Film News

ತಾಯಿಯಾಗಲಿದ್ದಾರಂತೆ ಸ್ಟಾರ್ ನಟಿ ಸಮಂತಾ, ಹೊಸದೊಂದು ಸುದ್ದಿ ವೈರಲ್…..!

ಕಳೆದ ಎರಡು ವರ್ಷಗಳಿಂದ ಸಮಂತಾ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ವಿಚ್ಚೇದನ, ಮಯೋಸೈಟಿಸ್ ಕಾರಣದಿಂದ ಮತಷ್ಟು ಸುದ್ದಿಯಾಗಿದ್ದರು. ಇದೀಗ ಮತ್ತೊಂದು ಕಾರಣದಿಂದ ಸಮಂತಾ ಸುದ್ದಿಯಾಗಿದ್ದಾರೆ. ಸದ್ಯ ಸಮಂತಾ ತಾಯಿಯಾಗಲಿದ್ದಾರಂತೆ. ಮದುವೆಯಾಗದೇ ಆಕೆ ತಾಯಿಯಾಗಲಿದ್ದಾರೆ ಎಂಬ ಸುದ್ದಿಯೋಂದು ಹರಿದಾಡುತ್ತಿದೆ.

ಸ್ಟಾರ್‍ ನಟಿ ಸಮಂತಾ ಏಮಾಯಾ ಚೇಸ್ಯಾವೇ ಎಂಬ ಸಿನೆಮಾದ ಮೂಲಕ ತೆಲಗು ಪ್ರೇಕ್ಷಕರಿಗೆ ಪರಿಚಯವಾದರು. ಅತೀ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಪಡೆದುಕೊಂಡ ನಟಿಯರ ಸಾಲಿಗೆ ಸಮಂತಾ ಸೇರಿಕೊಂಡರು. ಬಳಿಕ ನಾಗಚೈತನ್ಯ ಜೊತೆಗೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಅವರಿಬ್ಬರೂ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನ ಪಡೆದುಕೊಂಡಾಗಿನಿಂತ ಸಮಂತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಆಕೆಯ ವೈಯುಕ್ತಿಕ ಜೀವನದ ಬಗ್ಗೆ ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇನ್ನೂ ಕೆಲವು ತಿಂಗಳುಗಳ ಹಿಂದೆ ಆಕೆ ಮಯೋಸೈಟೀಸ್ ಎಂಬ ಭಯಂಕರ ವ್ಯಾಧಿಗೆ ಗುರಿಯಾದರು. ಬಳಿಕ ಸಿನೆಮಾಗಳಿಗೆ ಮತ್ತೆ ಎಂಟ್ರಿ ಕೊಟ್ಟರು. ಇದೀಗ ಮತ್ತೆ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಇತ್ತೀಚಿಗೆ ಆಕೆ ಶಾಶ್ವತವಾಗಿ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು.

ಇನ್ನೂ ಸಮಂತಾ ಕಳೆದ ಎರಡು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಆಕೆಯದ್ದೇ ತಪ್ಪು ಎಂದು ಅನೇಕ ಆರೋಪಗಳು, ಸೋಷಿಯಲ್ ಮಿಡಿಯಾ ಟ್ರೋಲ್ ಗಳನ್ನು ಎದುರಿಸಿದ್ದರು. ಮಾನಸಿಕ ಒತ್ತಡಕ್ಕೆ ಸಹ ಗುರಿಯಾಗಿದ್ದರು. ಈ ಒತ್ತಡದಿಂದ ಹೊರಬಂದ ಬಳಿಕ ಸಮಂತಾ ಮಾರಣಾಂತಿಕ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾದರು. ಒಂದು ವರ್ಷ ಆಕೆ ಈ ವ್ಯಾದಿಗೆ ಚಿಕಿತ್ಸೆ ಪಡೆದುಕೊಂಡರು. ಬಳಿಕ ಸಿನೆಮಾಗಳಲ್ಲಿ ನಟಿಸಿದರು. ಪುನಃ ಆರೋಗ್ಯದ ದೃಷ್ಟಿಯಿಂದ ಸದ್ಯ ಆಕೆ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಇನ್ನೂ ಸಮಂತಾ ಎರಡನೇ ಮದುವೆಯ ಬಗ್ಗೆ ಆಗಾಗ ಕೆಲವೊಂದು ರೂಮರ್‍ ಗಳೂ ಸಹ ಕೇಳಿಬಂದವು.  ಪೋಷಕರು ಸಹ ಆಕೆಗೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.

ಆದರೆ ಸಮಂತಾಗೆ ಇನ್ನೂ ಮದುವೆಯಾಗುವ ಉದ್ದೇಶವೇ ಇಲ್ಲವಂತೆ. ಒಂಟಿಯಾಗಿಯೇ ಜೀವನ ಸಾಗಿಸಬೇಕೆಂಬ ಉದ್ದೇಶ ಹೊಂದಿದ್ದಾರಂತೆ. ಉಳಿದ ಜೀವನವನ್ನು ನಟನೆ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ ಮೀಸಲಿಡಲಿದ್ದಾರಂತೆ. ಜೊತೆಗೆ ಆಕೆ ತಾಯಿಯಾಗಬೇಕೆಂಬ ಆಸೆ ಸಹ ಇದ್ದು, ಅದಕ್ಕಾಗಿ ಆಕೆ ಇಬ್ಬರು ಮಕ್ಕಳನ್ನು ದತ್ತು ಪಡೆಯಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಇಲ್ಲ.

Most Popular

To Top