Film News

ಮತ್ತೊಬ್ಬ ಯಂಗ್ ಹಿರೋ ಜೊತೆಗೆ ಸಮಂತಾ ರೊಮ್ಯಾನ್ಸ್, ರೊಮ್ಯಾಂಟಿಕ್ ಹಿರೋ ಜೊತೆಗೆ ಸಮಂತಾ ನಟನೆ?

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇದೀಗ ಬಾಲಿವುಡ್ ನಲ್ಲೂ ಸಹ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಶಾಕುಂತಲಂ ಎಂಬ ಪೌರಾಣಿಕ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದು, ದೊಡ್ಡ ಮಟ್ಟದ ಡಿಜಾಸ್ಟರ್‍ ಆಗಿತ್ತು. ಸದ್ಯ ಆಕೆ ಸಿಟಾಡೆಲ್ ಹಾಗೂ ಖುಷಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸಮಂತಾ ತೆಲುಗಿನ ಯಂಗ್ ಅಂಡ್ ರೊಮ್ಯಾಂಟಿಕ್ ಹಿರೋ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದಾರೆಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಸ್ಟಾರ್‍ ನಟಿ ಸಮಂತಾ ಸುಮಾರು ತಿಂಗಳುಗಳ ಕಾಲ ಮಯೋಸೈಟಿಸ್ ಎಂಬ ವ್ಯಾಧಿಗೆ ಗುರಿಯಾಗಿದ್ದರು. ಸಿನೆಮಾಗಳು ಹಾಗೂ ಸೋಷಿಯಲ್ ಮಿಡಿಯಾದಿಂದ ದೂರವಾಗಿದ್ದರು. ಆಕೆಯ ಆರೋಗ್ಯದ ಬಗ್ಗೆ ಅನೇಕ ರೂಮರ್‍ ಗಳೂ ಸಹ ಕೇಳಿಬಂದವು. ಆದರೆ ಆಕೆ ಯಶೋಧ ಸಿನೆಮಾದ ಪ್ರಮೋಷನ್ ಸಮಯದಲ್ಲಿ ತಾನು ಅನುಭವಿಸಿದ ಮಯೋಸೈಟೀಸ್ ಎಂಬ ವ್ಯಾಧಿಯ ಬಗ್ಗೆ ರಿವೀಲ್ ಮಾಡಿದ್ದರು. ಬಳಿಕ ಆಕೆಗೆ ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕ ಸ್ಟಾರ್‍ ಗಳು ಸಹ ಧೈರ್ಯ ತುಂಬುವ ಕೆಲಸ ಮಾಡಿದರು. ಇನ್ನೂ ಮಯೋಸೈಟಿಸ್ ನಿಂದ ಹೊರಬಂದ ಬಳಿಕ ಆಕೆ ಅಭಿನಯದ ಯಶೋಧ ಸಿನೆಮಾ ತೆರೆಗೆ ಬಂತು. ಈ ಸಿನೆಮಾ ಒಳ್ಳೆಯ ಸ್ಪಂಧನೆ ಸಹ ಪಡೆದುಕೊಂಡಿತ್ತು. ಆದರೆ ಬಳಿಕ ಬಿಡುಗಡೆಯಾದ ಶಾಕುಂತಲಂ ಸಿನೆಮಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸೋಲನ್ನು ಕಂಡಿತ್ತು.

ಸದ್ಯ ಸಮಂತಾ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಶಿವ ನಿರ್ಮಾಣ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬರುತ್ತಿದೆ. ಈಗಾಗಲೇ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗಿದೆ. ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಸಿನೆಮಾ ಆಗಿದೆ. ಇನ್ನೂ ಇದೀಗ ಆಕೆ ಮತ್ತೋರ್ವ ಯಂಗ್ ನಟನೊಂದಿಗೆ ನಟಿಸಲಿದ್ದಾರಂತೆ. ಈಗಾಗಲೇ ಪವನ್ ಕಲ್ಯಾಣ್, ಮಹೇಶ್ ಬಾಬು, ಎನ್.ಟಿ.ಆರ್‍, ರಾಮ್ ಚರಣ್ ಸೇರಿದಂತೆ ಅನೇಕ ಹಿರೋಗಳ ಜೊತೆಗೆ ತೆರೆ ಹಂಚಿಕೊಂಡ ಸಮಂತಾ ಇದೀಗ ಮತ್ತೊರ್ವ ಯಂಗ್ ನಟನೊಂದಿಗೆ ನಟಿಸಲಿದ್ದಾರಂತೆ. ಡಿಜೆ ಟಿಲ್ಲು ಫೇಂ ನ ಹಿರೋ ಸಿದ್ದು ಜೊನ್ನಲಗಡ್ಡ ಜೊತೆಗೆ ಸಮಂತಾ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಇನ್ನೂ ಸಮಂತಾ ಸಹ ಆತನೊಂದಿಗೆ ನಟಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ನಂದಿನಿ ರೆಡ್ಡಿ ಹಾಗೂ ಸಿದ್ದು ಜೊನ್ನಲಗಡ್ಡ ಕಾಂಬಿನೇಷನ್ ನಲ್ಲಿ ಸಿನೆಮಾ ಒಂದು ತೆರೆಗೆ ಬರಲಿದೆ. ಈ ಸಿನೆಮಾವನ್ನು ಈಗಾಗಲೇ ಘೋಷಣೆ ಸಹ ಮಾಡಿದ್ದಾರೆ. ಇದೇ ಸಿನೆಮಾದಲ್ಲೇ ಸಿದ್ದು ಜೊತೆಗೆ ಸಮಂತಾ ನಟಿಸಲಿದ್ದಾರಂತೆ. ಸಿನಿರಂಗದಲ್ಲಿ ರೊಮ್ಯಾಂಟಿಕ್ ಹಿರೋ ಎಂದೇ ಖ್ಯಾತಿ ಪಡೆದುಕೊಂಡ ಸಿದ್ದು ಜೊನ್ನಲಗಡ್ಡ ಜೊತೆಗೆ ಸಮಂತಾ ನಟಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.

Most Popular

To Top