Film News

ಬಾಯ್ ಫ್ರೇಂಡ್ ಬಗ್ಗೆ ಬಾಯ್ಬಿಟ್ಟ ಕೀರ್ತಿ ಸುರೇಶ್, ಆಕೆ ಮಿಸ್ಟರಿ ಮ್ಯಾನ್ ಎಂದಿದ್ದು ಯಾರ ಬಗ್ಗೆ…!

ಸೌತ್ ಸಿನಿರಂಗದ ನಟಿ ಕೀರ್ತಿ ಸುರೇಶ್ ಇದೀಗ ಮೂವತ್ತರ ವಯಸ್ಸಿನ ಗಡಿ ದಾಟಿದ್ದಾರೆ. ಸುಮಾರು ದಿನಗಳಿಂದ ಕೀರ್ತಿ ಸುರೇಶ್ ಮದುವೆಯ ಸುದ್ದಿಗಳು ಜೋರಾಗುತ್ತಿವೆ. ಕೆಲವು ದಿನಗಳಿಂದ ಕೀರ್ತಿ ಸುರೇಶ್ ಮದುವೆಯ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಕೀರ್ತಿ ಸುರೇಶ್ ಯುವಕನೊಬ್ಬನೊಂದಿಗೆ ತುಂಬಾ ಕ್ಲೋಜ್ ಆಗಿ ಕಾಣಿಸಿಕೊಂಡಿದ್ದರು. ಆತನೇ ಕೀರ್ತಿ ಸುರೇಶ್ ಬಾಯ್ ಫ್ರೆಂಡ್ ಎಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಚರ್ಚೆ ಸಹ ನಡೆದಿತ್ತು. ಇದೀಗ ಕೀರ್ತಿ ಸುರೇಶ್ ಆತನ ಬಗ್ಗೆ ಬಾಯ್ಬಿಟ್ಟಿದ್ದು, ಆತನನ್ನು ಮಿಸ್ಟರಿ ಮ್ಯಾನ್ ಎಂದು ಹೇಳಿದ್ದಾರೆ.

ಸ್ಟಾರ್‍ ನಟಿ ಕೀರ್ತಿ ಸುರೇಶ್ ಸೌತ್ ಸಿನಿರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಮಹಾನಟಿ ಸಿನೆಮಾದ ಮೂಲಕ ಆಕೆ ರಾಷ್ಟ್ರೀಯ ಅವಾರ್ಡ್ ಸಹ ದೊರೆತಿದೆ. ಬಳಿಕ ಆಕೆ ಕೊಂಚ ಫೇಡ್ ಔಟ್ ಆದರೂ ಸರ್ಕಾರಿವಾರಿ ಪಾಠ ಸಿನೆಮಾದ ಮೂಲಕ ಮತ್ತೆ ಸಕ್ಸಸ್ ಕಂಡುಕೊಂಡರು. ಈ ಸಿನೆಮಾದ ಬಳಿಕ ಆಕೆಗೆ ಒಳ್ಳೆಯ ಬ್ರೇಕ್ ಸಿಕ್ಕಿದೆ ಎಂದು ಹೇಳಬಹುದು ಈ ಸಿನೆಮಾದ ಬಳಿಕ ತೆರೆಕಂಡ ಆಕೆಯ ಎಲ್ಲಾ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಇತ್ತೀಚಿಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿದ್ದಾರೆ. ಆಕೆಯ ಮದುವೆ ಹಾಗೂ ಬಾಯ್ ಫ್ರೆಂಡ್ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಕೀರ್ತಿ ಸುರೇಶ್ ಒಬ್ಬ ಯುವಕನ ಜೊತೆ ಕಾಣಿಸಿಕೊಂಡಿದ್ದರು. ಆತನೇ ಕೀರ್ತಿ ಸುರೇಶ್ ಬಾಯ್ ಫ್ರೇಂಡ್ ಎಂಬ ಚರ್ಚೆಗಳು ಜೋರಾದವು.

ಇದೀಗ ಈ ಬಗ್ಗೆ ಕೀರ್ತಿ ಸುರೇಶ್ ರಿಯಾಕ್ಟ್ ಆಗಿದ್ದಾರೆ. ಆಕೆ ತನ್ನ ಟ್ವಿಟರ್‍ ಖಾತೆಯ ಮೂಲಕ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಈ ಬಾರಿ ನನ್ನ ಬೆಸ್ಟ್ ಫ್ರೆಂಡ್ ಬಗ್ಗೆ ಈ ರೀತಿಯಲ್ಲಿ ಪ್ರಚಾರ ಮಾಡಿದ್ದೀಯಾ, ನನ್ನ ಲೈಫ್ ನಲ್ಲಿ ನಿಜವಾದ ಮಿಸ್ಟರಿ ಮ್ಯಾನ್ ಬಂದಾಗ ತಪ್ಪದೇ ತೋರಿಸುತ್ತೇನೆ. ಅಲ್ಲಿಯವರೆಗೂ ಸುಮ್ಮನೆ ಇರಿ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅರ್ಥ ಬರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇನ್ನೂ ಕೀರ್ತಿ ಸುರೇಶ್ ತಮ್ಮ ಬಗ್ಗೆ ಏರ್ಪಟ್ಟ ಈ ರೂಮರ್‍ ಗಳಿಗೆ ಈ ರೀತಿಯಾಗಿ ಉತ್ತರ ನೀಡಿದ್ದು ಆಸಕ್ತಿಕರವಾಗಿ ಮಾರ್ಪಾಡಾಗಿದೆ. ಇದೀಗ ಕೀರ್ತಿ ಸುರೇಶ್ ರವರ ಜೀವನದಲ್ಲಿ ಆ ಮಿಸ್ಟರಿ ಮ್ಯಾನ್ ಯಾರು ಎಂಬ ವಿಚಾರ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿವಲಯದಲ್ಲು ಚರ್ಚನೀಯವಾದ ಅಂಶವಾಗಿದೆ. ಇನ್ನೂ ಕೀರ್ತಿ ಸುರೇಶ್ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಸರ್ಕಾರುವಾರಿ ಪಾಠ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಈಕೆ ತೆಲುಗು, ತಮಿಳು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಬಳಿಕ ಆಕೆಯ ಎಲ್ಲಾ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಆಕೆಗೆ ಅವಕಾಶಗಳೂ ಸಹ ಹರಿದು ಬಂದವು. ಸದ್ಯ ಆಕೆ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top