Film News

ನೆವರ್ ಬಿಪೋರ್ ಎಂಬಂತೆ ಹಾಟ್ ಟ್ರೀಟ್ ಕೊಟ್ಟ ಶ್ರೇಯಾ ಧನ್ವಂತರಿ, ಅರೆನಗ್ನವಾಗಿ ಪೋಸ್ ಕೊಟ್ಟ ಬ್ಯೂಟಿ…!

ಹೈದರಾಬಾದ್ ಮೂಲದ ನಟಿ ಶ್ರೇಯಾ ಧನ್ವಂತರಿ ಸಹ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಫೇಮ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಟಿ ಶ್ರೇಯಾ ಧನ್ವಂತರಿ ಸ್ನೇಹಗೀತಂ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆಗೆ ಟಾಲಿವುಡ್ ನಲ್ಲಿ ಅಷ್ಟೊಂದು ಕ್ರೇಜ್ ದೊರೆಯಲಿಲ್ಲ. ಬಳಿಕ ಬಾಲಿವುಡ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಅಲ್ಲಿ ಕೆಲವೊಂದು ವೆಬ್ ಸಿರೀಸ್ ಗಳ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಯಾರಿಗೂ ಕಡಿಮೆಯಿಲ್ಲ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಇತ್ತೀಚಿಗೆ ಅನೇಕ ನಟಿಯರು ಒಬ್ಬರನ್ನೊಬ್ಬರು ಮೀರಿ ಸ್ಕಿನ್ ಶೋ ಮಾಡುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸಾರ್‍ ಇಲ್ಲದಂತೆ ಮತಷ್ಟು ಹಾಟ್ ಆಗಿ ದರ್ಶನ ಕೊಡುತ್ತಿದ್ದಾರೆ. ಸಿನೆಮಾಗಳಲ್ಲಿ ಹೆಚ್ಚು ಸ್ಕಿನ್ ಶೋ ಮಾಡದಿದ್ದರೇ ಅವಕಾಶಗಳು ಸಿಗುವುದಿಲ್ಲ ಎಂಬ ಉದ್ದೇಶದಿಂದ ಸದಾ ಬೋಲ್ಡ್ ಅಂಡ್ ಹಾಟ್ ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಶ್ರೇಯಾ ಧನ್ವಂತರಿ ಸದಾ ಬೋಲ್ಡ್ ಪೊಟೋ ಶೂಟ್ಸ್ ಮೂಲಕ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಾ ತಾನು ಬೋಲ್ಡ್ ದೃಶ್ಯಗಳಲ್ಲೂ ಸಹ ನಟಿಸಬಲ್ಲೆ ಎಂಬುದನ್ನು ಸಾರಿ ಹೇಳುತ್ತಿದ್ದಾರೆ.  ಸೌತ್ ಸಿನೆಮಾಗಳ ಜೊತೆಗೆ ಬಾಲಿವುಡ್ ನಲ್ಲೂ ಸಹ ಆಕೆ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಆಕೆ ದಿ ಫ್ಯಾಮಿಲಿ ಮ್ಯಾನ್ ಎಂಬ ವೆಬ್ ಸಿರೀಸ್ ನಿಂದ ಭಾರಿ ಕ್ರೇಜ್ ಪಡೆದುಕೊಂಡರು.

ಕೆಲವು ದಿನಗಳ ಹಿಂದೆಯಷ್ಟೆ ಶ್ರೇಯಾ ಧನ್ವಂತರಿ ಕಡಲ ತೀರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಆಕೆ ವೈಟ್ ಅಂಡ್ ಬ್ಲಾಕ್ ಮೋಡ್ ನಲ್ಲಿ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಪೊಟೋಗಳ ಮೂಲಕ ದರ್ಶನ ಕೊಟ್ಟಿದ್ದಾರೆ. ಬಿಳಿ ಬಣ್ಣದ ಶರ್ಟ್ ಮಾತ್ರ ಧರಿಸಿ ಕೇವಲ ಒಂದು ಬಟನ್ ಮಾತ್ರ ಹಾಕಿಕೊಂಡಿದ್ದಾರೆ. ತುಂಬಾ ಕ್ಲೋಜ್ ಆಗಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಯಾವುದೇ ಒಳ ಉಡುಪು ಸಹ ಆಕೆ ಧರಿಸಿಲ್ಲ. ಬಹುತೇಕ ನಗ್ನವಾಗಿಯೇ ಆಕೆ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಕೆಲವರು ಹಾಟ್ ಕಾಮೆಂಟ್ ಗಳನ್ನು ಮಾಡುತ್ತಿದ್ದರೇ ಮತ್ತೆ ಕೆಲವರು ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಈ ಅವತಾರ ತಾಳಿದ್ದೀರಾ, ನಿಮ್ಮ ಮೈ ಮೇಲೆ ಬಟ್ಟೆ ನಿಲ್ಲುತ್ತಿಲ್ಲವೇ, ಆ ಒಂದು ಬಟನ್ ಆದರೂ ಸಹ ಏಕೆ ಎಂದು ಟ್ರೋಲ್ ಸಹ ಮಾಡುತ್ತಿದ್ದಾರೆ.

ಹೈದರಾಬಾದ್ ನಲ್ಲಿ ಜನ್ಮಿಸಿದ ಶ್ರೇಯಾ ಧನ್ವಂತಿ ನಟಿ, ಲೇಖಕಿ ಹಾಗೂ ಉದ್ಯಮಿ ಯಾಗಿದ್ದಾರೆ. ಬಾಲಿವುಡ್ ನಲ್ಲಿ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿರುವ ಈಕೆ ವೈ ಚೀಟ್ ಇಂಡಿಯಾ, ಲೂಪ್ ಲಪ್ತಾ ಮೊದಲಾದ ಸಿನೆಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೆಬ್ ಸೀರಿಸ್ ಹಾಗೂ ಅನೇಕ ಸಿನೆಮಾಗಳಲ್ಲೂ ಸಹ ಶ್ರೇಯಾ ನಟಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಫಾಲೋಯಿಂಗ್ ಬೆಳೆಸಿಕೊಳ್ಳುವುದರ ಜೊತೆಗೆ ನಿರ್ದೇಶಕ ಹಾಗೂ ನಿರ್ಮಾಪಕರನ್ನು ಸಹ ಸೆಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.

Most Popular

To Top