Film News

ಸಮಂತಾ ಅಭಿಮಾನಿಗಳಿಗೆ ಬಿಗ್ ಶಾಕ್, ಸಿನೆಮಾಗಳಿಂದ ಶಾಶ್ವತವಾಗಿ ಬ್ರೇಕ್ ತೆಗೆದುಕೊಳ್ಳಲಿದ್ದಾರಂತೆ ಸಮಂತಾ?

ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ಸದಾ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಆಕೆ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಬಳಿಕ ಆಕೆ ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದು, ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದರು. ಖುಷಿ ಸಿನೆಮಾದ ಬಳಿಕ ಮತ್ತೆ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾಗಿ ಹೇಳಲಾಗಿತ್ತು. ಇದೀಗ ಕೇಳಿಬರುತ್ತಿರುವ ಮತ್ತೊಂದು ಸುದ್ದಿಯಂತೆ ಸಮಂತಾ ಶಾಶ್ವತವಾಗಿ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಏಮಾಯಾ ಚೆಸ್ಯಾವೋ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಮಂತಾ ಕಡಿಮೆ ಸಮಯದಲ್ಲಿ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ಮಹೇಶ್ ಬಾಬು, ಜೂನಿಯರ್‍ ಎನ್.ಟಿ.ಆರ್‍, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಅನೇಕ ನಟರೊಂದಿಗೆ ತಮಿಳಿನಲ್ಲೂ ಸಹ ಅನೇಕ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಂಡು ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡಿದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ನಾಗಚೈತನ್ಯರನ್ನು ಪ್ರೀತಿಸಿ ಮದುವೆಯಾದರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡು ವಿಚ್ಚೇದನ ಪಡೆದುಕೊಂಡರು. ವಿಚ್ಚೇದನದ ಬಳಿಕ ಸಮಂತಾ ಲೇಟಿ ಓರಿಯೆಂಟೆಡ್ ಸಿನೆಮಾಗಳಲ್ಲೇ ಹೆಚ್ಚಾಗಿ ನಟಿಸಿದರು.

ಇನ್ನೂ ಸಮಂತಾ ಕಳೆದ ವರ್ಷ ಮಯೋಸೈಟಿಸ್ ವ್ಯಾಧಿಗೆ ಗುರಿಯಾಗಿದ್ದಾಗಿ ಸೋಷಿಯಲ್ ಮಿಡಿಯಾ ಮೂಲಕ ವಿಚಾರ ಹಂಚಿಕೊಂಡಿದ್ದರು. ಈ ವ್ಯಾದಿಯಿಂದ ಆಕೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಸಿನೆಮಾ ಸೆಲೆಬ್ರೆಟಿಗಳ ಜೊತೆಗೆ ಅಭಿಮಾನಿಗಳು ಶುಭ ಕೋರಿದ್ದರು. ಇನ್ನೂ ಈ ವ್ಯಾದಿಗೆ ಆಕೆ ಚಿಕಿತ್ಸೆಗಾಗಿ ಇತ್ತಿಚಿಗಷ್ಷೆ ನ್ಯೂರ್ಯಾಕ್ ಗೆ ಹೋಗಿದ್ದರು. ಈ ವೇಳೆ ಆಕೆಗೆ ಒಂದು ವರ್ಷ ವಿಶ್ರಾಂತಿ ಬೇಕೆಂದು ವೈದ್ಯರ ಸೂಚನೆ ಮೇರೆಗೆ ಸಿನೆಮಾಗಳಿಂದ ದೂರ ಉಳಿದರು. ವಿಶ್ರಾಂತಿಯ ಜೊತೆಗೆ ಶೂಟಿಂಗ್ ಲೈಟ್ಸ್ ಗೆ ಎದುರಾಗಬೇಡ ಎಂದು ವೈದ್ಯರು ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಕಾರಣದಿಂದ ಆಕೆ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು.

ಆದರೆ ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಅದರಂತೆ ಸಮಂತಾ ಶಾಶ್ವತವಾಗಿ ಸಿನೆಮಾಗಳಿಂದ ದೂರ ಉಳಿಯಲಿದ್ದಾರಂತೆ. ಈಗಾಗಲೇ ಆಕೆ ಒಪ್ಪಿಕೊಂಡ ಸಿನೆಮಾಗಳಿಂದಲೂ ಸಹ ಹೊರಬರುತ್ತಿದ್ದಾರೆ. ಅಡ್ವಾನ್ಸ್ ತೆಗೆದುಕೊಂಡ ಸಿನೆಮಾಗಳ ನಿರ್ಮಾಪಕರಿಗೆ ಹಣ ವಾಪಸ್ಸು ನೀಡುತ್ತಿದ್ದಾರಂತೆ. ಜೊತೆಗೆ ಇತ್ತೀಚಿಗೆ ಸ್ಟಾರ್‍ ನಿರ್ದೇಶಕರೊಬ್ಬರು ಸಿನೆಮಾ ಕಥೆಯನ್ನು ಹೇಳಿದ್ದು, ಅದನ್ನು ಸಹ ಆಕೆ ರಿಜೆಕ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಮಾದರಿ ಆಕೆ ಅನೇಕ ಸಿನೆಮಾಗಳನ್ನು ರಿಜೆಕ್ಟ್ ಮಾಡಿದ್ದಾರಂತೆ. ಈ ಕಾರಣದಿಂದ ಆಕೆ ಸಿನೆಮಾಗಳಿಂದ ಶಾಶ್ವತವಾಗಿ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

Most Popular

To Top