ಕೋಟಿ ಕೋಟಿ ಕೊಟ್ಟರೂ ಅಂತಹ ಪಾತ್ರಗಳಲ್ಲಿ ನಟಿಸೋಲ್ಲ ಎಂದ ಶ್ರೀಲೀಲಾ, ಬಂಪರ್ ಆಫರ್ ರಿಜೆಕ್ಟ್ ಮಾಡಿದ ಸ್ಟಾರ್ ನಟಿ….!

Follow Us :

ಸದ್ಯ ಸೌತ್ ಸಿನಿರಂಗದ ಟಾಲಿವುಡ್ ನಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿದೆ. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ ತೆಲುಗು ಸಿನಿರಂಗದಲ್ಲಿ ಭಾರಿ ಬೇಡಿಕೆ ಪಡೆದುಕೊಂಡು ಅಲ್ಲಿನ ಸ್ಟಾರ್‍ ನಟಿಯರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಈ ಸಾಲಿಗೆ ಇದೀಗ ಕನ್ನಡದ ನಟಿ ಶ್ರೀಲೀಲಾ ಸಹ ಸೇರಿಕೊಂಡಿದ್ದಾರೆ. ಸದ್ಯ ಶ್ರೀಲೀಲಾ ಟಾಲಿವುಡ್ ನಲ್ಲಿ ಟಾಪ್ ನಟಿಯಾಗಿದ್ದಾರೆ. ಆಕೆ ನಟಿಸಿದ್ದು, ಎರಡೇ ಸಿನೆಮಾಗಳಲ್ಲಿ ಆದರೆ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ಬಂಪರ್‍ ಆಫರ್‍ ಒಂದನ್ನು ರಿಜೆಕ್ಟ್ ಮಾಡಿದ್ದು, ಕೋಟಿ ಕೋಟಿ ಕೊಟ್ಟರು ಅಂತಹ ಪಾತ್ರದಲ್ಲಿ ನಟಿಸೊಲ್ಲ ಎಂದಿದ್ದಾರಂತೆ.

