ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಬಾಲಿವುಡ್ ನಟಿ ಸ್ವರಾಭಾಸ್ಕರ್, ವೈರಲ್ ಆದ ಪೊಟೋಸ್….!

ಹಿಂದಿ ಸಿನಿರಂಗದ ಬೋಲ್ಡ್ ಬ್ಯೂಟಿಗಳಲ್ಲಿ ಸ್ವರಾ ಭಾಸ್ಕರ್‍ ಸಹ ಒಬ್ಬರಾಗಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಮೂಲಕ ಆಕೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಇತ್ತೀಚಿಗಷ್ಟೆ ಆಕೆ ಯುವರಾಜಕಾರಣಿ ಫಹಾದ್ ಅಹ್ಮದ್ ಎಂಬಾತನನ್ನು ಮದುವೆಯಾದರು. ಮದುವೆಯ ಕಾರಣದಿಂದಲೂ ಆಕೆ ತುಂಬಾ ವಿಮರ್ಶೆಗಳನ್ನು ಎದುರಿಸಿದ್ದರು. ಮದುವೆಯಾದ ಏಳು ತಿಂಗಳಲ್ಲೇ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದು, ಈ ಖುಷಿಯನ್ನು ಸ್ವರಾ ಭಾಸ್ಕರ್‍ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ತನ್ನದೇ ಆದ ಸ್ಪೇಷಲ್ ಕ್ರೇಜ್ ಪಡೆದುಕೊಂಡ ಬ್ಯೂಟಿ ಸ್ವರ ಭಾಸ್ಕರ್‍ ಸೊಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಅನೇಕ ಸಿನೆಮಾಗಳಲ್ಲಿ ಬೋಲ್ಡ್ ಅವತಾರದಲ್ಲೇ ಕಾಣಿಸಿಕೊಂಡು ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಸದಾ ಮೋದಿ ಸರ್ಕಾರದ ವಿರುದ್ದ ವಿಮರ್ಶೆಗಳನ್ನು ಮಾಡುತ್ತಾ ಸುದ್ದಿಯಲ್ಲಿರುತ್ತಾರೆ. ನಟಿ ಸ್ವರಾ ಭಾಸ್ಕರ್‍ ಕಳೆದ ಫೆ.16 ರಂದು ಯುವ ರಾಜಕಾರಣಿ ಫಹಾದ್ ಅಹ್ಮದ್ ಎಂಬಾತನನ್ನು ವಿವಾಹವಾದರು. ಜನವರಿ 6 ರಂದೇ ಸ್ವರಾ ಮದುವೆಯಾಗಿದ್ದರು. ಕೋರ್ಟಿನಲ್ಲಿ ಈಕೆ ಮದುವೆಯಾಗಿದ್ದರು. ಆದರೆ ಫೆ.16 ರಂದು ಆಕೆ ಪೊಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ.

ಸದಾ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುವ ಸ್ವರಾ ಭಾಸ್ಕರ್‍ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದು, ಸಂತಸವನ್ನು ಆಕೆ ಟ್ವಿಟರ್‍ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಆಕೆ ತನ್ನ ಪತಿ ಫಹಾದ್ ಅಹ್ಮದ್ ಹಾಗೂ ಮಗು ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಮಗು ಜನಿಸಿದ ಕಾರಣದಿಂದ ತುಂಬಾನೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಮಗು ಹಾಗೂ ಸ್ವರಾಭಾಸ್ಕರ್‍ ಗೆ ಶುಭಾಷಯಗಳನ್ನು ಕೋರುತ್ತಿದ್ದಾರೆ.

ಇನ್ನೂ ಸೆ.23 ರಂದು ಸ್ವರಾಭಾಸ್ಕರ್‍ ಮಗುವಿಗೆ ಜನ್ಮ ಕೊಟ್ಟರು. ಮಗಳಿಗೆ ಆಕೆ ರುಬಿಯಾ ಎಂದು ಹೆಸರನ್ನಿಡುವುದಾಗಿಯೂ ಸಹ ತಿಳಿಸಿದ್ದಾರೆ. ಕಳೆದ ಮಾರ್ಚ್ ನಲ್ಲಿ ಸ್ವರಾ ಭಾಸ್ಕರ್‍ ಬೇಬಿ ಬಂಪ್ ಪೊಟೋಶೂಟ್ಸ್ ಸಹ ವೈರಲ್ ಆಗಿತ್ತು. ಇದೀಗ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಖುಷಿಯನ್ನು ಸೋಷಿಯಲ್ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳ ಜೊತೆಗೆ ಸಿನೆಮಾ ಸೆಲೆಬ್ರೆಟಿಗಳು ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ.