ಇಲ್ಲಿವರೆಗೂ ನಂಗೂ ಯಾರೂ ಪ್ರಪೋಸ್ ಮಾಡಿಲ್ಲ ಎಂದು ಕ್ರೇಜಿ ಹಿರೋಯಿನ್ ಶ್ರೀಲೀಲಾ…..!

Follow Us :

ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತೆಲುಗಿನ ಧಮಾಕ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಇದೀಗ ಆಕೆಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಹರಿದು ಬರುತ್ತಿವೆ. ಕಮರ್ಷಿಯಲ್ ಸಿನೆಮಾಗಳಲ್ಲೂ ಶ್ರೀಲೀಲಾ ಮೊದಲ ಆಯ್ಕೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಈಕೆ ಇದೀಗ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗಾ ಕಾರ್ಯಕ್ರಮವೊಂದರಲ್ಲಿ ಶ್ರೀಲೀಲಾಗೆ ಲವ್ ಪ್ರಪೋಸಲ್ ಬಗ್ಗೆ ಪ್ರಶ್ನೆ ಎದುರಾಗಿದ್ದು ಅದಕ್ಕೇ ಕ್ರೇಜಿ ಉತ್ತರ ಕೊಟ್ಟಿದ್ದಾರೆ ಕ್ರೇಜಿ ಹಿರೋಯಿನ್.

ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ ಎನ್ನಬಹುದಾಗಿದೆ. ಈ ಸಾಲಿಗೆ ಯಂಗ್ ನಟಿ ಶ್ರೀಲೀಲಾ ಸಹ ಸೇರುತ್ತಾರೆ. ಸದ್ಯ ಬಹುಬೇಡಿಕೆ ನಟಿಯರಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಶ್ರೀಲೀಲಾ ಭಾರಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಏಳಕ್ಕೂ ಅಧಿಕ ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಸೆನ್ಷೇಷನ್ ನಟಿ ಎಂದಲೇ ಶ್ರೀಲೀಲಾರನ್ನು ಕರೆಯುತ್ತಾರೆ. ಇನ್ನೂ ಶೀಘ್ರದಲ್ಲೇ ಶ್ರೀಲೀಲಾ ಸ್ಕಂದ ಸಿನೆಮಾದ ಮೂಲಕ ಪ್ರೇಕ್ಷಕರ ಮೇಲೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ಈ ಸಿನೆಮಾ ಸೆ.15 ರಂದು ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಕಾಣಲಿದೆ. ಇದೀಗ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಲವ್ ಪ್ರಪೋಸ್ ಬಗ್ಗೆ ಶ್ರೀಲೀಲಾ ಕ್ರೇಜಿ ಉತ್ತರ ನೀಡಿದ್ದಾರೆ.

ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿ ಸ್ಕಂದ ಸಿನೆಮಾದ ಪ್ರಮೋಷನ್ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀಲೀಲಾ ಟ್ರೆಡಿಷನಲ್ ವೇರ್‍ ನಲ್ಲಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡು ಈವೆಂಟ್ ಗೆ ಹೈಲೈಟ್ ಆಗಿದ್ದರು. ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಸಹ ಮಾಡಿದ್ದರು. ವೇದಿಕೆಯ ಮೇಲೆಯೆ ಹಾಡನ್ನು ಹಾಡಿ ಅಭಿಮಾನಿಗಳು ಫಿದಾ ಆಗುವಂತೆ ಮಾಡಿದ್ದರು. ಈ ವೇಳೆ ತನಗೆ ಬಂದ ಲವ್ ಪ್ರಪೋಸಲ್ಸ್ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ರಿಪ್ಲೇ ಕೊಡುತ್ತಾ, ನನಗೆ ಇಲ್ಲಿಯವರೆಗೂ ಯಾವುದೇ ಪ್ರಪೋಸಲ್ಸ್ ಬಂದಿಲ್ಲ. ಆದರೆ ಸೆ.15 ರ ಬಳಿಕ ಬರಬಹುದೇನೋ ಎಂದು ಸ್ವೀಟ್ ಆಗಿ ಉತ್ತರ ನೀಡಿದ್ದಾರೆ. ಸದ್ಯ ಶ್ರೀಲೀಲಾ ಕಾಮೆಂಟ್ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಶ್ರೀಲೀಲಾ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡ ಶ್ರೀಲೀಲಾ, ಕೊನೆಯದಾಗಿ ಧಮಾಕಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಆಕೆ ಭಗವಂತ್ ಕೇಸರಿ, ಉಸ್ತಾದ್ ಭಗತ್ ಸಿಂಗ್, ಆದಿಕೇಶವ, ಗುಂಟೂರು ಖಾರಂ, ಎಕ್ಸ್ಟ್ರಾಡಿನರಿ ಮ್ಯಾನ್, ವಿಡಿ12, ಅನಗನಗ ಒಕ ರಾಜು ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಶ್ರೀಲೀಲಾ ಸಿನಿರಸಿಕರನ್ನು ರಂಜಿಸಲಿದ್ದಾರೆ.