ತನ್ನ ಫಸ್ಟ್ ಕ್ರಷ್ ಯಾರು ಎಂಬುದನ್ನು ರೀವಿಲ್ ಮಾಡಿದ ಸ್ಟಾರ್ ಹಿರೋಯಿನ್ ಶ್ರುತಿ ಹಾಸನ್…..!

Follow Us :

ಸ್ಟಾರ್‍ ಕಿಡ್ ಆದರೂ ಸಹ ಸ್ವಂತ ಪ್ರತಿಭೆಯಿಂದ ಸ್ಟಾರ್ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಶ್ರುತಿ ಹಾಸನ್ ಸಹ ಒಬ್ಬರಾಗಿದ್ದಾರೆ. ಮೊದಲಿಗೆ ಸಂಗೀತ ನಿರ್ದೇಶಕಿಯಾಗಿ ತನ್ನ ತಂದೆಯಾದ ಲೋಕನಾಯಕ ಕಮಲ್ ಹಾಸನ್ ಅಭಿನಯದ ಉನ್ತ್ನೆಪ್ಪೊಲ್ ಒರುವನ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದರು. ಬಳಿಕ ನಟಿಯಾಗಿ ಹಿಂದಿಯಲ್ಲಿ ಲಕ್ ಹಾಗೂ ತೆಲುಗಿನಲ್ಲಿ ಅನಗನಗಾ ಒಕ ಧಿರುಡು ಎಂಬ ಸಿನೆಮಾದಲ್ಲಿ ನಟಿಸಿದರು. ಇನ್ನೂ ಆಕೆಯನ್ನು ಸಂಚಲನಾತ್ಮಕ ನಟಿಯೆಂದೇ ಕರೆಯುತ್ತಾರೆ. ಏನೇ ಇದ್ದರೂ ನೇರವಾಗಿ ಮಾತನಾಡುವ ವ್ಯಕ್ತಿತ್ವ ಹೊಂದಿದ್ದಾರೆ. ಇದೀಗ ಆಕೆ ತನ್ನ ಫಸ್ಟ್ ಕ್ರಷ್ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಸ್ಟಾರ್‍ ನಟಿ ಶ್ರುತಿ ಹಾಸನ್ ಸದ್ಯ ಸಕ್ಸಸ್ ಖುಷಿಯಲ್ಲಿದ್ದಾರೆ. ವರ್ಷದ ಆರಂಭದಲ್ಲೇ ಆಕೆ ವೀರಸಿಂಹಾರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಇನ್ನೂ ಕೆರಿಯರ್‍ ಆರಂಭದಲ್ಲಿ ಅಷ್ಟೊಂದು ಸಕ್ಸ್ ಕಾಣದೇ ಇದ್ದರೂ ಸಹ ಗಬ್ಬರ್‍ ಸಿಂಗ್ ಸಿನೆಮಾದ ಮೂಲಕ ಭಾರಿ ಹಿಟ್ ಪಡೆದುಕೊಂಡರು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಈ ಹಿಂದೆ ಆಕೆ ವೈಯುಕ್ತಿಕ ಕಾರಣಗಳಿಂದ ಸಿನೆಮಾಗಳಿಂದ ಕೆಲ ದಿನಗಳ ಕಾಲ ದೂರವೇ ಇದ್ದರು. ಇದೀಗ ಆಕೆ ಖ್ಯಾತ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ಒಪೆನ್ ಆಗಿಯೇ ಒಂದಾಗಿ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಈ ಜೋಡಿ ಮದುವೆಯ ಬಗ್ಗೆ ನಿರ್ಣಯ ತೆಗೆದುಕೊಂಡಿಲ್ಲ ಎನ್ನಬಹುದಾಗಿದೆ.

ಇನ್ನೂ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತನ್ನ ವೈಯುಕ್ತಿಕ ವಿಚಾರಗಳ ಜೊತೆಗೆ ಸಿನೆಮಾ ಅಪ್ಡೇಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಕೆಲವೊಮ್ಮೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸಹ ನಡೆಯುತ್ತಾ ಅವರ ಅನೇಕ ಪ್ರಶ್ನೆಗಳಿಗೆ ಉತ್ತರ ಸಹ ನೀಡುತ್ತಿರುತ್ತಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತನ್ನ ಮೊದಲ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಮೊದಲ ಕ್ರಷ್ ಯಾರು ಎಂಬ ಪ್ರಶ್ನೆಯೊಂದನ್ನು ಆಂಕರ್‍ ಕೇಳಿದ್ದು, ಅದಕ್ಕೆ ಆಕೆ ನನ್ನ  ಮೊದಲ ಕ್ರಷ್ ಹಾಲಿವುಡ್ ನಟ ಬ್ರೂಸ್ ಲೀ ಎಂದು ಹೇಳಿದ್ದಾರೆ. ಆಕೆ ಈ ಪ್ರಶ್ನೆ ಕೇಳಿದ ಕೂಡಲೇ ಹಿಂದೆ ಮುಂದೆ ನೋಡದೇ ನನ್ನ ಮೊದಲ ಕ್ರಷ್ ಬ್ರೂಸ್ ಲಿ ಎಂದು ಹೇಳಿದ್ದಾರೆ.

ಇನ್ನೂ ನಟಿ ಶ್ರುತಿ ಹಾಸನ್ ವರ್ಷದ ಆರಂಭದಲ್ಲೇ ಒಳ್ಳೆಯ ಸಕ್ಸಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಸದ್ಯ ಆಕೆ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿದ ಸಲಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಆಕೆ ಆದ್ಯ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಶ್ರುತಿ ಹಾಸನ್ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆಕೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ.