ಕುಡುಗೋಲಿನಿಂದ ಪತ್ನಿಯ ಮೇಲೆ ಹಲ್ಲೆ, ಆಕೆ ಸತ್ತಿದ್ದಾಳೆಂದು ಆತ್ಮಹತ್ಯೆ ಮಾಡಿಕೊಂಡ ಪತಿ…!

Follow Us :

ಕೌಂಟುಂಬಿಕ ಕಲಹಗಳಿಂದ ಅನೇಕ ಸಂಸಾರಗಳು ಹಾಳಾಗುತ್ತವೆ, ಕೆಲವೊಮ್ಮೆ ಕೊಲೆಗಳೂ ಸಹ ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಟ್ಟಗೊಂಡನಹಳ್ಳಿಯಲ್ಲಿ ನಡೆದಿದೆ. ಕುಡುಗೋಲಿನಿಂದ ತನ್ನ ಪತ್ನಿಯನ್ನು ಕೊಲೆ ಮಾಡಲು ಹಲ್ಲೆ ಮಾಡಿದ್ದಾನೆ. ಆಕೆ ಸತ್ತಿದ್ದಾಳೆಂದು ಭಾವಿಸಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ತೀವ್ರವಾಗಿ ಗಾಯಗೊಂಡ ಪತ್ನಿ ಇನ್ನೂ ಜೀವಂತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಟ್ಟಗೊಂಡನಹಳ್ಳಿ ಗ್ರಾಮದ ನಿವಾಸಿ ಪ್ರಶಾಂತ್ (32) ಎನ್ನಲಾಗಿದೆ. ಮೃತ ಪ್ರಶಾಂತ್ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗೌರಿಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ. ಕಳೆದ ಎರಡು ವರ್ಷಗಳ ಹಿಂದೆ ಆತ ಬಿಟ್ಟಗೊಂಡನಹಳ್ಳಿ ಗ್ರಾಮದ ಬಿಂದು ಜೊತೆಗೆ ವಿವಾಹವಾಗಿದ್ದ. ಆದರೆ ಇಬ್ಬರ ನಡುವೆ ಕಲಹಗಳು ಏರ್ಪಟ್ಟು ಆಕೆ ತವರು ಮನೆಗೆ ಸೇರಿದ್ದಳು. ಇದರಿಂದ ಕೋಪಗೊಂಡ ಪ್ರಶಾಂತ್  ತನ್ನ ಪತ್ನಿ ಬಿಂದು ಇದ್ದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಬಿಂದು ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಮೃತ ಪ್ರಶಾಂತ್ ತನ್ನ ಪತ್ನಿ ಬಿಂದು ಳನ್ನು ಕೊಲೆ ಮಾಡಲು ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಹಲ್ಲೆ ಮಾಡಿದ ಕಾರಣದಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಆತ ಸಹ ನೇಣಿಗೆ ಶರಣಾಗಿದ್ದಾನೆ. ಆದರೆ ಬಿಂದು ಗಂಭೀರವಾಗಿ ಗಾಯಗೊಂಡಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಆಕೆ ಸಾವು ನೋವಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಹೊಳೆನರಸೀಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.