ಪವನ್ ಕಲ್ಯಾಣ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ರೇಣುದೇಸಾಯಿ, ಪವನ್ ಕಲ್ಯಾಣ್ ಸಿಎಂ ಆಗಬೇಕು ಅಂತ ನಾನೂ ಬೇಡಲ್ಲ ಎಂದ ನಟಿ….!

ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣುದೇಸಾಯಿ ಟೈಗರ್‍ ನಾಗೇಶ್ವರ್‍ ರಾವ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸಿನೆಮಾದಲ್ಲಿ ಆಕೆ ಹೇಮಲತಾ ಲವಣಂ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ…

ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣುದೇಸಾಯಿ ಟೈಗರ್‍ ನಾಗೇಶ್ವರ್‍ ರಾವ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸಿನೆಮಾದಲ್ಲಿ ಆಕೆ ಹೇಮಲತಾ ಲವಣಂ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ಸರಿಯಾಗಿ ಹೊಂದಾಣಿಕೆಯಾಗಿದ್ದಾರೆ. ಈ ಸಿನೆಮಾದಲ್ಲಿ ಆಕೆಯ ಪಾತ್ರ ಕಡಿಮೆಯಾಗಿದ್ದರೂ ಸಹ ಆಕೆ ಪಾತ್ರ ಟೈಗರ್‍ ನಾಗೇಶ್ವರರಾವು ಸಿನೆಮಾಗೆ ಒಳ್ಳೆಯ ಪ್ಲಸ್ ಆಗಿದೆ ಎಂದು ಹೇಳಬಹುದಾಗಿದೆ. ಇದೀಗ ಪವನ್ ಕಲ್ಯಾಣ್ ಸಿಎಂ ಆಗಬೇಕು ಎಂದು ನಾನು ಬೇಡಿಕೊಳ್ಳುವುದಿಲ್ಲ, ಎಲ್ಲದಕ್ಕೂ ಆ ದೇವರು ಇದ್ದಾರೆ ಎಂದು ರೇಣು ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದಾರೆ.

ನಟಿ ರೇಣು ದೇಸಾಯಿ ಟೈಗರ್‍ ನಾಗೇಶ್ವರ್‍ ರಾವು ಸಿನೆಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋಷನ್ ನಿಮಿತ್ತ ಆಕೆ ಕೆಲವೊಂದು ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಪವನ್ ಕಲ್ಯಾಣ್ ರವರ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ಸಂದರ್ಶನದಲ್ಲಿ ಪವನ್ ಕಲ್ಯಾಣ್ ಸಿಎಂ ಆಗಬೇಕು ಎಂದು ನೀವು ಭಾವಿಸುತ್ತಿರಾ ಎಂದು ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ರೇಣು ದೇಸಾಯಿ ನಗುತ್ತಲೇ ಉತ್ತರ ನೀಡಿದ್ದಾರೆ. ಅವರ ಬಗ್ಗೆ ಈ ಪ್ರಶ್ನೆ ಬೇಡ, ಓರ್ವ ರಾಜಕೀಯ ನಾಯಕನಾಗಿ ಈ ಸೊಸೈಟಿಗೆ ಅವರು ಅವಶ್ಯಕ ಎಂದು ವಿಡಿಯೋ ಮೂಲಕ ಈ ಹಿಂದೆ ಹೇಳಿದ್ದೆ. ಅದು ಕೇವಲ ನನ್ನ ವೈಯುಕ್ತಿಕ ಅಭಿಪ್ರಾಯ ಮಾತ್ರ. ಆತ ಸಿಎಂ ಆಗಬೇಕು, ಬೇಡವೇ ಎಂಬ ಬಗ್ಗೆ ನಾನು ಬೇಡುವುದಿಲ್ಲ. ಈ ವಿಚಾರವನ್ನು ಆ ದೇವರು ನಿರ್ಣಯ ಮಾಡುತ್ತಾರೆ ಎಂದು ಹೇಳಿದ್ದಾರೆ.

