ಬೆಡ್ ರೂಂ ವಿಡಿಯೋ ಲೀಕ್ ಮಾಡುವುದಾಗಿ ಪತ್ನಿಯಿಂದಲೇ ಬೆದರಿಕೆ, ಆಕೆಯ ಹಿಸ್ಟರಿ ಕಂಡು ದಂಗಾದ ಪೊಲೀಸರು….!

Follow Us :

ಇಂದಿನ ಸಮಾಜದಲ್ಲಿ ಆಗಾಗ ಹನಿಟ್ಯ್ರಾಪ್ ನಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನೋಡಿರುತ್ತೇವೆ.  ಪ್ರೀತಿ ಪ್ರೇಮ ಎಂದು ನಂಬಿಸಿದ ಕೆಲ ಮಹಿಳೆಯರು ಹನಿಟ್ಯ್ರಾಪ್ ಹೆಸರಿನಲ್ಲಿ ಮೋಸಮಾಡಿ ಲಕ್ಷಾಂತರ ರೂಪಾಯಿ ದೋಚುತ್ತಿರುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ಪತ್ನಿಯೇ ಬೆಡ್ ರೂಂ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಆಕೆಯ ಕಥೆಯನ್ನು ಕೇಳಿದ ಪೊಲೀಸರೇ ದಂಗಾಗಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಸಂಗೀತಾ ದೇವಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಶಿವಂ ಎಂಬ ಪೊಲೀಸ್ ಪೇದೆಯನ್ನು ಮದುವೆಯಾಗಿದ್ದರು. ಶಿವಂಗೆ ಆಕೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಳು. ಪರಿಚಯ ಪ್ರೀತಿಗೆ ತಿರುಗಿ ಕಳೆದ ಜೂನ್ ಮಾಹೆಯಲ್ಲಿ ಇಬ್ಬರೂ ಮದುವೆಯಾಗಿದ್ದರು. ಕೆಲ ದಿನಗಳ ಬಳಿಕ ಆಕೆ ಬೆಡ್ ರೂಂ ನಲ್ಲಿನ ಖಾಸಗಿ ಕ್ಷಣಗಳನ್ನು ವಿಡಿಯೋ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾಳೆ. ಆ ವಿಡಿಯೋಗಳನ್ನು ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಆರೋಪಿ ಸಂಗೀತಾ ಗೆ ಆಕೆಯ ಸಹೋದರ ಹಾಗೂ ಪೋಷಕರೂ ಸಹ ಸಾಥ್ ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ಮದುವೆಯಾದ ಬಳಿಕ ಶಿವಂ ಆರೋಪಿಯ ಪೋಷಕರು ಹಾಗೂ ಸಹೋದರನಿಂದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರಿಂದ ಪದೇ ಪದೇ ಹಣ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡಿದ್ದಾರೆ. ಜೊತೆಗೆ ಪತ್ನಿ ಸಹ ಬೆದರಿಕೆ ಶುರು ಮಾಡಿದ್ದಾಳೆ. 30 ಲಕ್ಷ ಕೊಡದೇ ಇದ್ದರೇ ಬೆಡ್ ರೂಂನ ಖಾಸಗಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಹಾಗೂ ಅತ್ಯಾಚಾರ ಪ್ರಕರಣ ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದಾಳಂತೆ. ಅದರಿಂದ ಬೇಸತ್ತ ಶಿವಂ ಆಕೆಯ ವಿರುದ್ದ ದೂರು ದಾಖಲಿಸಿದ್ದರು. ಪತ್ನಿ ಹಾಗೂ ಆಕೆಯ ಸಹೋದರ, ತಂದೆ ಯನ್ನು ಆರೋಪಿಗಳ ಪಟ್ಟಿಗೆ ಸೇರಿಸಿದ್ದರು.

ಇನ್ನೂ ದೂರು ದಾಖಲಿಸಿಕೊಂಡ ಪೊಲೀಸರು ಸಂಗೀತಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆಯ ಕಥೆ ಕೇಳಿದ ಪೊಲೀಸರೇ ದಂಗಾಗಿದ್ದಾರೆ. ಈ ಹಿಂದೆ ಸಂತ್ರಸ್ತೆ ಸಂಗೀತಾ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಮದುವೆಯಾಗಿ ಇದೇ ಮಾದರಿಯಲ್ಲಿ ಹಣ ವಸೂಲಿ ಮಾಡಿದ್ದಳಂತೆ. ಸೋಷಿಯಲ್ ಮಿಡಿಯಾ ಮೂಲಕ ಪರಿಚಯ ಮಾಡಿಕೊಂಡ ಈಕೆ ಮದುವೆಯಾಗಿ ಬಳಿಕ ಖಾಸಗಿ ವಿಡಿಯೋ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿ ಹಣ ಪೀಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಬೆಡ್ ರೂಂ ವಿಡಿಯೋ ತೋರಿಸಿ ಬೆದರಿಕೆ ಹಾಕು‌ತ್ತಿದ್ದ ಐನಾತಿ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.