Film News

ನೀವು ಯಾರಿಗೆ ಕಮಿಟ್ ಮೆಂಟ್ ಕೊಟ್ಟಿದ್ದೀರಾ ಎಂದ ನೆಟ್ಟಿಗ, ವಲ್ಗರ್ ಕಾಮೆಂಟ್ ಮಾಡಿದವನಿಗೆ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್ ಕೊಟ್ಟ ಶ್ರೀಲೀಲಾ……!

ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತೆಲುಗಿನ ಧಮಾಕ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಇದೀಗ ಆಕೆಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಹರಿದು ಬರುತ್ತಿವೆ. ಕಮರ್ಷಿಯಲ್ ಸಿನೆಮಾಗಳಲ್ಲೂ ಶ್ರೀಲೀಲಾ ಮೊದಲ ಆಯ್ಕೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಈಕೆ ಇದೀಗ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ನೀವು ಯಾರಿಗೆ ಕಮಿಟ್ ಮೆಂಟ್ ಕೊಟ್ಟಿದ್ದೀರಾ ಎಂದು ಕಾಮೆಂಟ್ ಮಾಡಿದ ನೆಟ್ಟಿಗನೋರ್ವನಿಗೆ ಶ್ರೀಲೀಲಾ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್‍ ಕೊಟ್ಟಿದ್ದಾರೆ.

ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ ಎನ್ನಬಹುದಾಗಿದೆ. ಈ ಸಾಲಿಗೆ ಯಂಗ್ ನಟಿ ಶ್ರೀಲೀಲಾ ಸಹ ಸೇರುತ್ತಾರೆ. ಸದ್ಯ ಬಹುಬೇಡಿಕೆ ನಟಿಯರಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಶ್ರೀಲೀಲಾ ಭಾರಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಏಳಕ್ಕೂ ಅಧಿಕ ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಸೆನ್ಷೇಷನ್ ನಟಿ ಎಂದಲೇ ಶ್ರೀಲೀಲಾರನ್ನು ಕರೆಯುತ್ತಾರೆ. ಸ್ಟಾರ್‍ ಹಿರೋಗಳೂ ಸಹ ಆಕೆಯ ಡೇಟ್ಸ್ ಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ನಂದಮೂರಿ ಬಾಲಕೃಷ್ಣ ರವರ ಭಗವಂತ್ ಕೇಸರಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಸಹ ಸೂಪರ್‍ ಹಿಟ್ ಆಗಿದ್ದು, ಆಕೆಯ ಕ್ರೇಜ್ ಮತಷ್ಟು ಏರಿದೆ ಎನ್ನಬಹುದಾಗಿದೆ.

ಸದ್ಯ ಶ್ರೀಲೀಲಾ ಆದಿಕೇಶವ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೆ ತೆರೆಕಾಣಲಿದೆ. ಈ ಸಿನೆಮಾ ನ.24 ರಂದು ತೆರೆಕಾಣಲಿದ್ದು, ಪ್ರಮೋಷನ್ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ. ಈ ಸಿನೆಮಾದಲ್ಲಿ ಶ್ರೀಲೀಲಾ ವೈಷ್ಣವ್ ತೇಜ್ ಜೊತೆಗೆ ಬಣ್ಣ ಹಚ್ಚಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಬಗ್ಗೆ ತಿಳಿದೇ ಇದೆ. ಈ ಹಾದಿಯಲ್ಲೇ ಆಕೆ ಇತ್ತಿಚಿಗೆ ಇನ್ಸ್ಟಾ ವೇದಿಕೆಯ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಭಿಮಾನಿಗಳು ಕೇಳಿದಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದಾರೆ. ಈ ಹಾದಿಯಲ್ಲೇ ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೊಬ್ಬ ನೀವು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುತ್ತಿದ್ದಿರಾ ಎಂದು ಕೇಳಿದ್ದಾರೆ. ಅದಕ್ಕೆ ಹೌದು ನಾನು ಆದಿಕೇಶವ ಸಿನೆಮಾ ಪ್ರಮೋಷನ್ ನಿಮಿತ್ತ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.

ಆದರೆ ಮತ್ತೋರ್ವ ವಲ್ಗರ್‍ ಆಗಿ ಪ್ರಶ್ನೆ ಕೇಳಿದ್ದಾನೆ. ನೀವು ಯಾರಿಗಾದರೂ ಕಮಿಟ್ ಮೆಂಟ್ ಕೊಟ್ಟಿದ್ದೀರಾ ಎಂದು ಕೇಳಿದ್ದು, ಅದಕ್ಕೆ ಶ್ರೀಲೀಲಾ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್‍ ಕೊಟ್ಟಿದ್ದಾರೆ. ಹೌದು ನಾನು ಕಮಿಟ್ ಮೆಂಟ್ ಕೊಟ್ಟಿದ್ದೇನೆ. ನಾನು ಮಾಡುವ ಕೆಲಸಗಳಿಗೆ ಕಮಿಟ್ ಮೆಂಟ್ ಕೊಟ್ಟಿದ್ದೇನೆ ಎಂದು ತನ್ನದೇ ಆದ ಶೈಲಿಯಲ್ಲಿ ಕೌಂಟರ್‍ ಕೊಟ್ಟಿದ್ದಾರೆ. ಇನ್ನೂ ಶ್ರೀಲೀಲಾ ಕೈಯಲ್ಲಿ ಅರ್ಧ ಡಜನ್ ಗೂ ಅಧಿಕ ಸಿನೆಮಾಗಳಿವೆ.

Most Popular

To Top