ಟ್ರೋಲರ್ ಗಳಿಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಮೆಗಾ ಡಾಟರ್ ನಿಹಾರಿಕಾ ಕೊಣಿದೆಲಾ, ಕೆಲಸಕ್ಕೆ ಬಾರದ ಟ್ರೋಲ್ಸ್ ಗೆ ಕಿವಿಗೊಡುವುದಿಲ್ಲ ಎಂದನ ನಟಿ…..!

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಿಗೆ ಟ್ರೋಲರ್‍ ಗಳ ಕಾಟ ತಪ್ಪಿದ್ದಲ್ಲ. ಸಣ್ಣ ಕಲಾವಿದರಿಂದ ಹಿಡಿದು ದೊಡ್ಡ ದೊಡ್ಡ ಕಲಾವಿದರೂ ಸಹ ವಿವಿಧ ರೀತಿಯ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಕೆಲವರಂತೂ ಟ್ರೀಲ್ ಗಳ ಬಗ್ಗೆ ತಲೆಗೆ ಹಾಕಿಕೊಳ್ಳುವುದಿಲ್ಲ. ಟ್ರೋಲ್ ಗಳು ಮಿತಿಮೀರಿದರೇ ಕೆಲವೊಂದು ಕೊಂಚ ಖಾರವಾಗಿಯೇ ರಿಯಾಕ್ಟ್ ಆಗುತ್ತಿರುತ್ತಾರೆ. ಇದೀಗ ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ಸಹ ತನ್ನ ಮೇಳೆ ಬರುತ್ತಿರುವ ಟ್ರೋಲ್ ಗಳಿಗೆ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ. ಕೆಲಸಕ್ಕೆ ಬಾರದ ಟ್ರೋಲ್ಸ್ ಗಳನ್ನು ಕವಿಗೆ ಹಾಕಿಕೊಳ್ಳುವಂತಹ ಅವಶ್ಯಕತೆಯೇ ಇಲ್ಲ ಎಂದು ಆಕೆ ಹೇಳಿದ್ದಾರೆ.

ಮೆಗಾ ಕುಟುಂಬದ ನಟಿ ಕಂ ನಿರ್ಮಾಪಕಿ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ರವರ ವಿವಾಹ ಅದ್ದೂರಿಯಾಗಿ ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಎರಡು ವರ್ಷಗಳ ನಂತರ ಈ ಜೋಡಿಯ ನಡುವೆ ವಿಬೇದಗಳು ಸೃಷ್ಟಿಯಾಗಿ ಅವರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇದೆ. ಇದೀಗ ಆಕೆ ಈ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನನ್ನ ವಿರುದ್ದ ಬರುವಂತಹ ರೂಮರ್‍ ಗಳನ್ನು ನಾನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಕಾಮೆಂಟ್ ಗಳನ್ನು ಸಹ ನೋಡುವುದಿಲ್ಲ ಎಂದು ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಬಳಿಕ ನಿಹಾರಿಕಾ ಮತ್ತೆ ಸಿನೆಮಾಗಳತ್ತ ಮುಖ  ಮಾಡಿದ್ದಾರೆ. ಇದೀಗ ಆತ ಡೆಡ್ ಫಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿರೀಸ್ ಮೇ.19 ರಿಂದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸಿರೀಸ್ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿದ್ದು, ಪ್ರಮೋಷನ್ ನಿಮಿತ್ತ ಆಕೆ ವಿವಿಧ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲೇ ಆಕೆ ತನ್ನ ವಿರುದ್ದದ ಟ್ರೋಲ್ ಗಳಿಗೆ ರಿಯಾಕ್ಟ್ ಆಗಿದ್ದಾರೆ.  ಕೆಲಸ ಕಾರ್ಯ ಇಲ್ಲದವರು ಇಂತಹ ಟ್ರೋಲ್ಸ್ ಮಾಡುತ್ತಾರೆ. ಅಂತಹವರ ಬಗ್ಗೆ ನಾನು ತಲೆಗೆ ಹಾಕಿಕೊಳ್ಳುವುದಿಲ್ಲ. ನಾವು ಅವಶ್ಯಕತೆಯಿಲ್ಲದಂತಹವುಗಳಿಗೆ ಪ್ರಾಮುಖ್ಯತೆ ನೀಡುತ್ತೇವೆ. ಎಲ್ಲಾ ಕಡೆ ಇಡಿಯಟ್ಸ್ ಇರುತ್ತಾರೆ. ಅವರನ್ನು ನಾವು ಪರಿಗಣಿಸಬಾರದು. ನಾನು ಅಂತಹ ಟ್ರೋಲ್ ಗಳಿಗೆ ಕಿವಿಕೊಡುವುದಿಲ್ಲ ಎಂದಿದ್ದಾರೆ,

ನನನ್ನು ಇಷ್ಟಪಡುವಂತಹವರು ತುಂಬಾ ಮಂದಿ ಇದ್ದಾರೆ. ನನಗೂ ಇಷ್ಟವಾದವರು ಸಹ ಇದ್ದಾರೆ. ನನಗೆ ಸಮಯ ದೊರೆತಾಗ ನಾನು ಅವರೊಂದಿಗೆ ಸಮಯ ಕಳೆಯುತ್ತೇನೆ. ಯಾರೋ ಕೆಲಸಕ್ಕೆ ಬಾರದವನ ಬಗ್ಗೆ ನಾನು ಏಕೆ ಯೋಚನೆ ಮಾಡಬೇಕು. ಈ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ಬರುವಂತಹ ಕಾಮೆಂಟ್ ಗಳನ್ನು ನೋಡುತ್ತಿದ್ದೆ. ಇದೀಗ ಅಂತಹವನ್ನು ನಾನು ಕಿವಿಗೆ ಹಾಕಿಕೊಳ್ಳುವುದಿಲ್ಲ ಆದ್ದರಿಂದಲೇ ನಾನು ಸೋಷಿಯಲ್ ಮಿಡಿಯಾದಲ್ಲಿ ಬರುವಂತಹ ಕಾಮೆಂಟ್ ಗಳನ್ನು ಪರಗಣಿಸಲ್ಲ ಎಂದು ತನ್ನ ವಿರುದ್ದ ಟ್ರೋಲ್ ಮಾಡುವವರಿಗೆ ಮುಟ್ಟಿ ನೋಡುವಂತಹ ಕೌಂಟರ್‍ ಕೊಟ್ಟಿದ್ದಾರೆ.