ಗಂಗಾ ನದಿಯಲ್ಲಿ ತೇಲಿಬಂದ ದೊಡ್ಡ ಕಲ್ಲು, 14 ಕೆಜಿಯ ಕಲ್ಲು ಕಂಡು ರಾಮಸೇತು ನಿರ್ಮಾಣಕ್ಕೆ ಬಳಸಿದ ಕಲ್ಲೆಂದು ವಿಶೇಷ ಪೂಜೆ……!

Follow Us :

ಸುಮಾರು ವರ್ಷಗಳಿಂದ ರಾಮಸೇತು ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಲೇ ಇದೆ. ಆಗಾಗ ರಾಮಸೇತುಗೆ ಸಂಬಂಧಿಸಿದ ಸುದ್ದಿಗಳು ಕೇಳಿಬರುತ್ತಿರುತ್ತದೆ. ಇದೀಗ ಬಿಹಾರದ ರಾಜಧಾನಿ ಪಾಟ್ನಾದ ಗಂಗಾ ನದಿಯಲ್ಲಿ ಸುಮಾರು 14 ಕೆಜಿ ತೂಕದ ಕಲ್ಲೊಂದು ನೀರಿನಲ್ಲಿ ತೇಲಿಕೊಂಡು ಬಂದಿದೆ. ಅದನ್ನು ಗಮನಿಸಿದ ಕೆಲವರು ಅದು ರಾಮಸೇತು ಗೆ ಬಳಸಿದ ಕಲ್ಲೆಂದು ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದಾರೆ.

ಪಾಟ್ನಾದಾ ರಾಜ್ ಘಾಟ್ ಬಳಿಯ ಗಂಗಾನದಿಯಲ್ಲಿ 14 ಕೆಜಿ ಕಲ್ಲೊಂದು ತೇಲುತ್ತಾ ಬಂದಿರುವುದನ್ನು ಗಮನಿಸಿದ್ದಾರೆ. ಬಳಿಕ ಆ ಕಲ್ಲು ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಆ ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದಿದ್ದಾರೆ. ಆ ಕಲ್ಲನ್ನು ರಾಮಸೇತು ನಿರ್ಮಾಣಕ್ಕೆ ಬಳಸಿದ ಕಲ್ಲು ಎಂದು ಎಲ್ಲರೂ ನಂಭಿದ್ದಾರೆ. ಬಳಿಕ ರಾಜ್ ಘಾತ್ ಬಳಿಯಿರುವ ನೀರಿನ ತೊಟ್ಟಿಯಲ್ಲಿಟ್ಟು ಆ ಕಲ್ಲಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ರಾಮನ ಹೆಸರನ್ನು ಬರೆದಿದ್ದ, ಈ ಕಲ್ಲು ಪವಾಡದ ಶಿಲೆ ಎಂದು ಸ್ಥಳೀಯರು ಭಾವಿಸಿ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನೂ ಈ ಪವಾಡ ಕಲ್ಲನ್ನು ನೋಡಲು ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಈ ಹಿಂದೆ ಇದೇ ಘಾಟ್ ಬಳಿ ಚಿನ್ನದ ಆಮೆ ಸಹ ಕಾಣಿಸಿಕೊಂಡಿದ್ದು, ಅದನ್ನು ಮತ್ತೆ ನದಿಗೆ ಬಿಡಲಾಗಿದೆ ಎಂದೂ ಸಹ ಸ್ಥಳೀಯರು ಹೇಳಿದ್ದಾರಂಯತೆ.

ಇನ್ನೂ ಈ ಕಲ್ಲನ್ನು ಹೊರ ತೆಗೆದಾಗ 9 ಕೆಜಿ ತೂಕವಿತ್ತಂತೆ, ಆದರೆ ಕೆಲವೇ ಗಂಟೆಗಳಲ್ಲಿ ಆ ಕಲ್ಲು 14 ಕೆಜಿಯಾಗಿದೆಯಂತೆ. ಇನ್ನೂ ಈ ಕಲ್ಲನ್ನು ನೀರಿಗೆ ಹಾಕಿದರೇ ಮುಳುಗದೇ ತೇಲುತ್ತಿದೆ. ಸದ್ಯ ಈ ಕಲ್ಲಿನ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಷ್ಟೇಅಲ್ಲದೇ ಈ ಕಲ್ಲು ಪತ್ತೆಯಾದ ರಾಜ್ ಘಾಟ್ ನ ಹೆಸರನ್ನು ರಾಮ್ ಘಾಟ್ ಎಂದು ಬದಲಿಸಬೇಕೆಂಬ ಹೊಸ ಕೂಗು ಸಹ ಶುರುವಾಗಿದೆ. ಈ ಕಲ್ಲನ್ನು ರಾಮಸೇತು ನಿರ್ಮಾಣಕ್ಕಾಗಿ ಬಳಸಲಾಗಿದೆ. ಆದ್ದರಿಂದ ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆಯಲಾಗಿದೆ. ಇದರ ಬಗ್ಗೆ ಸಂಶೋಧನೆ ನಡೆಯಬೇಕೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಗಂಗಾ ನದಿಯಲ್ಲಿ ಈ ಹಿಂದೆ ಸಹ ಕಲ್ಲುಗಳು ತೇಲಿ ಬಂದಿತ್ತು. ಒಂದು ಕಲ್ಲನ್ನು ಪಾಟ್ನಾದ ಹನುಮಾನ್ ದೇವಾಲಯದಲ್ಲಿ, ಪಠಾಣ್ಣೇವಿ ದೇವಾಯದಲ್ಲಿ, ವಿಶ್ವ ಹಿಂದೂ ಪರಿಷತ್ತಿನ ಕಚೇರಿಯಲ್ಲಿ ಸಹ ಕಲ್ಲನ್ನು ಪ್ರತಿಷ್ಟಾಪಿಸಲಾಗಿದೆ. ಇದೀಗ ನಾಲ್ಕನೇ ಕಲ್ಲು ಪತ್ತೆಯಾಗಿದ್ದು, ರಾಮಸೇತು ನಿರ್ಮಾಣದ ಬಗ್ಗೆ ಮತ್ತೆ ಚರ್ಚೆ ನಡೆದಿದೆ.