ನಾಪತ್ತೆಯಾದ ಬೆಕ್ಕನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ, ವೈರಲ್ ಆದ ಪೋಸ್ಟರ್…..!

Follow Us :

ಸಮಾಜದಲ್ಲಿ ಅನೇಕರು ತಮ್ಮ ಸಾಕು ಪ್ರಾಣಿಗಳ ಬಗ್ಗೆ ತುಂಬಾನೆ ಪ್ರೀತಿ ಬೆಳೆಸಿಕೊಂಡಿರುತ್ತಾರೆ. ಅದರಲ್ಲೂ ಕೆಲವರು ತಮ್ಮ ಸಾಕು ಪ್ರಾಣಿಗಳು ಸತ್ತರೇ ಆತ್ಮಹತ್ಯೆ ಮಾಡಿಕೊಂಡ ಅನೇಕ ಘಟನೆಗಳನ್ನು ಸಹ ನೋಡಿದ್ದೇವೆ. ಇದೀಗ ತಮ್ಮ ಸಾಕು ಬೆಕ್ಕು ಒಂದು ನಾಪತ್ತೆಯಾಗಿದ್ದು, ಅದನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಪೊಸ್ಟರ್‍ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ನೋಯ್ಡ ಮೂಲದ ವ್ಯಕ್ತಿಯೊಬ್ಬರು ಬೆಕ್ಕನ್ನು ಪ್ರೀತಿಯಿಂದ ಸಾಕಿದ್ದರಂತೆ. ಆದರೆ ಅದು ಕಳೆದುಹೋಗಿದೆ ಎಂದು ತನ್ನ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡುವುದಾಗಿ ಪೋಸ್ಟರ್‍ ಹಾಕಿದ್ದಾರೆ. ತನ್ನ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಅಥವಾ ಮಾಹಿತಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಕೊಡುವಾಗಿ ತಿಳಿಸಿದ್ದಾರೆ. ಈ ಪೋಸ್ಟರ್‍ ನಲ್ಲಿ ಕಾಣೆಯಾದ ಬೆಕ್ಕಿನ ಪೊಟೋ ಹಾಗೂ ಅದರ ಮೈ ಬಣ್ಣದ ಬಗ್ಗೆ ತಿಳಿಸಿದ್ದಾರೆ. ಇದೀಗ ಈ ಪೋಸ್ಟರ್‍ ತುಂಬಾನೆ ವೈರಲ್ ಆಗುತ್ತಿದೆ.

ಇನ್ನೂ ಪೋಸ್ಟರ್‍ ನಲ್ಲಿ ಬೆಕ್ಕಿನ ಹೆಸರು ಚೀಕು, ವಯಸ್ಸು 1.5, ಬಣ್ಣ ಶುಂಠಿಯ ಬಣ್ಣ, ಕುತ್ತಿಗೆಯ ಭಾಗದಲ್ಲಿ ಬಿಳಿ ಕೂದಲು ಇದೆ ಎಂದು ಬರೆಯಲಾಗಿದೆ. ಈ ಬೆಕ್ಕಿನ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೋಸ್ಟರ್‍ ನಲ್ಲಿ ಮುದ್ರಿಸಲಾಗಿದೆ. ಈ ಪೋಸ್ಟರ್‍ ಅನ್ನು ಬೆಕ್ಕಿನ ಮಾಲೀಕ ಅಜಯ್ ಕುಮಾರ್‍ ರವರು ತಮ್ಮ ಟ್ವಿಟರ್‍ (ಎಕ್ಸ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ಡಿ.24 ರಿಂದ ಈ ಬೆಕ್ಕು ಕಾಣೆಯಾಗಿದೆಯಂತೆ. ಏನೇ ಆಗಲಿ ತನ್ನ ಪ್ರೀತಿಯ ಬೆಕ್ಕನ್ನು ಹುಡುಕಲು ಮಾಲೀಕ ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.