ಆ ಕಾರಣದಿಂದಲೇ ನನ್ನ ಸಿನೆಮಾ ಫ್ಲಾಪ್ ಆದವು ಎಂದ ಬಾಲಯ್ಯ, ಶಾಕಿಂಗ್ ಕಾಮೆಂಟ್ಸ್ ವೈರಲ್….!

Follow Us :

ತೆಲುಗು ಸಿನಿರಂಗದ ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳು ಹಾಗೂ ರಾಜಕೀಯವನ್ನು ಸಹ ಸಮರೋಪಾದಿಯಲ್ಲಿ ಮುನ್ನೆಡೆಸುತ್ತಿದ್ದಾರೆ. ತಮ್ಮ ಸಿನಿಮಾ ಕೆರಿಯರ್‍ ನಲ್ಲಿ ಅನೇಕ ಸಿನೆಮಾಗಳು ಪ್ಲಾಫ್ ಆಗಿದೆ, ಕೆಲವೊಂದು ಸೂಪರ್‍ ಹಿಟ್ ಸಹ ಆಗಿದೆ. ಇದೀಗ ತಮ್ಮ ಸಿನೆಮಾಗಳು ಪ್ಲಾಫ್ ಆಗೋದಿಕ್ಕೆ ಅದೇ ಕಾರಣ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಅವರ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ನಂದಮೂರಿ ಬಾಲಕೃಷ್ಣ ಕಳೆದ ವರ್ಷ ಅಖಂಡ ಹಾಗೂ ಇದೇ ವರ್ಷದ ಆರಂಭದಲ್ಲಿ ವೀರಸಿಂಹಾರೆಡ್ಡಿ ಸಿನೆಮಾಗಳ ಮೂಲಕ ಸೂಪರ್‍ ಹಿಟ್ ಪಡೆದುಕೊಂಡರು. ಬಳಿಕ ಭಗವಂತ್ ಕೇಸರಿ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಈ ಸಿನೆಮಾವನ್ನು ಅನೀಲ್ ರಾವಿಪೂಡಿ ನಿರ್ದೇಶನದಲ್ಲಿ ಮೂಡಿಬಂದಿದೆ. ಬಾಲಕೃಷ್ಣ ಮಗಳ ಪಾತ್ರದಲ್ಲಿ ಶ್ರೀಲೀಲಾ, ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸಿದ್ದು, ಅ.19 ರಂದು ಈ ಸಿನೆಮಾ ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಳ್ಳುತ್ತಿದೆ. ಫ್ಯಾಮಿಲಿ ಹಾಗೂ ಮಾಸ್ ಕಥನವನ್ನು ಒಳಗೊಂಡ ಈ ಸಿನೆಮಾದ ಪ್ರಮೋಷನ್ ಸಹ ಜೋರಾಗಿಯೇ ನಡೆಯುತ್ತಿದೆ.

ಸಿನೆಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಶ್ರೀಲೀಲಾ ಹಾಗೂ ಬಾಲಕೃಷ್ಣ ಕೆಲವೊಂದು ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಂದರ್ಶನದಲ್ಲಿ ಶ್ರೀಲೀಲಾ ಬಾಲಕೃಷ್ಣರವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮ ಸಿನೆಮಾಗಳಲ್ಲಿ ನಿಮಗೆ ಇಷ್ಟವಾಗದ ಸಿನೆಮಾಗಳು ಯಾವುವು ಎಂದು ಶ್ರೀಲೀಲಾ ಇಂಟ್ರಸ್ಟಿಂಗ್ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ನೇರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಬಾಲಯ್ಯ.  ಒಬ್ಬ ನಟನಾಗಿ ಇಷ್ಟವಾದ ಸಿನೆಮಾ, ಇಷ್ಟವಾಗದ ಸಿನೆಮಾ ಯಾವುದು ಎಂಬುದನ್ನು ಹೇಳುವುದು ಕಷ್ಟ. ಎಲ್ಲಾ ಸಿನೆಮಾಗಳಿಗೂ ಒಂದೇ ಮಾದರಿಯಲ್ಲಿ ಕಷ್ಟ ಪಡುತ್ತೇವೆ. ಕೆಲವೊಂದು ಚೆನ್ನಾಗಿ ಪ್ರದರ್ಶನವಾಗುತ್ತೆ, ಕೆಲವೊಂದು ಪ್ರದರ್ಶನ ಆಗೋಲ್ಲ. ಇದೇ ವೇಳೆ ಜ್ಯೋತಿಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾನು ನಟಿಸಿದ ಸಿನೆಮಾಗಳು ಫ್ಲಾಪ್ ಆಗಲು ಮೂಹರ್ತ ಸರಿಯಿಲ್ಲದಿರುವುದೇ ಕಾರಣ ಎಂದಿದ್ದಾರೆ.

ಮುಹೂರ್ತದ ವಿಚಾರದಲ್ಲಿ ಬಾಲಯ್ಯ ನಿಖರವಾಗಿರುತ್ತಾರೆ. ಮುಹೂರ್ತ, ಜ್ಯೋತಿಷ್ಯವನ್ನು ಬಾಲಕೃಷ್ಣ ಫಾಲೋ ಆಗುತ್ತಿರುತ್ತಾರೆ. ಇದೇ ಸುದ್ದಿಯನ್ನು ಮತ್ತೊಮ್ಮೆ ಬಾಲಕೃಷ್ಣ ಹೇಳಿದ್ದು, ಆತನ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.