ಆತನೊಂದಿಗೆ ಮಾತ್ರ ನಾನು ಲಿಪ್ ಲಾಕ್ ಮಾಡುತ್ತೇನೆ ಎಂದ ಸ್ಟಾರ್ ನಟಿ ಶ್ರೀಲೀಲಾ…!

Follow Us :

ಸೌತ್ ಸಿನಿರಂಗದಲ್ಲಿ ಇತ್ತಿಚಿಗೆ ಕನ್ನಡ ಮೂಲದ ನಟಿಯರ ಹವಾ ಜೋರಾಗಿಯೇ ಇದೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಮತಷ್ಟು ನಟಿಸುತ್ತಾ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಭಗವಂತ ಕೇಸರಿ ಸಿನೆಮಾದಲ್ಲಿ ಸಹ ಶ್ರೀಲೀಲಾ ಬಾಲಕೃಷ್ಣ ಮಗಳ ಪಾತ್ರದಲ್ಲಿ ನಟಿಸಿದ್ದು ಒಳ್ಳೆಯ ಪ್ರಶಂಸೆ ಸಹ ಪಡೆದುಕೊಂಡಿದ್ದಾರೆ. ಇನ್ನೂ ಸಂದರ್ಶನವೊಂದರಲ್ಲಿ ಶ್ರೀಲೀಲಾ ಸಿನೆಮಾಗಳಲ್ಲಿ ತಾವು ಯಾವುದೇ ಕಾರಣಕ್ಕೂ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ. ಲಿಪ್ ಲಾಕ್ ಮಾಡುವುದೇ ಆದರೇ ಅದು ಆತನೊಂದಿಗೆ ಮಾತ್ರ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ಶ್ರೀಲೀಲಾ ತೆಲುಗಿನಲ್ಲಿ ಭಾರಿ ಫೇಂ ಪಡೆದುಕೊಂಡು ಸಕ್ಸಸ್ ಜರ್ನಿ ಸಾಗಿಸುತ್ತಿದ್ದಾರೆ. ಭಗವಂತ್ ಕೇಸರಿ ಸಿನೆಮಾದ ಪ್ರಮೋಷನ್ ನಿಮಿತ್ತ ಆಕೆ ಕೆಲವೊಂದು ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದು, ಕೆಲವೊಂದು ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಈ ಹಾದಿಯಲ್ಲೇ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಸಿನೆಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸೊಲ್ಲವಂತೆ. ಒಂದು ಲಿಪ್ ಲಾಕ್ ಮಾಡಬೇಕಾದ ಪರಿಸ್ಥಿತಿ ಬಂದರೇ ಅದು ನನ್ನ ಬಾವಿ ಪತಿಯೊಂದಿಗೆ ಮಾತ್ರ ಎಂದು ಶ್ರೀಲೀಲಾ ಹೇಳಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ನಡುವೆ ಶ್ರೀಲೀಲಾ ಸ್ಟಾರ್‍ ನಟನ ಮಗನೊಂದಿಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೊಂದು ಸಹ ವೈರಲ್ ಆಗಿದೆ.

ಭಗವಂತ್ ಕೇಸರಿ ಸಿನೆಮಾದ ಮೂಲಕ ಬಾಲಯ್ಯನ ಮಗಳಾಗಿ ನಟಿಸಿದ ಶ್ರೀಲೀಲಾ ಬಗ್ಗೆ ಮತ್ತೊಂದು ರೂಮರ್‍ ಕೇಳಿಬರುತ್ತಿದೆ. ಅದರಂತೆ ಶ್ರೀಲೀಲಾ ನಂದಮೂರಿ ಬಾಲಕೃಷ್ಣ ರವರ ಮಗನಾದ ಮೋಕ್ಷಗ್ನ ಜೊತೆಗೆ ಮದುವೆ ಮಾಡಲು ತಯಾರಿಗಳು ನಡೆದಿದೆ ಎಂಬ ರೂಮರ್‍ ಬಿರುಗಾಳಿಯಂತೆ ಹಬ್ಬಿದೆ. ಭಗವಂತ್ ಕೇಸರಿ ಸಿನೆಮಾದ ಶೂಟಿಂಗ್ ಸಮಯದಲ್ಲಿ ಮೋಕ್ಷಗ್ನ ಶ್ರೀಲೀಲಾ ಜೊತೆಗೆ ಕಾಣಿಸಿಕೊಂಡಿದ್ದರು. ಅಷ್ಟಕ್ಕೆ ಅವರಿಬ್ಬರ ನಡುವೆ ಸಂಬಂಧವಿದೆ ಎಂದು ಹೇಳುವುದು ಸರಿಯಲ್ಲ ಎಂಬ ವಾದ ಸಹ ಕೇಳಿಬಂದಿದೆ. ಈ ಬಗ್ಗೆ ಶ್ರೀಲೀಲಾ ಸಹ ಬೇಸರ ವ್ಯಕ್ತಪಡಿಸಿದ್ದು, ಅದೆಲ್ಲಾ ಕಟ್ಟು ಕಥೆಗಳು ಎಂದು ಹೇಳಿದರೂ ಸಹ ಯಾರೂ ಸಹ ನಂಬುತ್ತಿಲ್ಲ ಎಂದು ಸಹ ಹೇಳಲಾಗುತ್ತಿದೆ. ಇನ್ನೂ ಸಿನೆಮಾ ಕಲಾವಿದರ ಬಗ್ಗೆ ಅಂತಹ ರೂಮರ್‍ ಗಳು ಹರಿದಾಡುವುದು ಸರ್ವೆ ಸಾಮಾನ್ಯ ಎಂದು ಹೇಳಬಹುದಾಗಿದೆ.