Film News

ಖ್ಯಾತ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ, ಬಳ್ಳಾರಿ ಉತ್ಸವದಲ್ಲಿ ನಡೆದ ಘಟನೆ, ಫೇಕ್ ಸುದ್ದಿ ಹಬ್ಬಿಸಬೇಡಿ ಎಂದ ಗಾಯಕಿ…..!

ಸಿನಿರಂಗದಲ್ಲಿ ಅನೇಕ ಕಲಾವಿದರು ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಳ್ಳುತ್ತಾರೆ. ಅವರ ಸಾಲಿಗೆ ಗಾಯಕಿ ಮಂಗ್ಲಿ ಸಹ ಸೇರುತ್ತಾರೆ. ಕಡಿಮೆ ಸಮಯದಲ್ಲೇ ಆಕೆ ಹೆಚ್ಚು ಫೇಂ ಪಡೆದುಕೊಂಡ ಗಾಯಕಿಯಾಗಿದ್ದಾರೆ. ತೆಲುಗು ಸೇರಿದಂತೆ ಸೌತ್ ನ ಅನೇಕ ಭಾಷೆಗಳಲ್ಲಿ ಆಕೆ ಹಾಡುಗಳನ್ನು ಹಾಡುವ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ನಟಿಯಾಗಿಯೂ ಸಹ ಕೆರಿಯರ್‍ ಆರಂಭಿಸುತ್ತಿದ್ದಾರೆ. ಇತ್ತಿಚಿಗೆ ಕರ್ನಾಟಕದ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕೆಯ ಕಾರಿನ ಮೇಲೆ ಕಲ್ಲು ತುರಾಟ ನಡೆಸಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ಸಹ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಈ ಬಗ್ಗೆ ಮಂಗ್ಲಿ ಸಹ ಸೋಷಿಯಲ್ ಮಿಡಿಯಾದಲ್ಲಿ ನೋಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಗಣಿ ನಾಡು ಎಂದೇ ಕರೆಯಲಾಗುವ ಬಳ್ಳಾರಿ ಉತ್ಸವ ಅದ್ದೂರಿಯಾಗಿ ನೆರವೇರಿದ್ದು, ಎರಡು ದಿನಗಳ ಕಾಲ ಈ ಉತ್ಸವ ನಡೆಯಿತು. ಈ ಉತ್ಸವಕ್ಕೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಚಾಲನೆ ನೀಡಿದ್ದಾರೆ. ಇನ್ನೂ ಈ ಉತ್ಸವದಲ್ಲಿ ಅನೇಕ ಸಿನೆಮಾ ಸೆಲೆಬ್ರೆಟಿಗಳೂ ಸಹ ಭಾಗಿಯಾಗಿದ್ದರು. ಹಿರಿಯ ನಟ ರಾಘವೇಂದ್ರ ರಾಜಕುಮಾರ್‍, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್‍ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಜೊತೆಗೆ ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಮಂಗ್ಲಿ ಹಾಗೂ ಎಂ.ಡಿ ಪಲ್ಲವಿ ರವರು ಸಹ ತಮ್ಮ ಗಾಯನದ ಮೂಲಕ ಎಲ್ಲರನ್ನೂ ರಂಜಿಸಿದರು. ಇದರ ಜೊತೆಗೆ ಕನ್ನಡದ ಆಂಕರ್‍ ಅನುಶ್ರೀ ಹಾಗೂ ಮ್ಯೂಸಿಕ್ ಡೈರೆಕ್ಟರ್‍ ಅರ್ಜುನ್ ಜನ್ಯ ರವರ ತಂಡ ಸಹ ಭಾಗಿಯಾಗಿದ್ದು ಮನರಂಜನಾ ಕಾರ್ಯಕ್ರಮಗಳನ್ನು ಸಹ ನಡೆಸಿಕೊಟ್ಟರು. ಇನ್ನೂ ಈ ಉತ್ಸವದಲ್ಲಿ ಅಪಾರ ಸಂಖ್ಯೆಯ ಜನತೆ ಭಾಗಿಯಾಗಿ ಎಂಜಾಯ್ ಮಾಡಿದ್ದರು.

ಇನ್ನೂ ಬಳ್ಳಾರಿಯ ಮುನಿಸಿಪಲ್ ಕಾಲೇಜಿನ ಮೈದಾನದಲ್ಲಿ ನಡೆದ ಈ ಬಳ್ಳಾರಿ ಉತ್ಸವದಲ್ಲಿ ಖ್ಯಾತ ಗಾಯಕಿ ಮಂಗ್ಲಿ ಭಾಗಿಯಾಗಿದ್ದರು. ಇನ್ನೂ ಉತ್ಸವದಲ್ಲಿ ಅನೇಕ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿ ಕಾರ್ಯಕ್ರಮದಿಂದ ಹೊರಹೋಗುವ ಸಮಯದಲ್ಲಿ ಅನೇಕ ಯುವಕರು ಮಂಗ್ಲಿಯನ್ನು ಕಾಣಲು ಮುಗಿಬಿದ್ದರು. ಇನ್ನೂ ವೇದಿಕೆಯ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್ ಒಳಗೆ ಪುಂಡರು ನುಗ್ಗಿದ್ದರು. ಈ ಸಮಯದಲ್ಲಿ ಅಲ್ಲಿದ್ದ ಪೋಲಿಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಬಳಿಕ ಮಂಗ್ಲಿ ಹೋಗುತ್ತಿದ್ದ ಕಾರಿನ ಮೇಲೆ ಕೆಲ ಪುಂಡರು ಕಲ್ಲುಗಳನ್ನು ಎಸೆದಿದ್ದು, ಮಂಗ್ಲಿ ಕಾರಿನ ಮುಂಭಾಗದ ಗ್ಲಾಸ್ ಗಳು ಒಡೆದಿದೆ. ಈ ಬಗ್ಗೆ ಮಂಗ್ಲಿ ಸಹ ಸೋಷಿಯಲ್ ಮಿಡಿಯಾದಲ್ಲಿ ನೋಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ.

ಇನ್ನೂ ಗಾಯಕಿ ಮಂಗ್ಲಿ ಪಾದರಾಯ ಎಂಬ ಸಿನೆಮಾದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸಿನೆಮಾವನ್ನು ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದು, ಕಥೆ, ಸಂಭಾಷಣೆಯನ್ನೂ ಸಹ ಬರೆದಿದ್ದಾರೆ. ಇನ್ನೂ ಮಾಸ್ತಿಗುಡಿ ಖ್ಯಾತಿಯ ನಿರ್ದೇಶಕ ನಾಗಶೇಖರ್‍ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಿನೆಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸಿನೆಮಾದ ಶೂಟಿಂಗ್ ಸಹ ನಡೆಯಲಿದ್ದು, ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿರೋದು ಮತ್ತೊಂದು ವಿಶೇಷ ಎನ್ನಬಹುದಾಗಿದೆ.

Most Popular

To Top