ನನ್ನ ತಂದೆಯ ಕಾರಣದಿಂದ ಬಂದಂತಹ ಅವಕಾಶಗಳು ಮಿಸ್ ಆಯ್ತು ಎಂದ ನಟಿ ವರಲಕ್ಷ್ಮೀ ಶರತ್ ಕುಮಾರ್….!

ಸೌತ್ ಸಿನಿರಂಗದ ಸ್ಟಾರ್‍ ನಟ ಶರತ್ ಕುಮಾರ್‍ ರವರ ಪುತ್ರಿ ವರಲಕ್ಷ್ಮೀ ಶರತ್ ಕುಮಾರ್‍ ಬಣ್ಣದ ಲೋಕಕ್ಕೆ ಕಾಲಿಟ್ಟು ಅನೇಕ ವರ್ಷಗಳು ಕಳೆದಿದ್ದು, ಅನೇಕ ಸಿನೆಮಾಗಳಲ್ಲಿ ಆಕೆ ಲೇಡಿ ವಿಲನ್ ಆಗಿಯೇ ಕಾಣಿಸಿಕೊಂಡು ಫೇಂ ಸಂಪಾದಿಸಿಕೊಂಡಿದ್ದಾರೆ. ಚಾಲೆಂಜಿಂಗ್ ಪಾತ್ರಗಳ ಮೂಲಕ ಫೇಂ ಪಡೆದುಕೊಂಡ ಈಕೆ ಅನೇಕ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ತನ್ನ ತಂದೆ ಶರತ್ ಕುಮಾರ್‍ ರವರ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆಕೆಯ ಹೇಳಿಕೆಗಳು ಇದೀಗ ಸಖತ್ ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಅನೇಕರು ಸ್ಟಾರ್‍ ಗಳ ಮಕ್ಕಳು ತಮ್ಮ ಪೋಷಕರ ಹೆಸರುಗಳನ್ನು ಹೇಳಿಕೊಂಡು ಸಿನಿರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಸಿನಿರಂಗದಲ್ಲಿ ಕೇಳಿಬರುತ್ತಲೇ ಇರುತ್ತದೆ. ಈ ಬಗ್ಗೆ ಅನೇಕ ವಿಮರ್ಶೆಗಳೂ ಸಹ ಎದುರಾಗುತ್ತಿರುತ್ತವೆ ಇರುತ್ತದೆ. ಈ ಹಾದಿಯಲ್ಲೆ ನಟಿ ವರಲಕ್ಷ್ಮೀ ಶರತ್ ಕುಮಾರ್‍ ತಾನು ಸ್ವಂತ ಪ್ರತಿಭೆಯಿಂದ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ನಾಯಕಿಯಾಗಿ ಎಂಟ್ರಿ ಕೊಟ್ಟ ಈಕೆ ವಿಲನ್ ಪಾತ್ರಗಳಲ್ಲೆ ಹೆಚ್ಚಾಗಿ ಕಾಣಿಸಿಕೊಂಡು ಖ್ಯಾತಿ ಪಡೆದುಕೊಂಡಿದ್ದಾರೆ. ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ತೆರೆಗೆ ಬಂದ ಪೋಡಾಪೊಡಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆಗೆ ಈ ಸಿನೆಮಾ ಅಷ್ಟೊಂದು ಸಕ್ಸಸ್ ತಂದುಕೊಡಲಿಲ್ಲ. ಬಳಿಕ ಆಕೆ ತಾರ್ತೆ ತಪ್ಪಟೈ ಎಂಬ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಸರ್ಕಾರ್‍, ಸಂಡೈ ಕೋಳಿ 2 ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು.

ಇನ್ನೂ ಸುಮಾರು ದಶಕದಿಂದ ನೆಗೆಟೀವ್ ರೋಲ್ ಗಳ ಮೂಲಕ ಸಿನಿರಂಗದಲ್ಲಿ ಬ್ಯುಸಿಯಾಗಿರುವ ಈಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಶಂಕರ್‍ ನಿರ್ದೇಶನ ಬಾಯ್ಸ್ ಸಿನೆಮಾದಲ್ಲಿ ಮೊದಲಿಗೆ ವರಲಕ್ಷ್ಮೀ ಆಯ್ಕೆಯಾಗಿದ್ದರಂತೆ. ಈ ಸಿನೆಮಾದಲ್ಲಿ ನಟಿಸಲು ಆಕೆಗೆ ಕರೆ ಬಂದಿದ್ದು, ಆಡಿಷನ್, ಸ್ಕ್ರೀನ್ ಟೆಸ್ಟ್ ಸಹ ಮಾಡಿದ್ದರಂತೆ. ಆ ಸಿನೆಮಾದಲ್ಲಿ ನಟಿಸಲು ತುಂಬಾ ಆಸಕ್ತಿಯಿಂದ ಸಹ ಇದ್ದರಂತೆ. ಆದರೆ ಅದೇ ಸಮಯದಲ್ಲಿ ಆ ಸಿನೆಮಾದಲ್ಲಿ ನಟಿಸಲು ವರಲಕ್ಷ್ಮೀ ತಂದೆ ಶರತ್ ಕುಮಾರ್‍ ನಿರಾಕರಿಸಿದ್ದರಂತೆ. ಬಳಿಕ ಮತ್ತೊಂದು ಸೂಪರ್‍ ಹಿಟ್ ಸಿನೆಮಾದಲ್ಲಿ ಸಹ ನಟಿಸಲು ಅವಕಾಶ ಬಂದಾಗ ಸಹ ಶರತ್ ಕುಮಾರ್‍ ಬೇಡ ಎಂದಿದ್ದರಂತೆ. ಮೊದಲು ವಿದ್ಯಾಭ್ಯಾಸ ಪೂರ್ಣಗೊಳಿಸಿ ಮತ್ತೆ ಸಿನೆಮಾಗಳ ಬಗ್ಗೆ ಯೋಚನೆ ಮಾಡೋಣ ಎಂದಿದ್ದರಂತೆ. ಈ ಮಾದರಿಯಲ್ಲಿ ಆಕೆ ಸಿನೆಮಾಗಳ ಅವಕಾಶಗಳನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

ಇನ್ನೂ ನಟಿ ವರಲಕ್ಷ್ಮೀ ಕೇವಲ ನೆಗೆಟೀವ್ ಪಾತ್ರಗಳಲ್ಲಿ ಮಾತ್ರವಲ್ಲದೇ ವಿವಿಧ ರೀತಿಯ ಸ್ಪೇಷಲ್ ಪಾತ್ರಗಳಲ್ಲೂ ಸಹ ನಟಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಆಕೆ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲೂ ಸಹ ಬಹುಬೇಡಿಕೆ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಸದ್ಯ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ.