ಮತ್ತೆ ಮದುವೆಗೆ ಸಿದ್ದರಾದ ನಟಿ ಅಮಲಾಪಾಲ್, ಮದುವೆಯಾಗುವವನ್ನು ಮುದ್ದಾಡಿದ ಅಮಲಾಪಾಲ್, ವೈರಲ್ ಆದ ವಿಡಿಯೋ….!

Follow Us :

ನಟಿ ಅಮಾಲಾಪಾಲ್ ಕೆರಿಯರ್‍ ವಿಭಿನ್ನವಾದ ಸಿನೆಮಾಗಳ ಮೂಲಕ ಸಾಗುತ್ತಿದೆ. ಗ್ಲಾಮರ್‍ ಪಾತ್ರಗಳುಳ್ಳ ಸಿನೆಮಾಗಳಿಂದ ದೂರವುಳಿದು ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಆದರೆ ಇತ್ತೀಚಿಗೆ ಆಕೆ ಗ್ಲಾಮರ್‍ ರೋಲ್ಸ್ ಪಕ್ಕಕ್ಕಿಟ್ಟು ಕಥೆಗೆ ಪ್ರಾಧಾನ್ಯತೆ ಇರುವಂತಹ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ನಟಿ ಅಮಲಾಪಾಲ್ ಮತ್ತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಮದುವೆಯಾಗುವ ವ್ಯಕ್ತಿಯನ್ನು ಮುದ್ದಾಡುತ್ತಾ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ನಟಿ ಅಮಾಲಾಪಾಲ್ ಕೆರಿಯರ್‍ ವಿಭಿನ್ನವಾದ ಸಿನೆಮಾಗಳ ಮೂಲಕ ಸಾಗುತ್ತಿದೆ. ಗ್ಲಾಮರ್‍ ಪಾತ್ರಗಳುಳ್ಳ ಸಿನೆಮಾಗಳಿಂದ ದೂರವುಳಿದು ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಇನ್ನೂ ಈ ಹಿಂದೆಗಿಂತ ಪ್ರಸ್ತುತ ಅಮಲಾಪಾಲ್ ಕ್ರೇಜ್ ಏರಿದೆ ಎಂದೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಆಕೆಯ ವೈವಿಧ್ಯಮಯವಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನಲಾಗಿದೆ. ಇನ್ನೂ ನಟಿ ಅಮಲಾಪಾಲ್ ಕಥೆ ಡಿಮ್ಯಾಂಡ್ ಮಾಡಿದರೇ ಬೋಲ್ಡ್ ಆಗಿ ನಟಿಸಲು ಸಹ ಸಿದ್ದವಾಗಿದ್ದರು. ಈ ಹಿಂದೆ ಆಮೆ ಎಂಬ ಸಿನೆಮಾದಲ್ಲಿ ಆಕೆ ಸಂಪೂರ್ಣ ನ್ಯೂಡ್ ಆಗಿ ನಟಿಸಿದ್ದರು. ಈ ಸಿನೆಮಾಗಾಗಿ ಆಕೆಯ ಧೈರ್ಯವನ್ನು ಕೆಲವರು ಮೆಚ್ಚಿದರೇ ಮತ್ತೆ ಕೆಲವರು ವಿಮರ್ಶೆ ಸಹ ಮಾಡಿದ್ದರು. ಜೊತೆಗೆ ಆಗಾಗ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ.

ಡಸ್ಕಿ ಬ್ಯೂಟಿ ಅಮಲಾಪಾಲ್ ನಿಜಜೀವನದಲ್ಲೂ ಸಹ ಬೋಲ್ಡ್ ಆಗಿಯೇ ಇರುತ್ತಾರೆ. ಕಳೆದ 2014 ರಲ್ಲಿ ಅಮಲಾಪಾಲ್ ನಿರ್ದೇಶಕ ಎ.ಎಲ್.ವಿಜಯ್ ಎಂಬಾತನನ್ನು ಮದುವೆಯಾದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡ ಕಾರಣ ಅವರಿಬ್ಬರೂ ವಿಚ್ಚೇದನ ಪಡೆದುಕೊಂಡರು. ಬಳಿಕ ಆಕೆ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾದರು. ಈ ಹಿಂದೆ ಸಹ ಅಮಲಾಪಾಲ್ ರವರ ಎರಡನೇ ಮದುವೆಯ ಬಗ್ಗೆ ಅನೇಕ ರೂಮರ್‍ ಗಳೂ ಸಹ ಹರಿದಾಡಿತ್ತು. ಜೊತೆಗೆ ಆಕೆ ಎರಡನೇ ಮದುವೆ ಆದರು ಎಂದು ಕೆಲವೊಂದು ಪೊಟೋಗಳು ಸಹ ವೈರಲ್ ಆಗಿತ್ತು. ಇದೀಗ ಆಕೆ ಮತ್ತೊಮ್ಮೆ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಇಂದು (ಅ.26) ನಟಿ ಅಮಲಾಪಾಲ್ ಹುಟ್ಟುಹಬ್ಬವಾಗಿದ್ದು, ಹುಟ್ಟುಹಬ್ಬದ ಸಮಯದಲ್ಲಿ ಆಕೆಯ ಪ್ರಿಯಕರ ಪ್ರಪೋಸ್ ಮಾಡಿದ್ದಾರೆ. ಆ ಪ್ರಪೋಸಲ್ ಗೆ ಅಮಲಾಪಾಲ್ ಸಹ ಒಪ್ಪಿಗೆ ನೀಡಿದ್ದಾರೆ.

ಇನ್ನೂ ಅಮಲಾಪಾಲ್ ಪ್ರಿಯಕರನ ಹೆಸರು ಜಗತ್ ದೇಸಾಯಿ. ಇತ್ತೀಚಿಗಷ್ಟೆ ಅವರಿಬ್ಬರೂ ಡೇಟಿಂಗ್ ಶುರು ಮಾಡಿದ್ದರಂತೆ. ಅಮಲಾಪಾಲ್ ಹುಟ್ಟುಹಬ್ಬದಂದು ಆಕೆಗೆ ಜಗತ್ ರಿಂಗ್ ಹಾಕಿದ್ದಾನೆ. ಈ ವೇಳೆ ಅಮಲಾಪಾಲ್ ಸಂತೋಷದಿಂದ ಜಗತ್ ಗೆ ಮುತ್ತಿನ ಸುರಿಮಳೆಗೈದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋಗೆ ಜಗತ್ ಸಹ ನನ್ನ ರಾಣಿ ಎಸ್ ಹೇಳಿದ್ದಾಳೆ  ಎಂದು ವೆಡ್ಡಿಂಗ್ ಬೆಲ್ಸ್ ಹಾಗೂ ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಜಗತ್ ಗೋವಾ ಮೂಲದ ವ್ಯಕ್ತಿಯಾಗಿದ್ದು, ದುಬಾರಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್‍ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.