Film News

ಮೇಕಪ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ಪೂಜಾ ಹೆಗ್ಡೆ, ಸ್ಲೀವ್ ಲೆಸ್ ಟಾಪ್ ನಲ್ಲಿ ಹಾಟ್ ಸೆಲ್ಫಿ….!

ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿರುವ ನಟಿಯರಲ್ಲಿ ಸ್ಟಾರ್‍ ಹಿರೋಯಿನ್ ಪೂಜಾ ಹೆಗ್ಡೆ ಒಬ್ಬರಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಳ್ಳುತ್ತಾ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಆದರೆ ಕಳೆದ ವರ್ಷ ಮಾತ್ರ ಆಕೆಗೆ ತುಂಬಾ ಕೆಟ್ಟ ವರ್ಷ ಎಂದೇ ಹೇಳಬಹುದಾಗಿದೆ. 2022 ರಲ್ಲಿ ಪೂಜಾ ಹೆಗ್ಡೆಯ ಸಿನೆಮಾಗಳು ಯಾವುದೂ ಸಹ ಹಿಟ್ ಹೊಡೆಯಲಿಲ್ಲ. ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸಿನೆಮಾಗಳ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕ್ರೇಜಿ ಹಿರೋಯಿನ್ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಸಖತ್ ಹವಾ ಸೃಷ್ಟಿ ಮಾಡುತ್ತಿರುತ್ತಾರೆ.

ಸ್ಟಾರ್‍ ಬ್ಯೂಟಿ ಬುಟ್ಟಬೊಮ್ಮ ಪೂಜಾ ಹೆಗ್ಡೆ ಸದ್ಯ ಸೌತ್ ಅಂಡ್ ನಾರ್ತ್‌ನಲ್ಲೂ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಸ್ಟಾರ್‍ ಹಿರೋ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಬಾಯ್ ಕಿಸಿ ಕಿ ಜಾನ್ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಇದೇ ಮಾಹೆಯಲ್ಲಿ ಅಂದರೇ ಏ.28 ರಂದು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗಿನಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಸೂಪರ್‍ ಸ್ಟಾರ್‍ ಮಹೇಶ್ ಬಾಬು ಕಾಂಬಿನೇಷನ್ ನ SSMB28 ನಲ್ಲೂ ಸಹ ಪೂಜಾ ಹೆಗ್ಡೆ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ.  ಇನ್ನೂ ಈ ಸಿನೆಮಾದ ಫಸ್ಟ್ ಲುಕ್, ರಿಲೀಜ್ ಡೇಟ್ ಸಹ ರಿವೀಲ್ ಮಾಡಿದೆ. ಸದ್ಯ ಪೂಜಾ ಹೆಗ್ಡೆ ಫಸ್ಟ್ ಲುಕ್ ಗಾಗಿ ಆಕೆಯ ಅಭಿಮಾನಿಗಳು ಈಗರ್‍ ಆಗಿ ಕಾಯುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಜೊತೆಗೆ ಪೂಜಾ ಹೆಗ್ಡೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ.

ಇನ್ನೂ ಪೂಜಾ ಹೆಗ್ಡೆ ವೀಕೆಂಡ್ ಟ್ರೀಟ್ ಎಂಬಂತೆ ವರ್ಕೌಟ್ ಮಾಡುತ್ತಾ ಹಾಟ್ ಸೆಲ್ಫಿ ಹಂಚಿಕೊಂಡಿದ್ದಾರೆ. ಮೇಕಪ್ ಲೆಸ್ ಆಗಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನ್ಯಾಚುರಲ್ ಲುಕ್ಸ್ ನೊಂದಿಗೆ ಅಭಿಮಾನಿಗಳನ್ನು ಫಿದಾ ಮಾಡಿದ್ದಾರೆ. ಆರೆಂಜ್ ಕಲರ್‍ ಸ್ಲೀವ್ ಲೆಸ್ ಟಾಪ್ ನಲ್ಲಿ ವರ್ಕೌಟ್ ಮಾಡಿ ಪೋಸ್ ಕೊಟ್ಟಿದ್ದಾರೆ. ವರ್ಕೌಟ್ ಮಾಡಿದ್ದರಿಂದ ಮತಷ್ಟು ಸುಂದರವಾಗಿ ಕಾಣಿಸಬಹುದು ಎಂದು ಹೇಳಿದ್ದಾರೆ. ಇನ್ನೂ ಸೆಲ್ಫಿಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ಪೂಜಾ ಒಳ್ಳೆಯ ವ್ಯಾಯಾಮದ ಬಳಿಕ ಕೆಂಪಾದ ಕೆನ್ನೆಗಳನ್ನು ನೋಡಿ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಪೂಜಾ ಮೇಕಪ್ ಇಲ್ಲದೇ ಇದ್ದರೂ ಸಹ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಫ್ಯಾನ್ಸ್ ಸಹ ಮೆಚ್ಚುಗೆಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ. ಪೂಜಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ತನ್ನ ವೈಯುಕ್ತಿಕ ವಿಚಾರಗಳೊಂದಿಗೆ ಆಗಾಗ ಆರೋಗ್ಯ ಹಾಗೂ ಹೆಲ್ತ್ ಟಿಪ್ಸ್ ಸಹ ನೀಡುತ್ತಿರುತ್ತಾರೆ. ಜೊತೆಗೆ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

Most Popular

To Top