ನಾನು ಸಾಮಾನ್ಯ ಪ್ರಜೆಯಂತೆ ಸಹ ಅವರ ಕಡೆ ಅವರ ಪರ ಪ್ರಚಾರ ಮಾಡೋಲ್ಲ, ಒಬ್ಬರಿಗೆ ಸಪೋರ್ಟ್ ಮಾಡಿ ಎಂತಲೂ ಚುನಾವಣೆ ಸಮಯದಲ್ಲಿ ಪ್ರಚಾರ ಮಾಡೋಲ್ಲ. ಅವೆಲ್ಲಾ ನನಗೆ ಬೇಡವಾದಂತಹ ವಿಚಾರ. ಇನ್ನೂ ಈ ಹಿಂದೆ ನಾನು ಪವನ್ ಕಲ್ಯಾಣ್ ರವರ ಬಗ್ಗೆ ಹೇಳಿದೆಲ್ಲಾ ನಿಜವೇ ಆಗಿದೆ. ವಿಚ್ಚೇದನ ಸಮಯದಲ್ಲೂ ನಾನು ಹೇಳಿದ್ದು ನಿಜ, ಕೆಲವು ದಿನಗಳ ಹಿಂದೆ ಹೇಳಿದ್ದು ಸಹ ನಿಜ, ಬೇಕಾದರೇ ಲೈವ್ ಡಿಟೆಕ್ಟರ್‍ ಇಟ್ಟು ಚೆಕ್ ಮಾಡಿಕೊಳ್ಳಿ. ಸಿಂಗಲ್ ಮದರ್‍ ಆಗಿ ಜೀವನ ಸಾಗಿಸುವುದು ತುಂಬಾನೆ ಕಷ್ಟ. ನನಗೆ ದೊಡ್ಡವರ ಸಪೋರ್ಟ್ ಸಹ ಇಲ್ಲ. ಸದ್ಯ ನನ್ನ ಆರೋಗ್ಯ ಸಹ ಸಹಕರಿಸುತ್ತಿಲ್ಲ. ಮುಂದೆ ಖಚಿತವಾಗಿ ನಾನು ಮದುವೆಯಾಗುತ್ತೇನೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಮದುವೆಯ ಬಗ್ಗೆ ಸಮಯ ತೆಗೆದುಕೊಳ್ಳಲು  ನನ್ನ ಮಕ್ಕಳು ಕಾರಣ. ನನ್ನ ಮಕ್ಕಳನ್ನು ಸರಿಯಾಗಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದಿದ್ದಾರೆ.

ಇತ್ತೀಚಿಗೆ ನಾನು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದೇನೆ. ಅದರಿಂದ ಪವನ್ ಕಲ್ಯಾಣ್ ಫ್ಯಾನ್ಸ್ ನನ್ನ ಮೇಲೆ ಇನ್ಸ್ಟಾಗ್ರಾಂನಲ್ಲಿ ನೆಗೆಟೀವ್ ಕಾಮೆಂಟ್ಸ್ ಮಾಡುತ್ತಿದ್ದಾರೆ, ಜೊತೆಗೆ ಪವನ್ ಕಲ್ಯಾಣ್ ಬಗ್ಗೆ ಮಾತನಾಡಬೇಡಿ ಎಂದು ವಾರ್ನಿಂಗ್ ಸಹ ಕೊಡುತ್ತಿದ್ದಾರೆ. ನಾನು ಏನು ಮಾಡಬೇಕೋ, ಏನು ಮಾಡಬಾರದೋ ಹೇಳೊಕೆ ಅವರು ಯಾರು, ಅದು ನನ್ನಿಷ್ಟ, ಪವನ್ ಕಲ್ಯಾಣ್ ಬಗ್ಗೆ ನನಗೆ ಇಷ್ಟ ಆದರೇ ಮಾತನಾಡ್ತೀನಿ ಇಲ್ಲ ಅಂದರೇ ಇಲ್ಲ ಎಂದು ರೇಣು ದೇಸಾಯಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.