ಸ್ಟಾರ್ ಸಿಂಗರ್ ಜೊತೆಗೆ ಮೃಣಾಲ್ ಡೇಟಿಂಗ್ ರೂಮರ್, ಈ ಬಗ್ಗೆ ಕ್ಲಾರಿಟಿ ಕೊಟ್ಟ ಸಿಂಗರ್ ಬಾದ್ಷಾ….!

Follow Us :

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕ ಅದರಲ್ಲೇ ಹೆಚ್ಚು ರೂಮರ್‍ ಗಳು ಹರಿದಾಡುತ್ತವೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಕಡಿಮೆ ಸಮಯದಲ್ಲೇ ಹೆಚ್ಚಾಗಿ ರೂಮರ್‍ ಗಳು ಹರಿದಾಡುತ್ತಿರುತ್ತವೆ. ಈ ಹಾದಿಯಲ್ಲೇ ದೀಪಾವಳಿ ಸೆಲಬ್ರೇಷನ್ ನಲ್ಲಿ ಸೀತಾರಾಮಂ ಬ್ಯೂಟಿ ಮೃಣಾಲ್ ಹಾಗೂ ಸ್ಟಾರ್‍ ಸಿಂಗರ್‍ ಬಾದ್ಷಾ ಕ್ಲೋಜ್ ಆಗಿ ಕಾಣಿಸಿಕೊಂಡ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಜೋರಾಗಿಯೇ ಹರಿದಾಡಿತ್ತು. ಇದೀಗ ಈ ರೂಮರ್‍ ಬಗ್ಗೆ ಸಿಂಗರ್‍ ಬಾದ್ಷಾ ಕ್ಲಾರಿಟಿ ಕೊಟ್ಟಿದ್ದಾರೆ.

ನಟಿ ಮೃಣಾಲ್, ಸಿಂಗರ್‍ ಬಾದ್ಷಾ, ಶಿಲ್ಪಾಶೆಟ್ಟಿ ರವರು ದೀಪಾವಳಿ ಪಾರ್ಟಿಯಿಂದ ಮಿಡ್ ನೈಟ್ ವಾಪಸ್ಸು ಹೋಗುವಾಗ ಮೃಣಾಲ್ ಆತನೊಂದಿಗೆ ಕ್ಲೋಜ್ ಆಗಿ ಕಾಣಿಸಿಕೊಂಡಿದ್ದರು. ಈ ಪೊಟೋ ರೂಮರ್‍ ಹುಟ್ಟಲು ಕಾರಣವಾಗಿತ್ತು. ಮೃಣಾಲ್ ತನ್ನ ಇನ್ಸ್ಟಾ ಖಾತೆಯಲ್ಲಿ ಬಾದ್ಷಾ ಹಾಗೂ ಶಿಲ್ಪಾಶೆಟ್ಟಿ ಜೊತೆಗೆ ಇರುವ ಪೊಟೋ ಒಂದನ್ನು ಹಂಚಿಕೊಂಡಿದ್ದು, ಇಬ್ಬರೂ ತುಂಬಾ ಇಷ್ಟವಾದವರು ಎಂದು ಕೋಟ್ ಹಾಕಿದ್ದರು. ಈ ಪೋಸ್ಟ್ ಅನ್ನು ಬಾದ್ಷಾ ಸಹ ರಿಪೋಸ್ಟ್ ಮಾಡಿದ್ದರು. ಇಬ್ಬರೂ ಕೈಯಲ್ಲಿ ಕೈಯಿಟ್ಟುಕೊಂಡು ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಈ ಎಲ್ಲಾ ಕಾರಣದಿಂದ ಮೃಣಾಲ್ ಹಾಗೂ ಬಾದ್ಷಾ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಬಿರುಗಾಳಿಯಂತೆ ಹರಿದಾಡಿತ್ತು. ಈ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು.

ದೀಪಾವಳಿ ಹಬ್ಬದ ನಿಮಿತ್ತ ಬಾಲಿವುಡ್ ಸ್ಟಾರ್‍ ಶಿಲ್ಪಾ ಶೆಟ್ಟಿ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನೇಕ ಸಿನೆಮಾ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಈ ವೇಳೆ ಮೃಣಾಲ್ ಹಾಗೂ ಸಿಂಗರ್‍ ಬಾದ್ಷಾ ಸಹ ಭಾಗಿಯಾಗಿದ್ದರು. ಈ ಇಬ್ಬರೂ ಒಬ್ಬರ ಕೈ ಒಬ್ಬರು ಇಟ್ಟುಕೊಂಡು ಹೋಗುತ್ತಿರುವ ಪೊಟೋ ಮಾತ್ರ ಭಾರಿ ವೈರಲ್ ಆಗಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ರೂಮರ್‍ ಸಹ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಸಿಂಗರ್‍ ಬಾದ್ಷಾ ರಿಯಾಕ್ಟ್ ಆಗಿದ್ದಾರೆ. ದೀಪಾವಳಿ ಹಬ್ಬದ ಸಂಭ್ರದಲ್ಲಿ ತೆಗೆದ ಪೊಟೋಗಳನ್ನು ಇನ್ಸ್ಟಾ ಹ್ಯಾಂಡಲ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ನನಗೆ ಅತ್ಯಂತ ಪ್ರೀತಿ ಪಾತ್ರರು ಎಂದು ಕ್ಯಾಪ್ಷನ್ ಹಾಕಲಾಗಿತ್ತು. ಈ ಕಾರಣದಿಂದ ರೂಮರ್‍ ಹರಿದಾಡಲು ಶುರುವಾಯ್ತು. ಇದಕ್ಕೆ ರಿಯಾಕ್ಟ್ ಆದ ಬಾದ್ಷಾ ಡಿಯರ್‍ ಇಂಟರ್‍ ನೆಟ್, ನಿರಾಸೆ ಮಾಡಿದ್ದಕ್ಕೆ ನನ್ನ ಕ್ಷಮಿಸಿ ಎಂದು ಫನ್ನಿ ಎಮೋಜಿಗಳೊಂದಿಗೆ ಕ್ಲಾರಿಟಿ ಕೊಟ್ಟಿದ್ದು, ಮೃಣಾಲ್ ಹಾಗೂ ಬಾದ್ಷಾ ಅಫೈರ್‍ ರೂಮರ್‍ ಗೆ ಅಂತ್ಯ ಹಾಡಿದ್ದಾರೆ.