Film News

ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟ ಮಹಾನಟಿ ಕೀರ್ತಿ ಸುರೇಶ್, ಬಾಲಿವುಡ್ ಸಿನೆಮಾಗಾಗಿ ಸೀರೆಯಲ್ಲಿ ಮಿಂಚಿದ ಬ್ಯೂಟಿ…….!

ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್ ಸದ್ಯ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಮೊದಲಿಗೆ ಹೋಮ್ಲಿಯಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಶೋ ಮಾಡುತ್ತಿದ್ದಾರೆ. ಗ್ಲಾಮರ್‍ ಪ್ರದರ್ಶನಕ್ಕೆ ಇರುವಂತಹ ಎಲ್ಲಾ ಬೌಂಡರಿಗಳನ್ನೂ ಸಹ ಮೀರಿ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಮೊದಲು ಸಾಂಪ್ರದಾಯಿಕ ಬಟ್ಟೆಗಳಲ್ಲಿ ದರ್ಶನ ಕೊಟ್ಟ ಕೀರ್ತಿ ಇದೀಗ ವಿಭಿನ್ನ ಡ್ರೆಸ್ ಗಳ ಮೂಲಕ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ಸಿನೆಮಾಗಾಗಿ ಆಕೆ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್, ಸದ್ಯ ತೆಲುಗು ತಮಿಳು, ಮಲಯಾಳಂ ಸಿನೆಮಾಗಳಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಇದೀಗ ಬಾಲಿವುಡ್ ನಲ್ಲೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದು, ಬಾಲಿವುಡ್ ನಲ್ಲಿ ತನ್ನ ಹವಾ ಸೃಷ್ಟಿ ಮಾಡಲಿದ್ದಾರೆ. ತೆಲುಗಿನಲ್ಲಿ ಮಹಾನಟಿ ಸಿನೆಮಾಗಾಗಿ ಆಕೆ ರಾಷ್ಟ್ರೀಯ ಅವಾರ್ಡ್ ಸಹ ಪಡೆದುಕೊಂಡರು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡರು. ಆದರೆ ಆಕೆಯ ಕೆರಿಯರ್‍ ಕೊಂಚ ಡಲ್ ಆಗಿತ್ತು. ಈ ಕಾರಣದಿಂದ ಆಕೆ ಕೊಂಚ ಗ್ಲಾಮರ್‍ ಡೋಸ್ ಏರಿಸಿದರು. ಸರ್ಕಾರು ವಾರಿ ಪಾಠ ಸಿನೆಮಾದಲ್ಲಂತೂ ಆಕೆ ಮತಷ್ಟು ಗ್ಲಾಮರ್‍ ಶೋ ಮಾಡಿದರು. ಬಳಿಕ ಆಕೆಯ ಕ್ರೇಜ್ ಸಹ ಬಯಲಾಯಿತು. ಬಳಿಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಸಹ ತೆಕ್ಕೆಗೆ ಹಾಕಿಕೊಂಡರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ.

ನಟಿ ಕೀರ್ತಿ ಸುರೇಶ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಆಕೆ ಬಾಲಿವುಡ್‌ ಗೂ ಎಂಟ್ರಿ ಕೊಡಲಿದ್ದಾರೆ. ಇದೀಗ ಈ ಸಿನೆಮಾದ ಅಪ್ಡೇಟ್ ಸಹ ಸಿಕ್ಕಿದೆ. ಕೀರ್ತಿ ಸುರೇಶ್ ಬಾಲಿವುಡ್ ಸ್ಟಾರ್‍ ನಟ ವರುಣ್ ಧವನ್ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದೆ. VD18 ಟೈಟಲ್ ನಡಿ ಕೀರ್ತಿ ಸುರೇಶ್ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾವನ್ನು ಸ್ಟಾರ್‍ ನಿರ್ದೇಶಕ ಅಟ್ಲೀ ನಿದೇರ್ಶನ ಮಾಡುತ್ತಿದ್ದಾರೆ. ಈ ಸಿನೆಮಾದ ಮೇಲೆ ಸೌತ್ ಸಿನಿ ರಸಿಕರೂ ಸಹ ತುಂಬಾನೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದೆ. ಈ ಹಾದಿಯಲ್ಲೇ ಕೀರ್ತಿ ಸುರೇಶ್ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಯೂಟಿಪುಲ್ ಸೀರೆಯಲ್ಲಿ ಆಕೆ ಸ್ಟನ್ನಿಂಗ್ ಲುಕ್ಸ್ ಕೊಟ್ಟಿದ್ದಾರೆ. ಈ ಪೊಟೋಗಳಿಗೆ ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್ಸ್ ಮಾಡುತ್ತಾ ಬಾಲಿವುಡ್ ನಲ್ಲಿ ಆಕೆ ಸಕ್ಸಸ್ ಕಾಣಲಿ ಎಂದು ಶುಭ ಹಾರೈಸುತ್ತಿದ್ದಾರೆ.

Most Popular

To Top