವು ಸದಾ ನನ್ನ ಎದೆಯಲ್ಲೇ ಇರುತ್ತೀರಾ. ನನಗೆ ಸಂಕ್ರಾಂತಿ ಚೆನ್ನಾಗಿ ಒಲಿದ ಹಬ್ಬವಾಗಿದೆ. ಸಂಕ್ರಾಂತಿಯಂದು ಬಿಡುಗಡೆಯಾದ ನನ್ನ ಹಾಗೂ ನನ್ನ ತಂದೆಯ ಸಿನೆಮಾಗಳು ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ. ಈ ಬಾರಿ ಸಹ ಒಳ್ಳೆಯ ಸಕ್ಸಸ್ ಕಾಣುವ ನಿರೀಕ್ಷೆಯಿದೆ. ಆದರೆ ಈ ಬಾರಿ ಹೊಸದಾಗಿದೆ. ಈ ಬಾರಿ ನನ್ನೊಂದಿಗೆ ನನ್ನ ತಂದೆಯಿಲ್ಲ. ಇನ್ನು ಮುಂದೆ ನನಗೆ ನೀವೆ ತಂದೆ, ನೀವೆ ತಾಯಿ ಎಲ್ಲವೂ ನೀವೆ, ನಿಮ್ಮ ಆರ್ಶಿವಾದ ನನಗೆ ಇರಬೇಕೆಂದು ಮನಸ್ಪೂರ್ತಿಯಾಗಿ ಕೋರುತ್ತೇನೆ ಎಂದು ಎಮೋಷನಲ್ ಆಗಿದ್ದಾರೆ.

ಇನ್ನೂ ಗುಂಟೂರು ಖಾರಂ ಸಿನೆಮಾ ಇದೇ ಫೆ.12 ರಂದು ತೆರೆಕಾಣಲಿದೆ. ಈ ಸಿನೆಮಾವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ.  ಮಹೇಶ್ ಬಾಬು ರವರ ಜೊತೆಗೆ ಶ್ರೀಲೀಲಾ ಹಾಗೂ ಮೀನಾಕ್ಷಿ ಚೌದರಿ ನಟಿಸಿದ್ದಾರೆ. ಇತ್ತಿಚಿಗಷ್ಟೆ ಈ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮವನ್ನು ಗುಂಟೂರು ನಲ್ಲಿ ಆಯೋಜಿಸಲಾಗಿತ್ತು.

Most Popular

To Top