ಸ್ಯಾಂಡಲ್ ವುಡ್ ನಲ್ಲಿ ಕಿಸ್, ಭರಾಟೆ, ಬೈಟ್ ಟು ಲವ್ ಮೊದಲಾದ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಫೇಂ ಪಡೆದುಕೊಂಡ ಯಂಗ್ ನಟಿ ಶ್ರೀಲೀಲಾ ಪೆಳ್ಳಿಸಂದD ಎಂಬ ಸಿನೆಮಾದ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಈ ಸಿನೆಮಾ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ನೀಡಲಿಲ್ಲ ಎಂದೇ ಹೇಳಬಹುದು. ಆದರೆ ಈ ಸಿನೆಮಾದಲ್ಲಿ ಆಕೆಯ ಗ್ಲಾಮರ್‍, ನಟನೆ, ನೃತ್ಯಕ್ಕೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದರು. ಬಳಿಕ ಆಕೆಗೆ ಮಾಸ್ ಮಹಾರಾಜ ಧಮಾಕ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾದಲ್ಲಿ ಆಕೆಯ ಎನೆರ್ಜಿಟಿಕ್ ಡ್ಯಾನ್ಸ್ ಹಾಗೂ ಅಭಿನಯಕ್ಕೆ ಭಾರಿ ಫೇಂ ಪಡೆದುಕೊಂಡರು. ಇದೀಗ ಆಕೆ ಸುಮಾರು 10 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅದರಲ್ಲೂ ಸ್ಟಾರ್‍ ನಟರ ಜೊತೆಗೆ ನಟಿಸುತ್ತಿದ್ದಾರೆ. ಇದೀಗ ಶ್ರೀಲೀಲಾ ಹವಾ ನೋಡಿದ ಸೌತ್ ಸಿನಿರಂಗದ ಖ್ಯಾತ ನಿರ್ದೇಶಕರೊಬ್ಬರು ಕೋಟಿ ಕೋಟಿ ಆಫರ್‍ ಕೊಟ್ಟು ತಮ್ಮ ಸಿನೆಮಾದಲ್ಲಿ ನಟಿಸುವ ಆಫರ್‍ ಕೊಟ್ಟರೇ ಆತ ರಿಜೆಕ್ಟ್ ಮಾಡಿದ್ದಾರೆ. ಅಷ್ಟಕ್ಕೂ ಶ್ರೀಲೀಲಾ ಈ ಸಿನೆಮಾಗೆ ನೋ ಅಂದಿದ್ದಾರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ನಟಿ ಶ್ರೀಲೀಲಾ ಭಾರಿ ಆಫರ್‍ ಒಂದು ಬಂದಿತ್ತು. ಈ ಸಿನೆಮಾದಲ್ಲಿ ಬೋಲ್ಡ್ ಕಂಟೆಂಟ್ ಇರುವಂತಹ ಪಾತ್ರ ಆಗಿತ್ತು. ಖ್ಯಾತ ನಿರ್ದೇಶಕರೊಬ್ಬರು ಶ್ರೀಲೀಲಾ ರವರಿಗೆ ಈ ಆಫರ್‍ ನೀಡಿದ್ದರು. ಇನ್ನೂ ಮೊದಲೇ ಸಿನೆಮಾದಲ್ಲಿ ಬೋಲ್ಡ್ ಕಂಟೆಂಟ್ ಇರುವ ಬಗ್ಗೆ ಶ್ರೀಲೀಲಾಗೆ ಹೇಳಿದ್ದರಂತೆ. ಇನ್ನೂ ಈ ಸಿನೆಮಾಗೆ ಒಪ್ಪಿಕೊಂಡರೇ 10 ಕೋಟಿ ಸಂಭಾವನೆ ನೀಡುವುದಾಗಿ ಹೇಳಿದ್ದರಂತೆ. ಇನ್ನೂ ಈ ಆಫರ್‍ ಅನ್ನು ಶ್ರೀಲೀಲಾ ನೇರವಾಗಿಯೇ  ನಿರಾಕರಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಅಂತಹ ಬೋಲ್ಡ್ ಕಂಟೆಂಟ್ ದೃಶ್ಯಗಳಲ್ಲಿ ನಟಿಸುವುದಿಲ್ಲ. ನೂರು ಕೋಟಿ ಕೊಟ್ಟರೂ ಸಹ ಅಶ್ಲೀಲ ಕಂಟೆಂಟ್ ಇರುವಂತಹ ಸಿನೆಮಾಗಳಲ್ಲಿ ನಟಿಸುವುದಿಲ್ಲ. ಅಂತಹ ದೃಶ್ಯಗಳಲ್ಲಿ ನಟಿಸಲೇ ಬೇಕು ಎಂದರೇ ಸಿನಿರಂಗವನ್ನೇ ಬಿಡುತ್ತೇನೆ ಎಂದು ಶ್ರೀಲೀಲಾ ಹೇಳಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸದ್ಯ ನಟಿ ಶ್ರೀಲೀಲಾ ಸೌತ್ ನಲ್ಲಿರುವ ಎಲ್ಲಾ ಸ್ಟಾರ್‍ ನಟಿಯರಿಗೂ ದೊಡ್ಡ ಪೈಪೋಟಿಯಾಗಿದ್ದಾರೆ. ನಿರ್ಮಾಪಕರು ಹಾಗೂ ನಿರ್ದೇಶಕರೂ ಶ್ರೀಲೀಲಾಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. . ಸದ್ಯ ಆಕೆಯ ಕೈಯಲ್ಲಿ ಎಂಟುಕ್ಕೂ ಹೆಚ್ಚು ಸಿನೆಮಾಗಳಿವೆ. ಉಸ್ತಾದ್ ಭಗತ್ ಸಿಂಗ್, ಭಗವಂತ್ ಕೇಸರಿ, ಗುಂಟೂರು ಕಾರಂ, ಆದಿಕೇಶವ ಸೇರಿದಂತೆ ತೆಲುಗು ಹಾಗೂ ಕನ್ನಡ ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ.