ಶಾಕಿಂಗ್ ಕಾಮೆಂಟ್ಸ್ ಮಾಡಿದ ಬೋಲ್ಡ್ ಬ್ಯೂಟಿ ಪಾಯಲ್, ಆ ಸಿನೆಮಾದ ಬಳಿಕ ನಿರ್ದೇಶಕರು ನನ್ನನ್ನು ಬಳಸಿಕೊಂಡರು ಎಂದ ನಟಿ…!

ಮೊದಲನೇ ಸಿನೆಮಾದ ಮೂಲಕವೇ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಪಾಯಲ್ ರಾಜ್ ಪೂತ್ ಅನೇಕ ಯುವಕರ ಕ್ರಷ್ ಆದರು. RX100 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪಾಯಲ್ ತುಂಬಾನೆ ರೊಮ್ಯಾಂಟಿಕ್…

ಮೊದಲನೇ ಸಿನೆಮಾದ ಮೂಲಕವೇ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಪಾಯಲ್ ರಾಜ್ ಪೂತ್ ಅನೇಕ ಯುವಕರ ಕ್ರಷ್ ಆದರು. RX100 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪಾಯಲ್ ತುಂಬಾನೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಕೆಲವೊಂದು ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಇನ್ನೂ ಮೊದಲನೇ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು ಆಕೆ ಸ್ಟಾರ್‍ ಡಂ ಪಡೆದುಕೊಳ್ಳಲು ಮಾತ್ರ ವಿಫಲರಾದರು ಎನ್ನಬಹುದು. ಇದೀಗ ಸಂದರ್ಶನವೊಂದರಲ್ಲಿ ಪಾಯಲ್ ಕೆಲವೊಂದು ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

RX100 ಸಿನೆಮಾದ ಮೂಲಕ ಬಣ್ಣದ ಲೊಕಕ್ಕೆ ಎಂಟ್ರಿ ಕೊಟ್ಟ ಪಾಯಲ್ ಆ ಸಿನೆಮಾದ ಸಕ್ಸಸ್ ಅನ್ನು ಕ್ಯಾಷ್ ಮಾಡಿಕೊಳ್ಳಲು ಕೊಂಚ ಹಿಂದೆ ಬಿದ್ದರು. ಸರಿಯಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ಕೆಲವೊಂದು ಸೋಲುಗಳನ್ನು ಕಂಡರು. ಡಿಸ್ಕೋ ರಾಜ್, ವೆಂಕಿ ಮಾಮ ಮೊದಲಾದ ಸಿನೆಮಾಗಳಲ್ಲಿ ನಟಿಸಿದರೂ ಸಹ ಪಾಯಲ್ ಗೆ ಸರಿಯಾದ ಕ್ರೇಜ್ ದೊರೆಯಲಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಪಾಯಲ್ ಮಾಯಾಪೆಟಿಕ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ರಿಲೀಸ್ ಆಗಿದೆ. ಈ ಸಿನೆಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಯಲ್ ಭಾಗಿಯಾಗುತ್ತಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಸಂದರ್ಶನದಲ್ಲಿ ನಿಮ್ಮ ಸೌಂದರ್ಯ ಹಾಗೂ ಪ್ರತಿಭೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂದು ಅನೇಕರು ಹೇಳುತ್ತಾರೆ ಅದಕ್ಕೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆ ಪಾಯಲ್ ಗೆ ಎದುರಾಗಿದೆ. ಅದಕ್ಕೆ ಪಾಯಲ್ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನನ್ನ ಮಟ್ಟಿಗೆ ನಾನು ಪ್ರತಿ ಸಿನೆಮಾಗಾಗಿ  ತುಂಬಾನೆ ಕಮಿಟ್ ಮೆಂಟ್ ಕೊಟ್ಟು ಕೆಲಸ ಮಾಡುತ್ತೇನೆ. ಶೇ.200 ರಷ್ಟು ಎಫರ್ಟ್ ಹಾಕುತ್ತೇನೆ. ಆದರೆ ನಾನು ನಟಿಸಿದ ಪ್ರತಿ ಸಿನೆಮಾ ಸಕ್ಸಸ್ ಆಗುತ್ತಾ ಇಲ್ಲವೇ ಎಂಬುದು ನನ್ನ ಕೈಯಲ್ಲಿಲ್ಲ. ಅದೆಲ್ಲಾ ಹಣೆಬರೆಹ ಇನ್ನೂ ಹೇಳಬೇಕು ಎಂದರೇ, RX100 ಸಿನೆಮಾದ ಸೂಪರ್‍ ಹಿಟ್ ಬಳಿಕ ಅನೇಕರು ನನ್ನನ್ನು ದಿಕ್ಕು ತಪ್ಪಿಸಿದರು. ಅದರಿಂದ ನಾನು ತಪ್ಪಾದ ನಿರ್ಣಯಗಳನ್ನು ತೆಗೆದುಕೊಂಡೆ. ಆಗತಾನೆ ಇಂಡಸ್ಟ್ರಿಗೆ ಹೊಸದಾಗಿ ಬಂದ ಕಾರಣದಿಂದ ಅಷ್ಟೋಂದು ಮೆಚ್ಯುರಿಟಿ ಇರಲಿಲ್ಲ. ಅದನ್ನು ಅಡ್ವಾಂಟೇಜ್ ಆಗಿ ತೆಗೆದುಕೊಂಡು ಕೆಲ ನಿರ್ದೇಶಕರನ್ನು ನನ್ನನ್ನು ಬಳಸಿಕೊಂಡರು. ಆದರೆ ಇದೀಗ ನಾನು ಆಲೋಚನೆ ಮಾಡುತ್ತಿದ್ದೇನೆ. ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂಬುದು ಅರಿವಾಗಿದೆ ಎಂದಿದ್ದಾರೆ.

ಆರ್‍.ಎಕ್ಸ್. 100 ಸಿನೆಮಾದ ಬಳಿಕ ನಾನು ಒಂಟಿಯಾಗಿಯೇ ಇರುತ್ತಿದ್ದೆ. ಎಂತಹ ಸಿನೆಮಾ ಮಾಡಬೇಕು ಎಂಬುದು ಸಹ ತಿಳಿಯುತ್ತಿರಲಿಲ್ಲ. ಕೆಲವೊಂದು ಆ ಸಿನೆಮಾ ಮಾಡು ಎಂದರೇ ಮತ್ತೆ ಕೆಲವರು ಆ ಸಿನೆಮಾ ಮಾಡಬೇಡ ಎನ್ನುತ್ತಾರೆ ಎಂದು ಆಕೆ ಹೇಳಿದ್ದಾರೆ. ಆದರೆ ವೆಂಕಿಮಾಮ ಸಿನೆಮಾದ ಬಗ್ಗೆ ಕೇಳಿದರೇ ಪಾಯಲ್ ಮೌನ ವಹಿಸಿದ್ದಾರೆ. ಇನ್ನೂ ಪಾಯಲ್ ಹಂಚಿಕೊಂಡ ಕಾಮೆಂಟ್ಸ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.