ಸ್ಟಾರ್ ನಟಿ ಸಮಂತಾಗೆ ಮತ್ತೊಂದು ಆರೋಗ್ಯ ಸಮಸ್ಯೆ? ಅದಕ್ಕಾಗಿಯೇ ಅಮೇರಿಕಾಗೆ ಹೋದ್ರಾ?

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ಸದಾ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಆಕೆ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಬಳಿಕ ಆಕೆ ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದು, ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದರು. ಇದೀಗ ಆಕೆ ಮತ್ತೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆ ಕಾರಣದಿಂದಲೇ ಆಕೆ ಅಮೇರಿಕಾಗೆ ಹೋಗಿದ್ದರು ಎಂಬ ಸುದ್ದಿಯೊಂದು ಹರಿಹಾಡುತ್ತಿದೆ.

ವಿಚ್ಚೇದನದ ಬಳಿಕ ಸಮಂತಾ ತುಂಬಾನೆ ಮಾನಸಿಕ ಹಿಂಸೆಗೆ ಗುರಿಯಾಗಿದ್ದರು. ವಿಚ್ಚೇದನ ಪಡೆದುಕೊಂಡ ಬಳಿಕ ಆಕೆ ತನ್ನ ಸಂಪೂರ್ಣ ಗಮನವನ್ನು ಸಿನೆಮಾಗಳ ಮೇಲೆ ಇಟ್ಟಿದ್ದರು. ಸಿನೆಮಾಗಳಲ್ಲಿ ಮತ್ತೆ ಪುಲ್ ಬ್ಯುಸಿಯಾಗಿರುವಾಗಲೇ ಆಕೆ ಮಯೋಸೈಟೀಸ್ ಎಂಬ ಮಾರಾಣಾಂತಿಕ ಕಾಯಿಲೆಗೆ ಗುರಿಯಾಗಿದ್ದರು. ಇದರಿಂದ ತುಂಭಾನೆ ಸಮಸ್ಯೆಗಳನ್ನು ಎದುರಿಸಿದ ಸಮಂತಾ ಈ ವ್ಯಾಧಿ ಸಂಪೂರ್ಣವಾಗಿ ಗುಣಮುಖ ಆಗುವುದಕ್ಕೂ ಮುಂಚೆ ತಾನು ಒಪ್ಪಿಕೊಂಡ ಸಿನೆಮಾಗಳನ್ನು ಪೂರ್ಣಗೊಳಿಸಿದರು. ಬಳಿಕ ಮತ್ತೆ ಆಕೆ ಒಂದು ವರ್ಷ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಂದ ದೂರ ಉಳಿದರು. ಮಯೋಸೈಟೀಸ್ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗಲು ಅಮೇರಿಕಾಗೆ ಹೋದರು ಎಂದು ಹೇಳಲಾಗುತ್ತಿತ್ತು.

ಇನ್ನೂ ಸಮಂತಾ ಅಮೇರಿಕಾಗೆ ಮಯೋಸೈಟೀಸ್ ವ್ಯಾಧಿಯಿಂದ ಸಂಪೂರ್ಣ ಗುಣಮುಖರಾಗಲು ಹೋದರು ಎಂದು ಹೇಳಲಾಗಿತ್ತು.  ಆದರೆ ಸಮಂತಾ ಅಮೇರಿಕಾಗೆ ಹೋಗಿದ್ದು, ಮಯೋಸೈಟೀಸ್ ವ್ಯಾಧಿಗಾಗಿ ಅಲ್ಲ ಆಕೆ ಬೇರೊಂದು ಆರೋಗ್ಯ ಸಮಸ್ಯೆಯಿಂದ ಅಮೇರಿಕಾಗೆ ಹೋಗಿದ್ದಾರೆ ಎಂದು ಇದೀಗ ಸುದ್ದಿ ಕೇಳಿಬರುತ್ತಿದೆ. ಇನ್ನೂ ಮಯೋಸೈಟೀಸ್ ಗಿಂತಲೂ ಈ ವ್ಯಾಧಿ ಅಷ್ಟೊಂದು ಭಯಂಕರವಾಗದೇ ಇದ್ದರೂ ಸಹ ಆಕೆ ಹೆಚ್ಚು ವರ್ಕೌಟ್ಸ್ ಮಾಡಿದ ಕಾರಣದಿಂದ ಆಕೆ ಮತ್ತೊಂದು ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಕ್ರಿಯೇಟ್ ಮಾಡಿದೆ. ಇನ್ನೂ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಸುಳ್ಳು ಎಂಬುದನ್ನು ಆಕೆ ಸ್ಪಷ್ಟಪಡಿಸಬೇಕಿದೆ. ಆದರೆ ಸಮಂತಾ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇನ್ನೂ ಸಮಂತಾ ಕೊನೆಯದಾಗಿ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಸಹ ಕಂಡಿದೆ. ಇನ್ನೂ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಸಹ ನಟಿಸಿದ್ದು ಶೀಘ್ರದಲ್ಲೇ ಇದು ಸಹ ಸ್ಟ್ರೀಮಿಂಗ್ ಆಗಲಿದೆ. ಆರೋಗ್ಯದ ದೃಷ್ಟಿಯಿಂದ ಸಮಂತಾ ಒಂದು ವರ್ಷ ವಿರಾಮ ಪಡೆದುಕೊಂಡಿದ್ದಾರೆ.