Film News

ಮಲ್ಲು ಬ್ಯೂಟಿ ಮಾಳವಿಕಾ ಮೋಹನನ್ ಗೆ ಕಿಸ್ ಕೊಡು ಎಂದ ಅಭಿಮಾನಿ, ಮುತ್ತಿಟ್ಟು ಟ್ವಿಸ್ಟ್ ಕೊಟ್ಟ ಬ್ಯೂಟಿ….!

ಮಲಯಾಳಂ ಮೂಲದ ಯಂಗ್ ಬ್ಯೂಟಿ ಮಾಳವಿಕಾ ಮೋಹನನ್ ಇದೀಗ ಕ್ರೇಜಿ ನಟಿಯಾಗಿ ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಯಂಗ್ ಅಂಡ್ ಟ್ಯಾಲೆಂಟೆಡ್ ಹಿರೋಯಿನ್ ಮಾಳವಿಕಾ ಮೋಹನನ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸದಾ ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಕ್ರೇಜಿ ಪೋಸ್ಟ್ ಗಳು, ಹಾಟ್ ಪೊಟೋಶೂಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಅಭಿಮಾನಿಯೋರ್ವ ಮಾಳವಿಕಾಗೆ ಕಿಸ್ ಕೊಡುವಂತೆ ಕೇಳಿದ್ದು, ಆಕೆ ಕೂಡಲೇ ಕಿಸ್ ಸಹ ಕೊಟ್ಟಿದ್ದಾರೆ. ಆದರೆ ಅಲ್ಲೊಂದು ಟ್ವಿಸ್ಟ್ ಇದೆ. ಅಷ್ಟಕ್ಕೂ ಮಾಳವಿಕಾ ಕೊಟ್ಟ ಟ್ವಿಸ್ಟ್ ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ಮಾಳವಿಕಾ ಮೋಹನನ್ ರಜನಿಕಾಂತ್ ರವರ ಪೇಟ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಬಳಿಕ ದಳಪತಿ ವಿಜಯ್ ಅಭಿನಯದ ಮಾಸ್ಟರ್‍ ಸಿನೆಮಾದಲ್ಲೂ ಸಹ ಕ್ರೇಜ್ ಪಡೆದುಕೊಂಡಿದ್ದಾರೆ. ಮಾಳವಿಕ ಮೋಹನನ್ ಕಳೆದ 2013 ರಲ್ಲಿ ಪಟ್ಟಂಪೊಲೆ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ನಾನು ಮತ್ತು ವರಲಕ್ಷ್ಮೀ ಎಂಬ ಕನ್ನಡ ಸಿನೆಮಾದಲ್ಲೂ ಸಹ ನಟಿಸಿದರು. ಸದ್ಯ ಆಕೆ ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸಿನೆಮಾಗಳ ಜತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಹಾಟ್ ಪೊಟೋಶೂಟ್ಸ್ ಜೊತೆಗೆ ಆಗಾಗ ಅಭಿಮಾನಿಗಳೊಂದಿಗೆ ಲೈವ್ ಚಾಟ್ ಸೆಷನ್ ಸಹ ಮಾಡುತ್ತಿರುತ್ತಾರೆ. ಇದೀಗ ಆಕೆ ತನ್ನ ಟ್ವಿಟರ್‍ ಖಾತೆಯಲ್ಲಿ ಆಸ್ಕ್ ಮಿ ಮಾಳವಿಕಾ ಎಂಬ ಸೆಷನ್ ಮಾಡಿದ್ದು, ಅದರಲ್ಲಿ ಆಕೆಗೆ ಅನೇಕ ಪ್ರಶ್ನೆಗಳು ಎದುರಾಗಿದೆ.

ಇನ್ನೂ ಮಾಳವಿಕಾ ಮೋಹನನ್ ತನ್ನ ಟ್ವಿಟರ್‍ ಖಾತೆಯಲ್ಲಿ ಆಸ್ಕ್ ಮಾಳವಿಕ ಎಂಬ ಸೆಷನ್ ಆರಂಭಿಸಿದ್ದರು. ಈ ವೇಳೆ ಆಕೆಯ ಫಾಲೋವರ್ಸ್ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಓರ್ವ ವೀರಾಭಿಮಾನಿ ಮಾಳವಿಕಾ ಗೆ ವಿಭಿನ್ನವಾದ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನನಗೆ ಕಿಸ್ ಕೊಡುತ್ತೀಯಾ ಎಂದು ಹೇಳಿದ್ದಾರೆ. ಇದಕ್ಕೆ ಮಾಳವಿಕಾ ಸಹ ಶಾಖ್ ಆಗದೇ ಕೂಡಲೇ ರಿಯಾಕ್ಟ್ ಆಗಿದ್ದಾರೆ. ಆಕೆ ಕಿಸ್ ಕೊಟ್ಟಿದ್ದಾರೆ. ಆದರೆ ಇಲ್ಲೇ ಒಂದು ಟ್ವಿಸ್ಟ್ ಸಹ ಕೊಟ್ಟಿದ್ದಾರೆ. ನಾನು ಮುತ್ತನ್ನು ಕೊಡುತ್ತೇನೆ. ಆದರೆ ಆ ಮುತ್ತು ನಿಮ್ಮ ಡಿ.ಪಿ ಯಲ್ಲಿ ಮುದ್ದಾಗಿರುವ ಬೆಕ್ಕಿಗಾಗಿ ಎಂದು ಕಿಸ್ ಸಿಂಬಲ್ ಹಾಕಿದ್ದಾರೆ. ಇನ್ನೂ ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಟಿ ಮಾಳವಿಕಾ ಗೆ ಈ ಸೆಷನ್ ನಲ್ಲಿ ಅನೇಕ ಪ್ರಶ್ನೆಗಳು ಎದುರಾಗಿದೆ. ಅನೇಕ ಪ್ರಶ್ನೆಗಳಿಗೆ ಆಕೆ ರಿಯಾಕ್ಟ್ ಸಹ ಆಗಿದ್ದಾರೆ.

ಇನ್ನೂ ಮಾಳವಿಕಾ ಮೋಹನನ್ ಸದ್ಯ ವಿಕ್ರಂ ಚಿಯಾನ್ ಜೊತೆಗೆ ತಂಗಲಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗಾಗಿ ಆಕೆ ಆಕ್ಷನ್ ದೃಶ್ಯಗಳಿಗಾಗಿ ತರಬೇತಿಯನ್ನು ಸಹ ಪಡೆದುಕೊಂಡಿದ್ದಾರೆ. ಇನ್ನೂ ಬಾಹುಬಲಿ ಪ್ರಭಾಸ್ ಜೊತೆಗೆ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಹಾಗು ಮಾರುತಿ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ ರಾಜ್ ಡಿಲಕ್ಸ್ ಎಂಬ ಸಿನೆಮಾದಲ್ಲೂ ಸಹ ಮಾಳವಿಕಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ.

Most Popular

To Top