ಮಕ್ಕಳು ಬೇಕಾಗಿತ್ತು, ಅದಕ್ಕೆ ಸೈಫ್ ನನ್ನು ಮದುವೆಯಾದೆ ಎಂದ ಕರೀನಾ, ವೈರಲ್ ಆದ ಕಾಮೆಂಟ್ಸ್…..!

Follow Us :

ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ರವರಿಗೆ ದೊಡ್ಡ ಮಟ್ಟದಲ್ಲೇ ಅಭಿಮಾನಿ ಬಳಗವಿದೆ. ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಟಿಯರಲ್ಲಿ ಕರೀನಾ ಕಪೂರ್‍ ಸಹ ಒಬ್ಬರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ, ಕುಟುಂಬ ದೊಂದಿಗೆ ಸಿನೆಮಾಗಳನ್ನು ಸಹ ಸಮರೋಪಾದಿಯಲ್ಲಿ ಸಾಗಿಸುತ್ತಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಕಾಮೆಂಟ್ ಗಳನ್ನು ನೀಡಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ನಟಿ ಕರೀನಾ ಕಪೂರ್‍ ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಮದುವೆಯಾದರು. ಮದುವೆಗೂ ಮುಂಚೆ ಆಕೆ ಶಾಹಿದ್ ಕಪೂರ್‍ ಜೊತೆಗೆ ಡೇಟಿಂಗ್ ನಲ್ಲಿದ್ದರು. ಬಳಿಕ ಸೈಫ್ ಅಲಿ ಖಾನ್ ಜೊತೆಗೆ ಪ್ರೀತಿ ಚಿಗುರಿತ್ತು. ಆದರೆ ಆಗಾಗಲೇ ಸೈಫ್ ಅಮೃತಾ ಸಿಂಗ್ ಎಂಬಾಕೆಯನ್ನು ಮದುವೆಯಾಗಿ ಆಕೆಯೊಂದಿಗೆ ವಿಚ್ಚೇದನ ಸಹ ಪಡೆದುಕೊಂಡಿದ್ದರು. ಬಳಿಕ ಕರೀನಾ ಕಪೂರ್‍ ಸೈಪ್ ಜೊತೆಗೆ ವಿವಾಹವಾಗಿ ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಸೈಫ್ ಅಲಿ ಖಾನ್ ರವರನ್ನು ಮದುವೆಯಾಗಿದ್ದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಆಕೆ ನೀಡಿದ ಉತ್ತರ ಇದೀಗ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸಂದರ್ಶನದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಸೈಫ್ ರನ್ನು ಮದುವೆಯಾಗಿದ್ದು, ಮಕ್ಕಳನ್ನು ಪಡೆಯುವುದಕ್ಕೆ ಎಂದಿದ್ದಾರೆ. ಮಕ್ಕಳನ್ನು ಪಡೆಯಬೇಕು ಎಂಬ ಕಾರಣದಿಂದಲೇ ಮದುವೆಯಾಗುವುದು, ಆ ಉದ್ದೇಶ ಇಲ್ಲ ಎಂದಾದರೇ ಈಗಿನ ಕಾಲದಲ್ಲಿ ಲಿವಿಂಗ್ ಟುಗೆದರ್‍ ನಲ್ಲಿರಬಹುದು. ನಾನು ಹಾಗೂ ಸೈಫ್ ಐದು ವರ್ಷ ಲಿವ್ ಇನ್ ರಿಲೇಷನ್ ನಲ್ಲಿದ್ದೆವು. ನಮಗೆ ಮಕ್ಕಳು ಬೇಕು ಎನ್ನಿಸಿದಾಗ ಮದುವೆಯಾದೆವು ಎಂದು ಕಾಮೆಂಟ್ ಮಾಡಿದ್ದಾರೆ. ಕಳೆದ 2012 ರಲ್ಲಿ ಕರೀನಾ ಸೈಫ್ ರವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ತೈಮೂರ್‍ ಅಲಿ ಖಾನ್, ಜಹಂಗೀರ್‍ ಅಲಿ ಖಾನ್ ಎಂದು ಮಕ್ಕಳಿಗೆ ಹೆಸರುಗಳನ್ನು ಇಟ್ಟಿದ್ದಾರೆ. ಕರೀನಾ ಸಿನೆಮಾಗಳ ಜೊತೆಗೆ ಮಕ್ಕಳು ಹಾಗೂ ಸಂಸಾರಕ್ಕೆ ಹೆಚ್ಚು ಸಮಯ ನೀಡುತ್ತಾರೆ.

ವಯಸ್ಸಾದರೂ ಸಹ ಕರೀನಾ ಕಪೂರ್‍ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಮೊದಲಿಗಿಂತಲೂ ಇದೀಗ ಸಿನೆಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಮಕ್ಕಳ ಆರೈಕೆಗಾಗಿ ಆಕೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಆಗಾಗ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಾರೆ. ಸದ್ಯ ಆಕೆ ಸಿಂಗ್ ಅಗೇನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಕರೀನಾ ಕಪೂರ್‍ ರವರ ಸಿಂಗ್ ಅಗೇನ್ ಸಿನೆಮಾದಲ್ಲಿನ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆಯಾಗಿತ್ತು.