Film News

ಮತ್ತೊಂದು ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಸ್ಟಾರ್ ನಟಿ ಸಮಂತಾ, ಆಕೆಗಿರುವ ವ್ಯಾಧಿಯಾದರೂ ಏನು ಗೊತ್ತಾ?

ಕೆರಿಯರ್‍ ನಲ್ಲಿ ಅನೇಕ ಏಳು ಬೀಳುಗಳನ್ನು ಕಂಡು ಸವಾಲುಗಳನ್ನು ಎದುರಿಸಿದ ನಟಿ ಸಮಂತಾ ಅನೇಕ ಮಹಿಳೆಯರಿಗೆ ಮಾದರಿ ಎಂದು ಹೇಳಬಹುದು. ಕೆರಿಯರ್‍ ನಲ್ಲಿ ಅನೇಕ ಗೆಲುವುಗಳನ್ನು ಕಂಡ ಸಮಂತಾ, ವೈಯುಕ್ತಿಕ ಜೀವನದಲ್ಲಿ ಮಾತ್ರ ತುಂಬಾನೆ ಸಮಸ್ಯೆಗಳನ್ನು ಎದುರಿದ್ದರು. ಕಳೆದೆರಡು ವರ್ಷಗಳ ಹಿಂದೆಯಷ್ಟೆ ಆಕೆ ಮಯೋಸೈಟೀಸ್ ಎಂಬ ಮಾರಾಣಾಂತಿಕ ಕಾಯಿಲೆಗೆ ತುತ್ತಾಗಿದ್ದು, ಇದೀಗ ಆಕೆ ಮತ್ತೊಂದು ವ್ಯಾಧಿಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ಸಮಂತಾ ಕಳೆದ ಮೂರು ವರ್ಷಗಳಿಂದ ತನ್ನ ವೈಯುಕ್ತಿಕ ಜೀವನದಲ್ಲಿ ತುಂಬಾನೆ ಸಮಸ್ಯೆಗಳನ್ನು ಎದುರಿಸು‌ತ್ತಿದ್ದಾರೆ. 2021ರಲ್ಲಿ ಕುಟುಂಬದಲ್ಲಿ ಮನಸ್ಥಾಪಗಳು ಎದುರಾದ ಹಿನ್ನೆಲೆಯಲ್ಲಿ ಆಕೆ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನ ಕಾರಣದಿಂದ ಆಕೆ ಡಿಪ್ರೇಷನ್ ಗೆ ಗುರಿಯಾದರು. ಈ ಕಾರಣದಿಂದ ಆಕೆ ಅನೇಕ ವಿಮರ್ಶೆಗಳಿಗೂ ಸಹ ಗುರಿಯಾಗಿದ್ದರು. ಸಮಂತಾ ವರ್ತನೆಯ ಕಾರಣದಿಂದಲೇ ವಿಚ್ಚೇದನ ಪಡೆದುಕೊಂಡರು ಎಂದೂ ಸಹ ಆಕೆಯ ಮೇಲೆ ಆರೋಪಗಳನ್ನು ಮಾಡಿದರು. ಇನ್ನೂ ಈ ಡಿಪ್ರೇಷನ್ ನಿಂದ ಹೊರಬರುವ ಹೊತ್ತಿನಲ್ಲೇ ಆಕೆ ಮಯೋಸೈಟಿಸ್ ಎಂಬ ವ್ಯಾಧಿಗೆ ಗುರಿಯಾಗಿದ್ದರು. ಸುಮಾರು ಒಂದು ವರ್ಷದ ಕಾಲ ಆಕೆ ಈ ವ್ಯಾಧಿಯಿಂದ ಬಳಲುತ್ತಿದ್ದರು. ಸುಮಾರು ಆರು ತಿಂಗಳ ಕಾಲ ಆಕೆ ಮನೆಯಲ್ಲೇ ಉಳಿಯಬೇಕಾಗಿತ್ತು.

ಇನ್ನೂ ಸಮಂತಾ ಮಯೋಸೈಟೀಸ್ ವ್ಯಾಧಿಗೆ ಚಿಕಿತ್ಸೆ ಪಡೆಯಲು ಆಕೆ ಸುಮಾರು ತಿಂಗಳ ಕಾಲ ಯುದ್ದವ್ನನೇ ಮಾಡಿದ್ದರು. ಇದೀಗ ಆಕೆ ಮಯೋಸೈಟೀಸ್ ವ್ಯಾಧಿಯಿಂದ ಹೊರಬಂದು ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಮತ್ತೊಂದು ವ್ಯಾಧಿಯಿಂದ ಬಳಲುತ್ತಿದ್ದಾರಂತೆ. ಸಮಂತಾಗೆ ಹೂಗಳು ಎಂದರೇ ತುಂಬಾ ಅಲರ್ಜಿಯಂತೆ. ಹೂಗಳನ್ನು ಮುಟ್ಟಿದ್ದರೂ, ವಾಸನೆ ನೋಡಿದರೂ ಆಕೆಗೆ ಆಗುವುದಿಲ್ಲವಂತೆ. ಈ ವಿಚಾರವನ್ನು ಸಮಂತಾ ಈ ಹಿಂದೆ ಸಹ ಹೇಳಿದ್ದರು. ಸಮಂತಾ ಆರೋಗ್ಯದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರುತ್ತಾರೆ. ಆರ್ಗಾನಿಕ ಊಟ ಸೇವಿಸುತ್ತಾರೆ. ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೆ. ಆದರೂ ಸಹ ಆಕೆ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

ಇನ್ನೂ ಸಮಂತಾ ಸಿನಿ ಕೆರಿಯರ್‍ ವಿಚಾರಕ್ಕೆ ಬಂದರೇ ಕೊನೆಯದಾಗಿ ಆಕೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಪಡೆದುಕೊಂಡಿತ್ತು. ಜೊತೆಗೆ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಸಹ ಕಾಣಿಸಿಕೊಂಡಿದ್ದು, ಇದು ಪೋಸ್ಟ್ ಪ್ರೊಡಕ್ಷನ್ ನಲ್ಲಿದೆ. ಆರೋಗ್ಯದ ಕಾರಣದಿಂದ ಆಕೆ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

Most Popular

To Top