ವಿರಹ ವೇದನೆಯಲ್ಲಿ ಶ್ರೀಲೀಲಾ, ಸ್ಟನ್ನಿಂಗ್ ಪೋಸ್ ಗಳ ಮೂಲಕ ಮೈಂಡ್ ಬ್ಲಾಕ್ ಮಾಡಿದ ಯಂಗ್ ಬ್ಯೂಟಿ ಶ್ರೀಲೀಲಾ….!

Follow Us :

ಕನ್ನಡ ಮೂಲದ ಯಂಗ್ ನಟಿ ಶ್ರೀಲೀಲಾ ಸದ್ಯ ತೆಲುಗು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇತ್ತೀಚಿಗೆ ತೆರೆಕಂಡ ಧಮಕಾ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಅನೇಕ ನಟಿಯರಿಗೆ ಪೈಪೋಟಿಯಾಗಿದ್ದಾರೆ. ಕಡಿಮೆ ಸಮಯದಲ್ಲೇ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದ್ದು, ಆಕೆ ಸದಾ ಸುದ್ದಿಯಲ್ಲೇ ಇರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಸದ್ಯ ಕನ್ನಡ ನಟಿ ಶ್ರೀಲೀಲಾ ಹೆಸರು ತೆಲುಗಿನಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸ್ಟಾರ್‍ ನಟಿಯರಿಗೆ ಪೈಪೋಟಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಆಕೆ ಕೊನೆಯದಾಗಿ ಧಮಾಕಾ ಎಂಬ ಸಿನೆಮಾದಲ್ಲಿ ಮಾಸ್ ಮಹಾರಾಜ ರವಿತೇಜ ಜೊತೆಗೆ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಗ್ಲಾಮರ್‍ ಹಾಗೂ ನಟನಗೆ ಅನೇಕರು ಫಿದಾ ಆಗಿದ್ದರು. ಆಕೆ ತೆಲುಗಿನಲ್ಲಿ ನಟಿಸಿದ್ದು, ಎರಡೇ ಸಿನೆಮಾಗಳಲ್ಲಾದರೂ ಆಕೆ ಮಾತ್ರ ಸ್ಟಾರ್‍ ಡಂ ಪಡೆದುಕೊಂಡರು. ಸದ್ಯ ಸಾಕಷ್ಟು ಸಿನೆಮಾಗಳು ಹೊಂದಿರುವ ನಟಿ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಮತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

ಸದ್ಯ ಶ್ರೀಲೀಲಾ ಕೆಲವೊಂದು ಗ್ಲಾಮರ್‍ ಪೋಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈಟ್ ಅಂಡ್ ಬ್ಲಾಕ್ ಮಿಕ್ಸಡ್ ಟೈಟ್ ಫಿಟ್ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ವಿರಹದಿಂದ ಕೂಡಿದ ಮಾದಕ ನೋಟದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮತ್ತೇರಿಸುವ ಲುಕ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡವಂತೆ ಮಾಡಿದ್ದಾರೆ. ಇನ್ನೂ ಆಕೆ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳ ಪೈಕಿ ಆಕೆ ಕ್ಯೂಟ್ ಸ್ಮೈಲ್ ಕೊಡುವ ಪೊಟೋ ಒಂದನ್ನು ಸಹ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋ ಮಾತ್ರ ಹೈಲೈಟ್ ಎಂದೇ ಹೇಳಲಾಗುತ್ತಿದೆ. ಇನ್ನೂ ಆಕೆಯ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಅಸಲಿ ಗುಂಟೂರು ಖಾರಂ ಎಂದು ಬೋಲ್ಡ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಶ್ರೀಲೀಲಾ ಕೈಯಲ್ಲಿ ತುಂಭಾನೆ ಸಿನೆಮಾಗಳಿವೆ. ಪ್ರಿನ್ಸ್ ಮಹೇಶ್ ಬಾಬು ರವರ ಜೊತೆಗೆ ಗುಂಟೂರು ಖಾರಂ, ಪವನ್ ಕಲ್ಯಾಣ್ ರವರ ಜೊತೆಗೆ ಉಸ್ತಾದ್ ಭಗತ್ ಸಿಂಗ್, ನಂದಮೂರಿ ಬಾಲಕೃಷ್ಣ ರವರ ಭಗವಂತ್ ಕೇಸರಿ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಕನ್ನಡದಲ್ಲೂ ಸಹ ಆಕೆ ಒಂದು ಸಿನೆಮಾದಲ್ಲಿ ನಟಿಸುತ್ತಾರೆ. ಒಟ್ಟಿನಲ್ಲಿ ಆಕೆಯ ಕೈಯಲ್ಲಿ ಎಂಟಕ್ಕೂ ಹೆಚ್ಚು ಸಿನೆಮಾಗಳಿವೆ. ಇನ್ನೂ ಶ್ರೀಲೀಲಾ ಮಾತ್ರ ಟಾಲಿವುಡ್ ನ ಅನೇಕ ಸ್ಟಾರ್‍ ನಟಿಯರಿಗೆ ಭಾರಿ ಪೈಪೋಟಿಯನ್ನು ನೀಡುತ್ತಿದ್ದಾರೆ.