ಬಾಹುಬಲಿ ಪ್ರಭಾಸ್ ಜೊತೆಗೆ ನಟಿಸಲಿದ್ದಾರಂತೆ ಕನ್ನಡ ಬ್ಯೂಟಿ ಶ್ರೀಲಿಲಾ, ವೈರಲ್ ಆದ ಹಾಟ್ ಟಾಪಿಕ್…!

Follow Us :

ಸೌತ್ ಸಿನಿರಂಗದಲ್ಲಿ ಸ್ಯಾಂಡಲ್ ವುಡ್ ನಟಿಯರ ಹವಾ ಜೋರಾಗಿದೆ ಎಂದೇ ಹೇಳಬಹುದಾಗಿದೆ. ಕನ್ನಡದ ನಟಿ ಶ್ರೀಲೀಲಾ ತೆಲುಗು ಸಿನೆಮಾಗಳಲ್ಲಿ ಭಾರಿ ಕ್ರೇಜ್ ಪಡೆದುಕೊಂಡು ಭಾರಿ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸೌತ್ ನಲ್ಲಿ ಅನೇಕ ಸ್ಟಾರ್‍ ನಟಿಯರಿಗೆ ಗಟ್ಟಿ ಪೈಪೋಟಿಯನ್ನೇ ನೀಡುತ್ತಿದ್ದಾರೆ ಶ್ರೀಲೀಲಾ. ಸೀನಿಯರ್‍ ಹಾಗೂ ಯಂಗ್ ಹಿರೋಗಳ ಸಿನೆಮಾಗಳೂ ಸೇರಿ ಶ್ರೀಲೀಲಾ ಒಟ್ಟು 9 ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆ ಪ್ರಭಾಸ್ ಜೊತೆಗೆ ನಟಿಸಲಿದ್ದಾರೆ ಎಂಬ ಕ್ರೇಜಿ ಸುದ್ದಿಯೊಂದು ಹಾಟ್ ಟಾಪಿಕ್ ಆಗಿದೆ.

ಕನ್ನಡ ಸಿನಿಮಾಗಳ ಮೂಲಕ ಫೇಂ ಪಡೆದುಕೊಂಡ ಯಂಗ್ ಬ್ಯೂಟಿ ಶ್ರೀಲೀಲಾ ಇದೀಗ ತೆಲುಗು ಸಿನೆಮಾಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದಾರೆ. ಟಾಲಿವುಡ್ ನ ಸ್ಟಾರ್‍ ನಟಿಯರಿಗೂ ಸಹ ಪೈಪೋಟಿ ನೀಡುತ್ತಿದ್ದಾರೆ. ಪೆಳ್ಳಿಸಂದD ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರೀಲೀಲಾ ಮಾಸ್ ಮಹಾರಾಜ ರವಿತೇಜ ಜೊತೆಗೆ ಧಮಾಕಾ ಸಿನೆಮಾದ ಮೂಲಕ ಭಾರಿ ಫೇಂ ಪಡೆದುಕೊಂಡರು. ಈ ಸಿನೆಮಾ ಸೂಪರ್‍ ಹಿಟ್ ಆಗಿದ್ದು, ಈ ಸಿನೆಮಾದ ಬಳಿಕ ಆಕೆ ಓವರ್‍ ನೈಟ್ ಸ್ಟಾರ್‍ ಡಂ ಪಡೆದುಕೊಂಡರು. ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದು, ಒಪ್ಪಿಕೊಂಡ ಸಿನೆಮಾಗಳ ಡೇಟ್ಸ್ ಅಡ್ಜಸ್ಟ್ ಮಾಡಲಾರದೆ ಹರಸಾಹಸ ಮಾಡುತ್ತಿದ್ದಾರೆ. ಇದೀಗ ಆಕೆ ಪ್ರಭಾಸ್ ಜೊತೆಗೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಟಾಲಿವುಡ್ ನಿರ್ದೇಶಕ ಹನು ರಾಘವಪೂಡಿ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಹೊಸ ಪ್ರಾಜೆಕ್ಟ್ ಪ್ರಾರಂಭವಾಗಲಿದೆ. ಈ ಸಿನೆಮಾದಲ್ಲಿ ಪ್ರಭಾಸ್ ಜೊತೆಗೆ ಶ್ರೀಲೀಲಾ ಹೆಜ್ಜೆ ಹಾಕಲಿದ್ದಾರಂತೆ. ಈಗಾಗಲೇ ಶ್ರೀಲೀಲಾರವರನ್ನು ಸಹ ಚಿತ್ರತಂಡ ಭೇಟಿಯಾಗಿದ್ದು, ಆಕೆ ಸಹ ಒಪ್ಪಿದ್ದಾರಂತೆ. ಸೀತಾರಾಮಂ ಸಿನೆಮಾದ ಮೂಲಕ ಭಾರಿ ಹಿಟ್ ಪಡೆದುಕೊಂಡ ಹನು ರಾಘವಪೂಡಿ ಇದೀಗ ಪ್ರಭಾಸ್ ಜೊತೆಗೆ ಸಿನೆಮಾ ಮಾಡಲಿದ್ದಾರೆ. ಈಗಾಗಲೇ ಸಿನೆಮಾದ ಕಥೆಯ ಬಗ್ಗೆ ಚರ್ಚೆ ಮುಗಿದಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಸಿನೆಮಾ ನಿರ್ಮಾಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಈ ಸಿನೆಮಾ ವರ್ಲ್ಡ್ ವಾರ್‍ ಪಿರಿಯಡ್ ಡ್ರಾಮಾ ಕಥನವನ್ನು ಒಳಗೊಂಡ ಸಿನೆಮಾ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್‌ ಸಹ ಮುಗಿದಿದ್ದು, ಮುಂದಿನ ವರ್ಷ ಮೊದಲಿನಲ್ಲೆ ಶೂಟಿಂಗ್ ಸಹ ಆರಂಭವಾಗಲಿದೆ ಎನ್ನಲಾಗಿದೆ. ಸದ್ಯ ಈ ಸಿನೆಮಾಗೆ ಸಂಬಂಧಿಸಿದಂತೆ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ನಿರ್ದೇಶಕ ಹನು ರಾಘುವಪೂಡಿ ಬ್ಯುಸಿಯಾಗಿದ್ದಾರೆ. ಇನ್ನೂ ಶ್ರೀಲೀಲಾ ಹಾಗೂ ರಾಮ್ ಕಾಂಬಿನೇಷನ್ ನ ಸ್ಕಂಧ ಸಿನೆಮಾ ಸಹ ಬಿಡುಗಡೆಯಾಗಲಿದ್ದು, ಸಿನೆಮಾ ಪ್ರಮೋಷನ್ ಸಹ ಜೋರಾಗಿಯೇ ನಡೆಯುತ್ತಿದೆ.